ಡಿ.13ರಿಂದ ಯೋಗಾಸನ ಶಿಬಿರ
ಮೈಸೂರು

ಡಿ.13ರಿಂದ ಯೋಗಾಸನ ಶಿಬಿರ

December 11, 2018

ಮೈಸೂರು:  ಮೈಸೂರಿನ ಯರಗನಹಳ್ಳಿ ಹೊಸ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಆಶ್ರಯದಲ್ಲಿ ಡಿ.13ರಿಂದ 1 ತಿಂಗಳ ಯೋಗಾಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಾಶ್ರ್ವವಾಟಿಕ ಸಭಾಂಗಣ, ಸಿದ್ದಾರ್ಥನಗರ (ಬೆ. 5.45ರಿಂದ 6.30 ಪ್ರತಿದಿನ); ಸಿ.ಪಿ.ಡಬ್ಲ್ಯೂಡಿ ಕ್ವಾಟ್ರಸ್, ಜ್ಯೋತಿನಗರ (ಬೆಳಿಗ್ಗೆ 6.30ರಿಂದ 7.15 ಪ್ರತಿದಿನ); ಆರ್ಯ ಸಮಾಜ, ಡಿ. ದೇವರಾಜ ಮೊಹಲ್ಲಾ (ಬೆ. 7.15ರಿಂದ 8.15 ಪ್ರತಿದಿನ); ಶ್ರೀಮತಿ ಅನಿತಾ, ಸಿದ್ದಾರ್ಥನಗರ (ಬೆ. 10.15ರಿಂದ 11.15 ಪ್ರತಿದಿನ); ಭಾರತ್ ಕ್ಯಾನ್ಸರ್ ಆಸ್ಪತ್ರೆ ಆವರಣ, ಮೇಟಗಳ್ಳಿ (ಮ. 3ರಿಂದ 4 ಬುಧ/ ಶನಿವಾರ ಮಾತ್ರ); ಬೆನಕ ಕೈಗಾರಿಕಾ ತರಬೇತಿ ಸಂಸ್ಥೆ, ರಾಘವೇಂದ್ರನಗರ (ಸಂಜೆ 5 ರಿಂದ 6-ಸೋಮ, ಬುಧ, ಶುಕ್ರವಾರ); ಜೆಎಸ್‍ಎಸ್ ಪಬ್ಲಿಕ್ ಸ್ಕೂಲ್, ಶಕ್ತಿನಗರ (ಸಂಜೆ 5ರಿಂದ 6-ಸೋಮ, ಬುಧ, ಶುಕ್ರ); ಕಿಣೀಶ್ ಕಿಂಡರ್ ಗಾರ್ಡನ್, ಗಾಯಿತ್ರಿಪುರಂ (ಸಂಜೆ 7.15ರಿಂದ 8.15 ಪ್ರತಿದಿನ ಮಹಿಳೆಯರಿಗೆ ಮಾತ್ರ).

Translate »