ವನ್ಯಪ್ರಾಣಿಗಳು-ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಹೆದ್ದಾರಿ, ರೈಲ್ವೆ ಮಾರ್ಗ ಯೋಜನೆ ಕೊಡಗಿಗೆ ಅವಶ್ಯವಿಲ್ಲ
ಕೊಡಗು

ವನ್ಯಪ್ರಾಣಿಗಳು-ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಹೆದ್ದಾರಿ, ರೈಲ್ವೆ ಮಾರ್ಗ ಯೋಜನೆ ಕೊಡಗಿಗೆ ಅವಶ್ಯವಿಲ್ಲ

March 17, 2022

ಮಡಿಕೇರಿ, ಮಾ.16- ವನ್ಯ ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗುವ ಚತುಷ್ಪಥ ಹೆದ್ದಾರಿ, ರೈಲ್ವೆ ಮಾರ್ಗ, ಭೂ ಪರಿವರ್ತನೆ ಸೇರಿದಂತೆ ಬೃಹತ್ ಯೋಜನೆಗಳು ಕೊಡ ಗಿಗೆ ಅವಶ್ಯಕತೆ ಇಲ್ಲ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಚಾಲಕರಾದ ಕರ್ನಲ್ ಸಿ.ಪಿ.ಮುತ್ತಣ್ಣ (ನಿವೃತ್ತ) ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡೂವರೆ ದಶಕಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವ ಳಿಯೂ ಕಾಣಿಸಿಕೊಂಡು ಗ್ರಾಮೀಣ ಜನರ ಬದುಕನ್ನು ಹದಗೆಡಿಸಿದೆ. ಇದರ ನಿಯಂತ್ರಣಕ್ಕೆ ಮೇಲ್ನೋಟಕ್ಕೆ ಕಾಣುವ ಆನೆ ಕಂದಕ, ಸೋಲಾರ್ ತಂತಿ ಬೇಲಿ ಅಳವಡಿಕೆಗಳನ್ನಷ್ಟೆ ಮಾಡಿದರೆ ಪ್ರಯೋಜನ ವಿಲ್ಲ. ಸಮಸ್ಯೆಯ ಮೂಲ ಕಾರಣವನ್ನು ಅರಿತು ಬಗೆಹರಿಸುವ ಪ್ರಯತ್ನ ನಡೆಯ ಬೇಕೆಂದು ಒತ್ತಾಯಿಸಿದರು.
ಅರಣ್ಯ ಪ್ರದೇಶಗಳಿಂದ ನಾಡಿನತ್ತ ಆನೆ, ಹುಲಿ ಸೇರಿದಂತೆ ವನ್ಯ ಮೃಗಗಳು ಬರುವ ಮೂಲಕ, ಅರಣ್ಯದಲ್ಲಿ ಸಮಸ್ಯೆ ಇರುವ ಸಂದೇಶವನ್ನು ನೀಡುತ್ತಿವೆ. ಅಭಿ ವೃದ್ಧಿಯ ನೆಪದಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಬೃಹತ್ ಯೋಜನೆಗಳಿಂದ ಮರÀಗಳು ನಾಶವಾಗಿ ತಮ್ಮ ಆವಾಸ ಸ್ಥಾನಕ್ಕೆ ಧಕ್ಕೆಯುಂಟಾಗಿರುವುದೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣವಾಗಿದೆಯೆಂದು ಕರ್ನಲ್ ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಭೇಟಿ: ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಉಂಟಾಗು ತ್ತಿರುವ ಅರಣ್ಯ ನಾಶ, ಇದರಿಂದ ಉದ್ಭವಿ ಸಿರುವ ವನ್ಯ ಜೀವಿಗಳು ಮತ್ತು ಮಾನವನ ಸಂಘರ್ಷ, ಅರಣ್ಯ ಪರಿಸರದ ನಾಶದಿಂದ ಕಾವೇರಿ ಜಲಾನಯನ ಪ್ರದೇಶಕ್ಕೆ ಹಾನಿ ಯುಂಟಾಗುತ್ತಿರುವ ಅಂಶಗಳ ಬಗ್ಗೆ ಶೀಘ್ರ ದಲ್ಲೆ ಜಿಲ್ಲೆಯ ಶಾಸಕರು ಹಾಗೂ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ವಿವರವಾದ ಮಾಹಿತಿ ನೀಡಲಿರುವುದಾಗಿ ಸ್ಪಷ್ಟಪಡಿಸಿದರು.

