ಮೈಸೂರು ಸಂತೇಪೇಟೆಯಲ್ಲಿ ವೀಕೆಂಡ್ ಜನಜಂಗುಳಿ
ಮೈಸೂರು

ಮೈಸೂರು ಸಂತೇಪೇಟೆಯಲ್ಲಿ ವೀಕೆಂಡ್ ಜನಜಂಗುಳಿ

April 24, 2021

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ-ಸಂತೇಪೇಟೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್
ಅಂತರ ಕಾಯ್ದುಕೊಳ್ಳದ ಗ್ರಾಹಕರು; ಪೊಲೀಸರ ಕಟ್ಟುನಿಟ್ಟಿನ ಸೂಚನೆ ಬಳಿಕ ಸುಧಾರಣೆ
ಮೈಸೂರು,ಏ.23(ಎಂಟಿವೈ)- ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆ ಯಲು ಸರ್ಕಾರ ಹೊರಡಿ ಸಿರುವ `ವಾರಾಂತ್ಯ ಕಫ್ರ್ಯೂ’ ಹಿನ್ನೆಲೆಯಲ್ಲಿ ದಿನಸಿ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಜನ ಶುಕ್ರವಾರ ಸಂತೇಪೇಟೆಯಲ್ಲಿ ಮುಗಿಬಿದ್ದರು.

ಕೊರೊನಾ 2ನೇ ಅಲೆ ತೀವ್ರಗೊಂ ಡಿದ್ದು, ಸೋಂಕಿತರು ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾ ದ್ಯಂತ ಇಂದು ರಾತ್ರಿ 9 ಗಂಟೆಯಿಂದ ಮೇ 4ರವರೆಗೆ ವೀಕೆಂಡ್ ಕಫ್ರ್ಯೂ ಜಾರಿ ಗೊಳಿಸಿದೆ. ಈ ಹಿನ್ನೆಲೆಯಲ್ಲಿ ಗುರು ವಾರದಿಂದಲೇ ಮೈಸೂರಲ್ಲಿ ಅಗತ್ಯ ವಸ್ತು ಗಳ ಮಾರಾಟ ಹೊರತುಪಡಿಸಿ ಉಳಿದ ಎಲ್ಲಾ ಮಳಿಗೆ ಮುಚ್ಚಿದ್ದರಿಂದ ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಸಂತೇ ಪೇಟೆಯಲ್ಲಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.

ಮುಂದಿನ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಜನರಲ್ಲಿ ತರಾತುರಿ ಇತ್ತು. ಲಾಕ್‍ಡೌನ್ ಮುಂದುವರೆಸಬಹುದೆಂಬ ಆತಂಕ ಮನೆ ಮಾಡಿತ್ತು. ವಿವಿಧ ಗ್ರಾಮಗಳಿಂದಲೂ ಅಗತ್ಯ ವಸ್ತು ಖರೀದಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಸಂತೇಪೇಟೆಗೆ ಬಂದಿ ದ್ದರು. ಅಲ್ಲದೆ ಗ್ರಾಮೀಣ ಪ್ರದೇಶ ಹಾಗೂ ವಿವಿಧ ಬಡಾವಣೆಗಳಲ್ಲಿನ ಕಿರಾಣಿ ಅಂಗಡಿಗಳವರು ಸಗಟು ಮಳಿಗೆಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಗೂಡ್ಸ್ ವಾಹನಗಳಲ್ಲಿ ಆಗಮಿಸಿದ್ದರು. ಇದರಿಂದ ಸಂತೇಪೇಟೆಯಲ್ಲಿ ಜನಜಂಗುಳಿ ಹೆಚ್ಚಾ ಗಿತ್ತು. ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ತಾಳಿ ದ್ದರು. ಹೆಚ್ಚು ಜನ-ವಾಹನ ಸಂಚಾರ ವಿದ್ದ ಹಿನ್ನೆಲೆಯಲ್ಲಿ ಸಂತೇಪೇಟೆ ರಸ್ತೆ ಯಲ್ಲಿ ಪದೇ ಪದೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.

ಸ್ಥಳಕ್ಕೆ ಬಂದ ಪೊಲೀಸರು, `ಕೊರೊನಾ ಸೋಂಕು ತಡೆ ದೃಷ್ಟಿಯಿಂದ ಸೆಕ್ಷನ್ 144 ಜಾರಿಯಲ್ಲಿದೆ. ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಎಲ್ಲರೂ ಅಂತರ ಕಾಯ್ದುಕೊಳ್ಳಿ’ ಎಂದು ಧ್ವನಿ ವರ್ಧಕದಲ್ಲಿ ಘೋಷಿಸುತ್ತಾ ಜಾಗೃತಿ ಮೂಡಿಸಲೆತ್ನಿಸಿದರೂ, ವರ್ತಕರೂ ಗ್ರಾಹಕ ರಿಗೆ ದೂರ ದೂರ ನಿಲ್ಲಿ ಎಂದು ಹೇಳಿ ದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿ ದಾಗ ಜನರು ಅಂತರ ಕಾಯ್ದುಕೊಂಡರು. ಮಧ್ಯಾಹ್ನ ನಂತರ ಪರಿಸ್ಥಿತಿ ಸುಧಾರಿಸಿತು.

ಮನೆ ಬಳಿಯೇ ಖರೀದಿಸಿ
ಮೈಸೂರು ಜಿಲ್ಲಾದ್ಯಂತ ಏ.24-25 ಕಫ್ರ್ಯೂ ಇರುವು ದರಿಂದ ಬೆಳಿಗ್ಗೆ 6-10 ಗಂಟೆ ಅವಧಿಯಲ್ಲಿ ಅಗತ್ಯ ವಸ್ತು ಗಳ ಮಾರಾಟಕ್ಕೆ ಅವಕಾಶ ವಿದೆ. ಜನರು ಮನೆ ಸಮೀ ಪದ ಅಂಗಡಿಗಳಲ್ಲೇ ಅಗತ್ಯ ವಸ್ತು ಖರೀದಿಸಿ ಎಂದು ಪೊಲೀ ಸರು ಸೂಚನೆ ನೀಡಿದ್ದಾರೆ.

ಮೈಸೂರಿನ ಸಿಗ್ಮಾ ಆಸ್ಪತ್ರೆಯಲ್ಲಿ ಕಿಡ್ನಿಸ್ಟೋನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಡುಗೂರು ಶ್ರೀ ಅಡವಿಮಠದ ಶ್ರೀಗಳನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲೆಂದು ಹಾರೈಸಿ, ಶುಭ ಕೋರಿದರು. ಶಿರಮಳ್ಳಿ, ಹರವೆ, ಚುಂಚನಹಳ್ಳಿ, ಚಿಕ್ಕತುಪ್ಪೂರು, ಕುಂತೂರು ಮತ್ತು ಹೊನ್ನಲಗೆರೆ ಮಠಗಳ ಶ್ರೀಗಳು, ಕುಮಾರ್, ಮಲ್ಲು ಹಾಗೂ ಶಿವಪ್ರಸಾದ್ ಇನ್ನಿತರರು ಚಿತ್ರದಲ್ಲಿದ್ದಾರೆ.

Translate »