ವೀಕೆಂಡ್ ಕಫ್ರ್ಯೂ: ಆಹಾರ ಪಾರ್ಸಲ್ ಸರ್ವಿಸ್ ಭಾರೀ ಬೇಡಿಕೆ
ಮೈಸೂರು

ವೀಕೆಂಡ್ ಕಫ್ರ್ಯೂ: ಆಹಾರ ಪಾರ್ಸಲ್ ಸರ್ವಿಸ್ ಭಾರೀ ಬೇಡಿಕೆ

April 25, 2021

ಮೈಸೂರು, ಏ.24(ಎಂಕೆ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಜಾರಿಗೊಂಡಿದೆ. ಇದೇ ವೇಳೆ ಬೇಕರಿ, ಹೋಟೆಲ್, ರೆಸ್ಟೋ ರೆಂಟ್‍ಗಳಲ್ಲಿ ಆಹಾರದ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಿದ್ದರಿಂದ ಶನಿವಾರ ಮೈಸೂರಿನಲ್ಲಿ ಆನ್ ಲೈನ್ ತಿಂಡಿ-ತಿನಿಸುಗಳ ಸರಬ ರಾಜು ಸೇವೆ ಓದಗಿಸುವ ಸ್ವಿಗ್ಗಿ, ಜೊಮ್ಯಾಟೊ ಕಂಪನಿಗಳ ಪ್ರತಿನಿಧಿ ಗಳ ಸಂಚಾರ ಜೋರಾಗಿತ್ತು.

ಆನ್‍ಲೈನ್ ಮೂಲಕ ಊಟ, ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡುವವರ ಮನೆ ಬಾಗಿಲಿಗೇ ಪಾರ್ಸಲ್ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೊ, ಉಬೆರ್ ಮತ್ತಿತರೆ ಸೇವಾ ಸಂಸ್ಥೆಗಳ ಸಿಬ್ಬಂದಿ ಮಾಮಾಲಿ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಪಾರ್ಸಲ್ ಸೇವೆ ಒದಗಿಸಿದರು.

ಸಾಮಾನ್ಯ ದಿನದಲ್ಲಿ 4-5 ಆರ್ಡರ್ ಇರುತ್ತಿದ್ದವು. ವೀಕೆಂಡ್ ಕಫ್ರ್ಯೂ ಇರುವುದರಿಂದ ಮನೆಯಿಂದ ಹೊರ ಹೋಗಲಾಗದ್ದಕ್ಕೆ ಹೆಚ್ಚಿನ ಜನರು ಮನೆಗೇ ಊಟ-ತಿಂಡಿ ತರಿಸಿಕೊಳ್ಳುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 8 ಮನೆಗೆ ಊಟ ತಲುಪಿಸಿದ್ದೇನೆ ಎಂದು ಜೊಮ್ಯಾಟೊದ ಮಹೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಬಳಸಿ, ಗ್ರಾಹಕರಿಂದ ಅಂತರ ಕಾಯ್ದುಕೊಂಡು ಸೇವೆ ನೀಡುತ್ತಿದ್ದೇವೆ. ಪೊಲೀಸರು ಉತ್ತಮ ಸಹಕಾರ ನೀಡಿದ್ದಾರೆ. ನಮ್ಮ ವಾಹನಗಳನ್ನು ತಡೆದು ನಿಲ್ಲಿಸಿದರೂ, ವಿಚಾರಿಸಿದ ಬಳಿಕ ಬಿಡುತ್ತಿದ್ದಾರೆ ಎಂದರು.

Translate »