ಅಕ್ಷಯ ತೃತೀಯ: ಆತಂಕದಲ್ಲಿದ್ದ ಆಭರಣ ಮಳಿಗೆ ಮಾಲೀಕರಿಗೆ ಕೊನೆಗೂ ನಿರಾಳ
ಮೈಸೂರು

ಅಕ್ಷಯ ತೃತೀಯ: ಆತಂಕದಲ್ಲಿದ್ದ ಆಭರಣ ಮಳಿಗೆ ಮಾಲೀಕರಿಗೆ ಕೊನೆಗೂ ನಿರಾಳ

April 19, 2018

ಮೈಸೂರು: ಅಕ್ಷಯ ತೃತೀಯ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ವಿವಿಧ ಆಭರಣಗಳ ಮಳಿಗೆಗಳಲ್ಲಿ ಬುಧವಾರ ಗ್ರಾಹಕರು ಮುಗಿ ಬಿದ್ದು, ಆಭರಣ ಖರೀದಿಸಿದರು.

ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆ ಯಲ್ಲಿ ಬಾರಿ ಅಕ್ಷಯ ತೃತೀಯ ದಿನ ದಂದು ಆಭರಣ ಖರೀದಿಸಲು ಜನರು ಹಿಂದೇಟು ಹಾಕಲಿದ್ದಾರೆ ಎಂಬ ಆತಂಕ ದಲ್ಲಿದ್ದ ವ್ಯಾಪಾರಿಗಳಿಗೆ ನಿರಾಳ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿ ದರೆ ಒಳಿತಾಗಿ, ಸಂಪತ್ತು ವೃದ್ಧಿಯಾಗು ತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದಲೇ ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ ಒಡವೆ ಖರೀದಿಸಿದರು. ಗ್ರಾಹಕರನ್ನು ಆಕರ್ಷಿಸಲು ಆಭರಣ ಮಳಿಗೆಗಳನ್ನು ಅಲಂಕರಿಸಲಾಗಿತ್ತು.  ಆದರೆ ಇಂದು ಬೆಳಿಗ್ಗೆ ಗ್ರಾಹಕರಿಲ್ಲದೆ ಅಂಗಡಿ ಗಳ ಮಾಲೀಕರಿಗೆ ಆತಂಕ ಉಂಟಾಗಿತ್ತು. ಆದರೆ 11.30 ನಂತರವಷ್ಟೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಭರಣದ ಖರೀದಿಸಲು ಅಂಗಡಿಗಳಿಗೆ ಮುಗಿ ಬಿದ್ದಿದ್ದರಿಂದ ವರ್ತಕರ ಆತಂಕ ದೂರವಾಯಿತು.

ಸಂಜೆಯವರೆಗೂ ಎಡೆಬಿಡದೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಆಭರಣ ಖರೀದಿಸಿದರು. ಮೈಸೂರಿನ ಅಶೋಕ ರಸ್ತೆ, ಮೈಸೂರುಬೆಂಗಳೂರು ರಸ್ತೆ, ಅರಸು ರಸ್ತೆ, ಒಂಟಿಕೊಪ್ಪಲು, ಅಗ್ರಹಾರ, ಚಾಮುಂಡಿ ಪುರಂ, ವಿದ್ಯಾರಣ್ಯಪುರಂ, ಕುವೆಂಪುನಗರ, ಟಿ.ಕೆ.ಲೇಔಟ್ ಸೇರಿದಂತೆ ವಿವಿಧ ರಸ್ತೆ ಗಳಲ್ಲಿರುವ ಚಿನ್ನಾಭರಣ ಅಂಗಡಿಗಳಲ್ಲಿ ಉತ್ತಮ ವಹಿವಾಟು ನಡೆಯಿತು.

ಬಹುತೇಕ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಹಿಂದೆಯೇ ಕಾಯ್ದಿರಿಸಿದ್ದ ಆಭರಣ ವನ್ನು ಇಂದು ಪಡೆದುಕೊಂಡರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಳಿಗೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹದ್ದಿನ ಕಣ್ಣಿಡಲಾಗಿತ್ತು. ಗ್ರಾಹಕರ ಸೋಗಿ ನಲ್ಲಿ ಬಂದು ಆಭರಣಗಳನ್ನು ಕಳವು ಮಾಡುವ ಖದೀಮರ ಬಗ್ಗೆ ಮಳಿಗೆಗಳಲ್ಲಿ ಎಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು. ಅನುಮಾನಾಸ್ಪದ ಗ್ರಾಹಕರನ್ನು ಗಮನಿಸುವುದಕ್ಕಾಗಿಯೇ ಕೆಲವು ಮಳಿಗೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಜೊತೆಗೆ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ಚಿತ್ರಣಗಳ ಗಮನಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿತ್ತು.

