ಮಹಿಳೆ ಅಪಹರಿಸಿ ಗ್ಯಾಂಗ್ ರೇಪ್
ಮಂಡ್ಯ

ಮಹಿಳೆ ಅಪಹರಿಸಿ ಗ್ಯಾಂಗ್ ರೇಪ್

June 15, 2018
  • 8 ದುಷ್ಕರ್ಮಿಗಳಿಂದ ವೀಡಿಯೋ ಮಾಡಿ ಬ್ಲಾಕ್ ಮೇಲ್ಶ್ರೀ
  • ರಂಗಪಟ್ಟಣ ಠಾಣೆಯಲ್ಲಿ ದೂರು ದಾಖಲು

ಮಂಡ್ಯ: ದೇವಸ್ಥಾನಕ್ಕೆ ಪೂಜೆ ಗೆಂದು ತೆರಳುತ್ತಿದ್ದ ಗೃಹಿಣಿ ಯೋರ್ವರನ್ನು ಕಾರಿನಲ್ಲಿ ಅಪಹರಿಸಿ ಮೂವರು ದುಷ್ಕರ್ಮಿ ಗಳ ತಂಡ ಅತ್ಯಾಚಾರಗೈದಿರುವ ಘಟನೆ ಶ್ರೀರಂಗಪಟ್ಟಣ ಸಮೀಪದ ಕರಿಘಟ್ಟ ದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜೂ.4ರಂದು ಘಟನೆ ನಡೆದಿದ್ದು, ಈ ಸಂಬಂಧ ಸಂತ್ರಸ್ತೆ ಮಹಿಳೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದು, ಶ್ರೀರಂಗಪಟ್ಟಣ ತಾಲೂಕಿನ ಗೌಡಳ್ಳಿ ಗ್ರಾಮದ ಸಂಜಯ್, ಬಿಡ್ಡಾ ಮತ್ತು ರಮೇಶ್ ಎಂಬುವವರೇ ಅತ್ಯಾಚಾರ ಪ್ರಕರಣದ ಆರೋಪಿಗಳು.

ಘಟನೆ ಹಿನ್ನೆಲೆ: ಜೂ.4ರಂದು ಮಹಿಳೆ ಕರಿಘಟ್ಟ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದು ಮಹಿಳೆಯನ್ನು ಅಡ್ಡಗಟ್ಟಿದ ಕಾಮುಕರು ಅಪಹರಿಸಿ, ಗೌತಮ ಕ್ಷೇತ್ರದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಇನ್ನೊಮ್ಮೆ ಕರೆದಾಗ ನೀನಾಗಿಯೇ ಬರಬೇಕು. ಇಲ್ಲ ವಾದರೇ ವೀಡಿಯೋ ತೋರಿಸಿ ಮಾನ ಹರಾಜು ಹಾಕುತ್ತೇವೆ. ಒಂದು ವೇಳೆ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆ ಜೂ.13 ರ ಬುಧವಾರ ರಾತ್ರಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಆರೋಪಿಗಳಾದ ಸಂಜಯ, ಬಿಡ್ಡಾ ಹಾಗೂ ರಮೇಶ್ ವಿರುದ್ಧ ಐಪಿಸಿ ಕಲಂ 363, 376(ಡಿ), 506, 34(ಘೋರ)ರ ಅಡಿ ಪ್ರಕರಣ ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆಯೇ ಮೂವರು ಆರೋಪಿಗಳು ಗ್ರಾಮದಿಂದ ಪರಾರಿಯಾಗಿ ದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Translate »