ಬೇಲೂರು: ಹಳೇಬೀಡು ಪಟ್ಟಣದ ಕುಡಿಯುವ ನೀರು ಸೇರಿದಂತೆ ಸುತ್ತಲಿನ ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಯ ಅಂತರ್ಜಲ ವೃದ್ಧಿಗಾಗಿ ಕೆರೆಗೆ ಯಗಚಿ ನಾಲೆಯಿಂದ ಇಂದಿನಿಂದಲೇ ನೀರು ಹರಿಸಿಕೊಳ್ಳಲು ಹಳೇಬೀಡು ಭಾಗದ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಹಳೇಬೀಡಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತರು, ಅಡ ಗೂರು ಸಮೀಪದ ಶಿವಪುರ ಗ್ರಾಮದ ಬಳಿ ಲಕ್ಷಾಂತರ ರೂ. ವೆಚ್ಚದಡಿ ನಾಲೆ ನಿರ್ಮಿಸಿ, ನಾಲೆಯ ಮೂಲಕ ಯಗಚಿ ಜಲಾ ಶಯದಿಂದ ಈಗಾಗಲೇ ಅಡಗೂರು ಕೆರೆಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದಿದೆ. ಕೆರೆಗೆ ನೀರು ಹರಿಯುವ ಮುನ್ನ ಈ ಭಾಗದ ಕೆರೆಗಳಾದ ಸವಾಸಿಹಳ್ಳಿ, ಕೊಮಾರನಹಳ್ಳಿ, ದೇವೀಹಳ್ಳಿ, ಪಂಡಿತನಹಳ್ಳಿ, ವಡ್ಡಿನಕೆರೆ ಗಳಿಗೂ ನೀರು ಹರಿದಿದೆ. ಇದರಿಂದ ಈ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತ ರ್ಜಲ ವೃದ್ಧಿಯಾಗಿದೆ.
ಅದೇ ರೀತಿ ಹಳೇಬೀಡು ಪಟ್ಟಣ ಹಾಗೂ ಹಳೇಬೀಡಿನ ದ್ವಾರಸಮುದ್ರ ಕೆರೆ ವ್ಯಾಪ್ತಿಯಲ್ಲಿ ಇರುವ ಕೊಳವೆ ಬಾವಿಗಳಲ್ಲಿ ಅಂತ ರ್ಜಲ ವೃದ್ಧಿಗೂ ಆಲೋಚಿಸಬೇಕಿದೆ. ಈಗಾ ಗಲೇ ನೀರು ಹರಿದಿರುವ ಕೆರೆಯ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರಂತೆ ಹಳೇ ಬೀಡಿನ ಜನರೂ ಸಹ ಕುಡಿಯುವ ನೀರಿನ ಸೌಲಭ್ಯ ಪಡೆಯಬೇಕಿದೆ. ಆ ಕಾರಣಕ್ಕಾಗಿ ಅಡಗೂರು ಕೆರೆಗೆ ನೀರು ಹರಿಯುವ ನಾಲೆಯ ನಡುವೆ ಕಾಗೇಹಳ್ಳ ಹಾಗೂ ಸಂಗಯ್ಯನ ಕೆರೆ ಬಳಿ ನಾಲೆಯಲ್ಲಿ ಹರಿಯುತ್ತಿರುವ ನೀರನ್ನು ಅಡ್ಡಗಟ್ಟಿ ಹಳೇಬೀಡು ಕೆರೆಗೆ ನೀರು ತುಂಬಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ಈಗಾಗಲೇ ನೀರು ಹರಿ ದಿರುವ ಕೆರೆಯ ವ್ಯಾಪ್ತಿಯ ಗ್ರಾಮಸ್ಥರು ಸಹಮತ ಸೂಚಿಸಿದ್ದಾರೆ.
ಜನವರಿ 31 ರಂದು ನಾಲೆಯಲ್ಲಿನ ನೀರನ್ನು ಅಡ್ಡಗಟ್ಟಿ ಹಳೇಬೀಡು ಕೆರೆಗೆ ಹರಿಸುವ ಕಾಯಕ ಆರಂಭವಾಗಲಿದೆ. ಈ ಕಾರ್ಯಕ್ಕೆ ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಪುಷ್ಪಗಿರಿ ಮಠದ ಶ್ರೀ ಸೋಮ ಶೇಖರ ಸ್ವಾಮೀಜಿ ಸಹಮತ ವ್ಯಕ್ತಪಡಿಸಿದ್ದು, ನೀರು ಪೋಲು ಆಗದಂತೆ ಎಚ್ಚರ ವಹಿಸು ವಂತೆ ಸಲಹೆ ನೀಡಿದ್ದಾರೆಂದು ಸಭೆಯಲ್ಲಿ ರೈತ ಪ್ರಮುಖರು ತಿಳಿಸಿದರು.
ಸಭೆಯಲ್ಲಿ ರೈತ ಪ್ರಮುಖರಾದ ಹೋಬಳಿ ಅಧ್ಯಕ್ಷ ಹಾಲಪ್ಪ, ಗಡಿ ಮಲ್ಲಿಕಣ್ಣ, ಕೆ. ಕುಮಾರ್, ಶಿವಪ್ಪ, ಗುರುಶಾಂತಪ್ಪ, ರಾಜು, ಮುನ್ನಾ, ಗಂಗಾಧರ್, ಅಶೋಕ್, ವಿಜಯ ಕುಮಾರ್, ಸತೀಶ್, ಮಹೇಶ್ ಇತರರಿದ್ದರು.