ವೈ.ಪಿ.ಉದಯಶಂಕರ್ ಮೈಸೂರು ಸ್ಪೋಟ್ರ್ಸ್ ಕ್ಲಬ್ ನೂತನ ಅಧ್ಯಕ್ಷ
ಮೈಸೂರು

ವೈ.ಪಿ.ಉದಯಶಂಕರ್ ಮೈಸೂರು ಸ್ಪೋಟ್ರ್ಸ್ ಕ್ಲಬ್ ನೂತನ ಅಧ್ಯಕ್ಷ

July 8, 2018

ಮೈಸೂರು: ಮೈಸೂರಿನ ಪ್ರತಿಷ್ಠಿತ ಶ್ರೀಕಂಠೀರವ ನರಸಿಂಹ ರಾಜ ಸ್ಫೋಟ್ರ್ಸ್ ಕ್ಲಬ್ (ಮೈಸೂರು ಸ್ಪೋಟ್ರ್ಸ್ ಕ್ಲಬ್) ನೂತನ ಅಧ್ಯಕ್ಷರಾಗಿ ವೈ.ಪಿ.ಉದಯ ಶಂಕರ್ (268 ಮತ) ಆಯ್ಕೆಯಾಗಿ ದ್ದಾರೆ. ಇಂದು ನಡೆದ ಕ್ಲಬ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಂಕರ್‍ರಾವ್ ಅವಿ ರೋಧವಾಗಿ ಆಯ್ಕೆಯಾದರೆ, ಕಾರ್ಯ ದರ್ಶಿಯಾಗಿ ಎಂ.ತಿರುಮಲಾ ಬಾಬು (165) ಆಯ್ಕೆಯಾದರು.

ರೆಸಿಡೆಂಟ್ ಕಮಿಟಿ ಸದಸ್ಯರಾಗಿ ವಿ. ಸುನಿಲ್ (286), ಟಿ.ಹೆಚ್.ಸಂಜಯ್ ಅರಸ್ (282), ಎಸ್.ಎಲ್.ರಾಮಚಂದ್ರ (272), ಅಶ್ವಿನ್ ಆರ್. ಪಾಲೇಕಾರ್ (257), ಗಫರ್ ಇಕ್ಬಾಲ್ (252), ಎಂ.ಡಿ.ಚಂದ್ರಶೇಖರ್ (235) ಹಾಗೂ ನಾನ್ ರೆಸಿಡೆಂಟ್ ಸದಸ್ಯರಾಗಿ ಭರತ್ ಶ್ರೀನಿವಾಸ್ (321) ಮತ್ತು ಹೆಚ್.ಸಿ. ದಾಸೇಗೌಡ (312) ಆಯ್ಕೆಯಾಗಿದ್ದಾರೆ.

Translate »