ಇಂದು ಗಾಂಧಿಯೊಳಗಿನ ಪತ್ರಕರ್ತ ಕೃತಿ ಬಿಡುಗಡೆ
ಮೈಸೂರು

ಇಂದು ಗಾಂಧಿಯೊಳಗಿನ ಪತ್ರಕರ್ತ ಕೃತಿ ಬಿಡುಗಡೆ

October 2, 2020

ಮೈಸೂರು ಅ.1- ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರ 36ನೇ ಕೃತಿ ‘ಗಾಂಧಿಯೊಳಗಿನ ಪತ್ರಕರ್ತ: ಮರು ವೀಕ್ಷಣೆ’- ಅ.2ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ‘ಗಾಂಧಿ ಸ್ಮಾರಕ ನಿಧಿ, ಕರ್ನಾಟಕ’ ಈ ಪುಸ್ತಕ ವನ್ನು ಹೊರತಂದಿದೆ. ಗಾಂಧೀಜಿಯವರ 150ನೇ ಜನ್ಮ ದಿನದ ವರ್ಷಾಚರಣೆಯ ಸಂದರ್ಭದಲ್ಲಿ ಹೊರಬರುತ್ತಿರುವ ಈ ಕೃತಿ ಪತ್ರಕರ್ತರಾಗಿ ಗಾಂಧಿ ಕುರಿತು ಹೊಸ ಚಿಂತನೆಯ 30 ಚಿಂತನಗಳನ್ನು ಒಳಗೊಂಡಿದೆ.

ಗಾಂಧೀಜಿ ಎಂಥಾ ಪತ್ರಕರ್ತರಾಗಿದ್ದರು ಎಂಬುದು ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಹಾಗೂ ಪತ್ರಿಕಾ ಓದುಗರಿಗೆ ಕುತೂ ಹಲದ ವಿಷಯವಾಗಿದೆ. ಗಾಂಧೀಜಿ ಪತ್ರಕರ್ತರೇ ಅಲ್ಲ ಎನ್ನುವರಿ ದ್ದರೆ ನಿಜ. ಇಂದಿನ ಕಾಲದ ಪತ್ರಕರ್ತರ ಸಾಲಿನಲ್ಲಿ ಗಾಂಧೀಜಿ ಯವರನ್ನು ನಿಲ್ಲಿಸುವುದೇ ಸಾಧ್ಯವಿಲ್ಲ. ಪತ್ರಿಕೆಗಳ ಬಗ್ಗೆ ಅವರ ನಿಲುವುಗಳು, ಸಂಪಾದಕರಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳು, ಬರಹಗಾರರಾಗಿ ಪ್ರಯೋಗಿಸಿದ ಶೈಲಿ, ಭಾಷೆ, ನಂಬಿದಂತೆ ಬದುಕಿದ ಧೀಮಂತಿಕೆ, ಪತ್ರಿಕೆಯಿಂದ ಜನಸೇವೆಯೊಂದನ್ನು ಬಿಟ್ಟು ಬೇರೇನನ್ನೂ ಬಯಸದ ನಿರಾಸಕ್ತಿ, ಯೋಗ- ಇವೆಲ್ಲ ಜಗತ್ತಿನಲ್ಲಿ ಕಂಡು-ಕೇಳರಿಯದ್ದು. ಒಂದು ಭಿನ್ನ ಮಾದರಿ ಯನ್ನು ಸೃಷ್ಟಿಸಿದ್ದನ್ನು ಗಾಂಧೀಯವರನ್ನು ಕಂಡರಾಗದವರೂ ಅಲ್ಲಗಳೆಯಲು ಸಾಧ್ಯ ವಿಲ್ಲ. ಅವರಿಗೆ ಅವರೇ ಸಾಟಿ ಅಂದು ಮಾತ್ರ ಹೇಳಬಹುದು. ಆದರೆ ಒಪ್ಪಬೇಕಾದ ವಿಚಾರವೆಂದರೆ ಇಂದಿನ ಅರ್ಥದಲ್ಲಿ ಗಾಂಧೀ ಪತ್ರಕರ್ತರಾಗಿರಲಿಲ್ಲ. ಉದ್ಯಮಿಯಂತೂ ಆಗಿರಲೇ ಇಲ್ಲ. ಅವರ ಜೊತೆ ಕೆಲಸ ಮಾಡಿದವರೆಲ್ಲ ಹೆಚ್ಚಾಗಿ ಸ್ವಯಂಸೇವಕರು. ಸಂಬಳದ ಆಸೆಗೆ ಕೆಲಸ ಮಾಡಿದವರಲ್ಲ. ಆದರೆ ಈಗ ಹಾಗೆ ಸ್ವಯಂಸೇವಕರನ್ನು ನಂಬಿಕೊಂಡು ಕೆಲಸ ಮಾಡಲಾಗುತ್ತದೆಯೇ? ಇನ್ನೊಂದು ಸಂಗತಿ ಈಗಿನ ಪತ್ರಿಕೋ ದ್ಯಮದ ಮುಖವೇ ದಿನ ಪತ್ರಿಕೋದ್ಯಮ. ಆದರೆ ಗಾಂಧಿ ಅದರಲ್ಲಿ ಕೈಯಾಡಿಸಿದವ ರಲ್ಲ. ದಿನಪತ್ರಿಕೆಯ ಅರ್ಥಶಾಸ್ತ್ರವೇ ಬೇರೆ. ದಿನಪತ್ರಿಕೆಗಳಿಗೆ ಹೋಲಿಸಿದರೆ  ನಿಯತಕಾಲಿಕ ಗಳದ್ದು ಸಣ್ಣ ವ್ಯವಹಾರ. ಗಾಂಧೀಜಿ ಜಾಹೀರಾತು ಇಲ್ಲದೇ ಪತ್ರಿಕೆ ನಡೆಸುವ ಮಾತಾಡುವುದು ನಿಯತಕಾಲಿಕಗಳೇ ವಿನಾ ದಿನಪತ್ರಿಕೆಗಳಾಗಿರಲಿಕ್ಕಿಲ್ಲ. ಅವರ ತತ್ವಗಳು ಇಂದಿಗೂ ಆದರ್ಶವೇ. ಆದರೆ ಎಷ್ಟೋ ಒಪ್ಪಂದಗಳನ್ನು ಮಾಡಿಕೊಳ್ಳದೇ ಇಂದು ಪತ್ರಿಕೆ ನಡೆಸುವುದು ಸಾಧ್ಯವೇ ಇಲ್ಲ! ಗಾಂಧೀಜಿಯವರಿಗೆ ಗುರಿ ಮಾತ್ರವಲ್ಲ ದಾರಿ ಕೂಡಾ ಮುಖ್ಯವಾಗಿತ್ತು. ಹೀಗೆ 150ರ ತಾರುಣ್ಯದ ಗಾಂಧೀಜಿಗೆ ಕೊಡ ಬಹುದಾದ ಯೋಗ್ಯ ಕಾಣಿಕೆಯಾಗಿ ಕೃತಿಯಲ್ಲಿ 30 ಲೇಖನಗಳಿವೆ.

 

 

 

Translate »