‘ಯುವರತ್ನ’ ಚಿತ್ರ ವೀಕ್ಷಣೆ: ಅಗಲಿದ  ಮಗನ ಆಸೆ ಈಡೇರಿಸಿದ ಪೋಷಕರು
ಮೈಸೂರು

‘ಯುವರತ್ನ’ ಚಿತ್ರ ವೀಕ್ಷಣೆ: ಅಗಲಿದ ಮಗನ ಆಸೆ ಈಡೇರಿಸಿದ ಪೋಷಕರು

April 6, 2021

ಮೈಸೂರು, ಏ.5(ಎಂಟಿವೈ)- ಅಕಾಲಿಕ ಮರಣಕ್ಕೀಡಾದ ಪುತ್ರನ ಫೋಟೊಗೂ ಟಿಕೆಟ್ ಖರೀದಿಸಿ `ಯುವರತ್ನ’ ಸಿನಿಮಾ ವೀಕ್ಷಣೆ ಮಾಡುವ ಮೂಲಕ ಪೋಷಕರು ಅಗಲಿದ ಮಗನ ಆಸೆ ನೆರವೇರಿಸಿದ್ದಾರೆ.

ಮೈಸೂರಿನ ಕುವೆಂಪುನಗರದ ನಿವಾಸಿ ಮುರಳೀಧರ್ ಅವರ ಪುತ್ರ ಹರಿಕೃಷ್ಣನ್ ಕಳೆದ 4 ತಿಂಗಳ ಹಿಂದೆ ಸ್ನೇಹಿತರೊಂದಿಗೆ ವರುಣಾ ನಾಲೆಗೆ ಈಜಲು ಹೋಗಿದ್ದಾಗ, ನೀರಲ್ಲಿ ಮುಳುಗಿ ಮೃತಪಟ್ಟಿದ್ದ. ಪುನೀತ್‍ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಹರಿ ಕೃಷ್ಣನ್ ಯುವರತ್ನ ಸಿನಿಮಾ ನೋಡುವ ಹಂಬಲ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಆದರೆ, ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಆತ ಇಹಲೋಕ ತ್ಯಜಿಸಿದ್ದ.

ಅವನ ಆಸೆಯಂತೆ ಪಾಲಕರು ಮಗನ ಫೆÇೀಟೊದೊಂದಿಗೆ, ಅವನ ಹೆಸರಲ್ಲೂ ಟಿಕೆಟ್ ಖರೀದಿಸಿ ಸಿನಿಮಾ ನೋಡಿದರು. ಮೈಸೂರಿನ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀP್ಷÀಣೆ ಮಾಡಿದ್ದು ನೆರೆದ ಇನ್ನಿತರ ಪ್ರೇಕ್ಷಕರಲ್ಲಿ ದುಃಖದ ಛಾಯೆ ಮೂಡಿಸಿತು. ಈ ಕುರಿತು ಪತ್ರಕರ್ತರೊಂದಿಗೆ ಮುರಳೀಧರ್ ಮಾತನಾಡಿ, ನನ್ನ ಮಗ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಅಭಿಮಾನಿ. ಅವನನ್ನು ಬಿಟ್ಟು ನಾವು ಸಿನಿಮಾ ನೋಡಲು ಮನಸ್ಸಾಗಲಿಲ್ಲ. ಹೀಗಾಗಿ, ಅವನಿಗೂ ಒಂದು ಟಿಕೆಟ್ ತೆಗೆದುಕೊಂಡು, ಅವನ ಫೆÇೀಟೊ ಇಟ್ಟುಕೊಂಡು ಸಿನಿಮಾ ವೀಕ್ಷಣೆ ಮಾಡಿz್ದÉೀವೆ’ ಎಂದು ಕಣ್ಣೀರಿಟ್ಟರು. ಈ ಹೃದಯ ಕಲಕುವ ಪ್ರಸಂಗಕ್ಕೆ ಸಂಬಂಧಿಸಿದಂತೆ ನಟ ಪುನೀತ್‍ರಾಜ್ ಕುಮಾರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿz್ದÁರೆ. `ಮೈಸೂರಿನ ಮುರಳೀಧರ್ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೆÇೀಟೊ ಜತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ಕಂಡು ನನ್ನ ಮನಸ್ಸು ಭಾರವಾಯಿತು. ಮೃತ ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಾಂತ್ವನ ಹೇಳಿದ್ದಾರೆ.

Translate »