ಬಾರಿ ಅಕ್ಷಯ ತೃತೀಯ ದಿನದಂದು ಗ್ರಾಹಕರು ಆಗಮಿಸುವುದಿಲ್ಲ ಎಂಬ ಆತಂಕ ಕಾಡುತ್ತಿತ್ತು. ಕಳೆದ ಒಂದು ವಾರದಿಂದಲೇ ಪತ್ರಿಕೆಗಳಲ್ಲಿ ಅಕ್ಷಯ ತೃತೀಯ ದಿನದಂದು ಆಭರಣ ಮಳಿಗೆಗಳ ಮೇಲೆ ತೆರಿಗೆ ಇಲಾಖೆಯ ಕೆಂಗಣ್ಣು ಎಂದು ಪ್ರಕಟವಾಗಿರುವ ವರದಿ ಯಿಂದ ಗ್ರಾಹಕರು ಹೆದರಿ ಆಭರಣ ಖರೀದಿ ಸಲು ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ಇಂದು ಎಲ್ಲಾ ಮಳಿಗೆಗಳಲ್ಲಿಯೂ ಶೇ.60ರಷ್ಟು ವಹಿವಾಟು ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಾರಿ ಶೇ.40 ರಷ್ಟು ವಹಿವಾಟು ಕಡಿಮೆ. ಹಿಂದೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಗಳು ನೀಡಿರುವ ಸಲಹೆ ಹಾಗೂ ಸೂಚನೆ ಯನ್ನು ಪಾಲಿಸಿ ಆಭರಣಗಳ ಮಾರಾಟ ಮಾಡಲಾಗಿದೆ. ಎಲ್ಲಾ ಮಳಿಗೆಗಳಲ್ಲಿಯೂ ಎಲ್ಲಾ  ಗ್ರಾಹಕರಿಂದ  ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಸಿ.ಎಸ್.ಅಮರ್ನಾಥ್, ಅಧ್ಯಕ್ಷರು,ಶ್ರಾಫ್ (shroff) ವರ್ತಕರ ಸಂಘ, ಮೈಸೂರು.

ದಾಖಲೆ ಇದ್ದರೆ ಮಾತ್ರ: ಭಾರೀ ಮೌಲ್ಯದ ಆಭರಣ ಖರೀದಿಸುವವರು ಕೆಲವು ದಾಖಲೆ ಗಳ ಪ್ರತಿಯನ್ನು ನೀಡಿದರೆ ಮಾತ್ರ ಆಭರಣ ಕೊಳ್ಳುವುದಕ್ಕೆ ಅಂಗಡಿ ಮಾಲೀಕರು ಅವಕಾಶ ಕಲ್ಪಿಸಿದ್ದರು. ಚುನಾವಣಾ ಆಯೋಗದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ವರ್ತಕರು, 50 ಸಾವಿರ ರೂ. ಮೇಲ್ಪಟ್ಟು ಆಭರಣ ಖರೀದಿಸಿದ ಗ್ರಾಹಕರಿಂದ ಮತ ದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇವುಗಳಲ್ಲಿ ಒಂದನ್ನು ಪಡೆದುಕೊಂಡರು. ಕೆಲವರು ಯಾವುದೇ ದಾಖಲೆ ತರದೆ ಆಭರಣ ಕೇಳಿದರೆ ಚೆಕ್ ಅಥವಾ ಎಟಿಎಂ ಕಾರ್ಡ್ ಮೂಲಕ ಪಾವತಿಸಿದರೆ ಮಾತ್ರ ಆಭರಣ ನೀಡುವು ದಾಗಿ ತಿಳಿ ಹೇಳಿದರು.

ಬಡವರಿಂದ ಶ್ರೀಮಂತರವರೆಗೂ: ಅಕ್ಷಯ ತೃತೀಯ ದಿನದ ಹಿನ್ನೆಲೆಯಲ್ಲಿ ಆಭರಣದ ಮಳಿಗೆಗಳಲ್ಲಿ ಬಡವರು, ಮಧ್ಯಮ ವರ್ಗ ದವರಿಂದ ಶ್ರೀಮಂತರವರೆಗೂ ಆಭರಣ ಖರೀದಿಸಿದರು. ಇಂದು ಚಿನ್ನ ಖರೀದಿಸಿ ದರೆ  ಒಳಿತಾಗುತ್ತದೆ  ಎಂಬ  ನಂಬಿಕೆ ಇರುವುದರಿಂದ  ಬಡವರು  ಹಾಗೂ ಮಧ್ಯಮ ವರ್ಗದ ಜನರು 10ರಿಂದ 30 ಸಾವಿರ ರೂ.ವರೆಗೆ ಚಿನ್ನಾಭರಣ ಖರೀದಿಸಿದರೆ, ಕೆಲವು ಮಳಿಗೆಗಳಲ್ಲಿ ಶ್ರೀಮಂತ ವರ್ಗ ಹಾಗೂ ಮದುವೆ ಮನೆಯವರು ಎರಡರಿಂದ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದರು.

 

Translate »