ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವುದು ಯುವಜನರ ಹೊಣೆ
ಹಾಸನ

ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವುದು ಯುವಜನರ ಹೊಣೆ

April 28, 2019

ಅರಸೀಕೆರೆ: ಕನ್ನಡ ಸಾಹಿತ್ಯ ಕ್ಷೇತ್ರವು ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳಸುವ ಜವಬ್ದಾರಿ ಯನ್ನು ಯುವ ಜನಾಂಗವು ಹೊರ ಬೇಕು. ಕನ್ನಡ ಭಾಷೆ ಉಳಿವು ಇಂದಿನ ಯುವ ಜನಾಂಗದ ಮೇಲೆ ಅವಲಂಬಿತ ವಾಗಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಿ ಪ್ರೋತ್ಸಾಹಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ಶಿವಮೂರ್ತಿ ಮನವಿ ಮಾಡಿದರು.

ನಗರದ ಮಲ್ಲೇಶ್ವರ ನಗರದಲ್ಲಿರುವ ಮೀನಾ ನಟರಾಜ್ ನಿವಾಸದಲ್ಲಿ ತಾ. ಕಸಾಪದಿಂದ ನಡೆದ ಮೂರನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮನ ಮತ್ತು ಮನೆಗಳಲ್ಲಿ ಕನ್ನಡ ಭಾಷೆ ಯನ್ನು ತುಂಬುವ ಕೆಲಸವನ್ನು ಮಾಡ ಬೇಕಾಗಿದೆ. ತಾಲೂಕಿನಲ್ಲಿ ಸಾಹಿತ್ಯ ಪ್ರಿಯರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇವರೆಲ್ಲರಿಗೂ ಅವಕಾಶವನ್ನು ನೀಡಿ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಇಂದು ನಗರದಲ್ಲಿ ಆಯೋಜಿಸಲಾಗಿ ರುವ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಪುರುಷರು ಆಗಮಿಸಿ, ತಾವು ಸ್ವಯಂ ಪ್ರೇರಿತವಾಗಿ ರಚಿಸಿದ ಕವನಗಳನ್ನು ವಾಚಿಸಿದ್ದಾರೆ. ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿ ಪರಿಸರ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸಿ, ಆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ಗೌರವಿಸುತ್ತಿರುವುದು ಶ್ಲಾಘ ನೀಯ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಪ್ರದೇಶ ಗಳಲ್ಲಿರುವ ಸಾಹಿತ್ಯಾಸಕ್ತರನ್ನು ಗುರುತಿಸ ಬೇಕಾಗಿದೆ. ಗ್ರಾಮಿಣ ಪ್ರದೇಶಗಳಲ್ಲಿ ಕನ್ನಡ ಸೊಗಡು ಇಂದಿಗೂ ಜೀವಂತವಾಗಿದ್ದು, ಅದರ ಮೂಲಕ ಗುರುತಿಸಿಕೊಳ್ಳುತ್ತಿರುವ ಉದಯೋನ್ಮುಖ ಬರಹಗಾರರು ಮತ್ತು ಕವಿಗಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅವಕಾಶವನ್ನು ನೀಡಬೇಕಾಗಿದೆ. ಇಂದು ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿ ಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಶ್ರಮ ವನ್ನು ಹಾಕುವುದರ ಮೂಲಕ ತಮ್ಮದೇ ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇಂತಹ ಸಾಹಿತ್ಯಾಸಕ್ತರು ಬಿಡುಗಡೆ ಗೊಳಿಸಿದ ಪುಸ್ತಕಗಳನ್ನು ಖರೀದಿಸು ವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕವಿಗೋಷ್ಠಿಯಲ್ಲಿ ಕಾತ್ಯಾಯಿನಿ, ಚಂದ್ರೇ ಗೌಡ ನಾರಮ್ನಳ್ಳಿ, ಜಯಲಕ್ಷ್ಮೀ ಕೋಳ ಗುಂದ, ಸೈಫುಲ್ಲಾ, ಅಭಿಷೇಕ್ ಒಡೆಯರ್, ಸತೀಶ್, ಶೇಖರ್ ಶ್ಯಾನೆಗೆರೆ, ರಘುನಂದನ್ ಇನ್ನಿತರರು ಕವನ ವಾಚನ ಮಾಡಿದರು. ಯೋಗೀಶ್ ದಿಬ್ಬೂರು, ಗಂಗಾಧರ್ ತೆವರಿ ಮಠ್, ರಮೆಶ್ ದಿಬ್ಬೂರು, ವಿಷ್ಣುವರ್ಧನ, ಸವಿತಾ ಗಂಡಸಿ ಮತ್ತು ಮಂಜುಳಾ ಗಾಯನವನ್ನು ಹಾಡಿದರು. ಈ ಸಂದರ್ಭ ದಲ್ಲಿ ಉದಯೋನ್ಮುಖ ಲೇಖಕಿ ಕುಮಾರಿ ಹರ್ಷಿತಾ ಮತ್ತು ಪೌರಕಾರ್ಮಿಕರಾದ ಮಂಜಮ್ಮ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯ ಕ್ಷತೆಯನ್ನು ರಮೇಶ್ ದಿಬ್ಬೂರು ವಹಿಸಿ ಮಾತನಾಡಿದರು. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕವಲೀ ರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಗಂಗಾ ಧರ್ ಸ್ವಾಮಿ, ಕಸಾಪ ಕಾರ್ಯದರ್ಶಿ ಮಂಜುನಾಥ್, ಮಾಜಿ ಅಧ್ಯಕ್ಷ ಪರ ಮೇಶ್, ಕಸಾಪ ಹೋಬಳಿ ಅಧ್ಯಕ್ಷ ದಿವಾ ಕರಬಾಬು, ಪದಾಧಿಕಾರಿಗಳಾದ ಅನಿತಾ, ಕೆ.ಸಿ.ನಟರಾಜ್, ಸುಧಾ ಕಲ್ಯಾಣ್, ಸ್ವಭಾವ ಕೋಳಗುಂದ, ಕರವೇ ಅಧ್ಯಕ್ಷ ಹೇಮಂತ್ ಕುಮಾರ್, ರಾಧಮ್ಮ ಇನ್ನಿತರರು ಉಪಸ್ಥಿತರಿದ್ದರು.

Translate »