ಬೈಕ್ ಡಿಕ್ಕಿ ಮಹಿಳೆ ಸಾವು
ಕೊಡಗು

ಬೈಕ್ ಡಿಕ್ಕಿ ಮಹಿಳೆ ಸಾವು

March 7, 2020

ಕುಶಾಲನಗರ,ಮಾ.6-ಮನೆಗೆ ತೆರಳುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ವಾಗಿ ಗಾಯ ಗೊಂಡು ಮೃತ ಪಟ್ಟಿರುವ ಘಟನೆ ಶುಕ್ರವಾರ ಕೂಡುಮಂಗಳೂರಿನಲ್ಲಿ ನಡೆದಿದೆ.

ಕೂಡುಮಂಗಳೂರು ಗ್ರಾಮದ ನಿವಾಸಿ ಜಯಮ್ಮ (69) ಮೃತಪಟ್ಟ ಮಹಿಳೆ. ಕುಶಾಲನಗರದಿಂದ ಕೂಡು ಮಂಗಳೂರಿನ ಮನೆಗೆ ಆಟೊರಿಕ್ಷಾ ದಲ್ಲಿ ತೆರಳಿ ನಂತರ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ, ಎದುರಿ ನಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದ ರಿಂದ ಗಾಯಗೊಂಡ ಜಯಮ್ಮ ಅವ ರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದು ಕೊಂಡು ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದರೆನ್ನಲಾಗಿದೆ.

ರಾಮನಾಥಪುರದ ಚಂದನ(21) ಎಂಬಾತನೆ ಬೈಕ್ ನಲ್ಲಿ ಡಿಕ್ಕಿ ಹೊಡೆದ ಯುವಕನಾಗಿದ್ದು, ಈತನನ್ನು ವಶಕ್ಕೆ ತೆಗೆದುಕೊಂಡಿರುವ ಪೆÇಲೀಸರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »