ಸಿಐಐ-ಯಂಗ್ ಇಂಡಿಯನ್ಸ್ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ
ಮೈಸೂರು

ಸಿಐಐ-ಯಂಗ್ ಇಂಡಿಯನ್ಸ್ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

June 15, 2018

ಮೈಸೂರು: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ- ಯಂಗ್ ಇಂಡಿಯನ್ಸ್ (ಸಿಐಐ-ವೈಐ) ವತಿಯಿಂದ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಚಂದ್ರಕಲಾ ಆಸ್ಪತ್ರೆಯಲ್ಲಿ ಗುರುವಾರ ರಕ್ತದಾನ ಕಾರ್ಯಕ್ರಮ ನಡೆಯಿತು.

ರೋಟರಿ ಮೈಸೂರು, ಚಂದ್ರಕಲಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಕಾಯಕ್ರಮಕ್ಕೆ ಸಿಐಐ ಉಪಾಧ್ಯಕ್ಷ ಭಾಸ್ಕರ್ ಕಳಲೆ ಚಾಲನೆ ನೀಡಿದರು. ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪÀಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್, ಯಂಗ್ ಇಂಡಿಯನ್ಸ್ ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಘನಶ್ಯಾಮ್ ಮುರಳಿ, ಕವೀಶ್‍ಗೌಡÀ, ಭೋಪಣ್ಣ, ಡಾ.ಚೈತ್ರಾ ನಾರಾಯಣ್, ಭರತ್‍ಗೌಡ, ಶ್ರದ್ಧಾ ಪಾಠಕ್, ಸ್ಮಿತಾ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು, ಯಂಗ್ ಇಂಡಿಯನ್ಸ್ ಸದಸ್ಯರು ಇನ್ನಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Translate »