ಆನೆ ಹಾವಳಿ ಹೆಚ್ಚಳ: ಕೊಡಗಿನ ಮೂಲಕ 400ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣದ ಸಂದರ್ಭ 2014ರಲ್ಲಿ ದೊಡ್ಡ ಪ್ರಮಾಣದಲ್ಲಿ ಮರಗಳ ಹನನ ನಡೆಯಿತು. ಈ ಸಂದರ್ಭ ಅರಣ್ಯದಲ್ಲಿದ್ದ ಕಾಡಾನೆ ಗಳು ಗ್ರಾಮೀಣ ಭಾಗಗಳಲ್ಲಿ ನಡೆಸಿದ ದಾಳಿಯಿಂದ ಹತ್ತು ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಮತ್ತೆ ಜಿಲ್ಲೆ ಯಲ್ಲಿ 2 ರೈಲ್ವೆ ಯೋಜನೆಗಳು ಮತ್ತು ಚತುಷ್ಪಥದ ಏಳು ಹೆದ್ದಾರಿಗಳ ನಿರ್ಮಾ ಣದ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಮತ್ತಷ್ಟು ಮರಗಳು ಹನನವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಚೆನ್ನರಾಯಪಟ್ಟಣ-ಕೊಡ್ಲಿಪೇಟೆ-ಮಡಿಕೇರಿ-ವಿರಾಜಪೇಟೆ-ಮಾಕುಟ್ಟ-ಕೇರಳ ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಜೆಟ್‍ನಲ್ಲಿ 1600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದ ರೊಂದಿಗೆ ಎರಡು ರೈಲ್ವೆ ಮಾರ್ಗಗಳು, 7 ಹೆದ್ದಾರಿಗಳ ನಿರ್ಮಾಣ 20 ಸಾವಿರ ಕೋಟಿ ವೆಚ್ಚವಾಗುತ್ತಿದ್ದು,, ಈ ಯೋಜನೆ ಗಳು ಕೊಡಗು ಜಿಲ್ಲೆಯ ವಿನಾಶಕ್ಕೆ ಕಾರಣ ವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿ ದರು. ಈ ಯೋಜನೆಯ ಅನುದಾನಗಳನ್ನು ಕೊಡಗಿನ ಪ್ರಾಕೃತಿಕ ಸಂಪತ್ತಿನ ನಾಶಕ್ಕೆ ವಿನಿಯೋಗಿಸದೆ ಮಲೆನಾಡು ಭಾಗದ ಜನರ ಶ್ರೇಯೋಭಿವೃದ್ಧಿಗೆ ಬಳಸ ಬೇಕೆಂದು ಕರ್ನಲ್ ಸಿ.ಪಿ. ಮುತ್ತಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಭೂ ಪರಿವರ್ತನೆ: ಕೊಡಗಿನಲ್ಲಿ 2005 ರಿಂದ 2015ರ ನಡುವೆ ಸುಮಾರು 3 ಸಾವಿರ ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡ ಲಾಗಿದೆ. ಇದರಿಂದಾಗಿ ಕಾಡಾನೆಗಳ ಪಥ ವನ್ನು ಹಾಳುಗೆಡವಲಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾ ಗಲು ಕಾರಣವೆಂದು ಕರ್ನಲ್ ಮುತ್ತಣ್ಣ ತಿಳಿಸಿದರು. ಜಿಲ್ಲೆಯಲ್ಲಿನ ವನ್ಯಜೀವಿಗಳ ಹಾವಳಿಯನ್ನು ನಿಗ್ರಹಿಸುವ ಜವಾಬ್ದಾರಿ ಯನ್ನು ಅರಣ್ಯ ಇಲಾಖೆಯೊಂದರ ಮೇಲಷ್ಟೇ ಹೊರಿಸಲಾಗುತ್ತಿದೆ. ಜಿಲ್ಲಾಡಳಿ ತವು ಸಮಸ್ಯೆ ಬಗೆಹರಿಸಲು ತನ್ನ ಸಹ ಭಾಗಿತ್ವವನ್ನು ನೀಡಬೇಕು ಮತ್ತು ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಅಧಿ ಕಾರಿಗಳು, ಬೆಳೆಗಾರರು, ಸಂಘ ಸಂಸ್ಥೆಗಳ ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸ ಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸತ್ಯಾನ್ವೇಷಣಾ ಸಮಿತಿಯ ಪ್ರಮುಖರಾದ ಸನ್ನಿ ಸೋಮಣ್ಣ, ಕಾವೇರಿ ಸೇನೆಯ ಅಧ್ಯಕ್ಷ ರವಿ ಚಂಗಪ್ಪ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಸಂಚಾಲಕರಾದ ಮೇ.ಬಿ.ಎ. ನಂಜಪ್ಪ ಮತ್ತು ಮಲಚ್ಚೀರ ಶ್ಯಾಂ ಬೋಪಣ್ಣ ಉಪಸ್ಥಿತರಿದ್ದರು.

Translate »