ಮೈಸೂರು: ಬಿಜೆಪಿ ಎಂದರೆ ಅದು ಪಾರ್ಟಿ ಆಫ್ ಕ್ರಿಮಿನಲ್ಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು. ಮೈಸೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಕ್ರಿಮಿನಲ್ಗಳು ಎಂದರು. ಹಿಂದು ಹುಲಿ ಹತ್ಯೆಗೆ ಸಂಚು ನಡೆದಿದ್ದು, ಇದರಲ್ಲಿ ಸಿಎಂ ನೇರ ಕಾರಣ ಎಂದು ಸಂಸದ ಪ್ರತಾಪ್ಸಿಂಹ ಆರೋಪ ಮಾಡಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಇಷ್ಟೊಂದು ಕೀಳು ಮಟ್ಟದ ಕ್ರಿಮಿನಲ್ ಬ್ರೈನ್ ಬಿಜೆಪಿಯವರದ್ದು. ಅವರ ಮನಸ್ಥಿತಿ ಎಂಥಾದ್ದು ಎಂಬುದು ಇದರಿಂದ ತಿಳಿಯುತ್ತದೆ. ನಾನೂ ಕೂಡ ಹಿಂದೂ. ಜಾತ್ಯತೀತ ಹಿಂದೂ. ಸಿಂಹ, ಹೆಗಡೆ ಗಿಂತಲೂ
ಟಿಕೆಟ್ ಗೊಂದಲ ಸರಿಪಡಿಸುತ್ತೇವೆ
ಟಿಕೆಟ್ ಹಂಚಿಕೆಯಲ್ಲಿ ಕೆಲವೆಡೆ ಗೊಂದಲ ಆಗಿದ್ದು ಬಿಟ್ಟರೆ ಬೇರೆ ಕಡೆ ಸಮಸ್ಯೆ ಇಲ್ಲ. ಅಸಮಾಧಾನ ವ್ಯಕ್ತವಾಗಿರುವ ಕಡೆಗಳಲ್ಲಿ ಗೊಂದಲ ಸರಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಾನಗಲ್ನ ಕೆಲವು ಮುಖಂಡರು ಬಂದು ಚರ್ಚಿಸಿದ್ದಾರೆ. ಈಗಾಗಲೇ ಬಿ.ಫಾರಂ ಹಂಚಿಕೆಯಾ ಗಿದೆ. ಮತ್ತೊಮ್ಮೆ ಗ್ರೌಂಡ್ ರಿಪೋರ್ಟ್ ಪಡೆದು ಹೈ ಕಮಾಂಡ್ಗೆ ಕಳುಹಿಸಲಾಗುವುದು ಎಂದರು.
ಸಿಎಂ ಭೇಟಿ ಮಾಡಿದ ಬಿ.ಸಿ.ಪಾಟೀಲ್
ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಈ ವೇಳೆ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣವಿದೆ. ಬ್ಯಾಡಗಿ ಕ್ಷೇತ್ರದ ಆಕಾಂಕ್ಷಿ ಬಸವರಾಜ್ ಶಿವಣ್ಣರಿಗೆ ಟಿಕೆಟ್ ತಪ್ಪಿದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಶಿವಣ್ಣ ಕಾಂಗ್ರೆಸ್ ತೊರೆಯುವುದಿಲ್ಲ, ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ದೊಡ್ಡ ಹಿಂದೂ ಎಂದು ಹೇಳಿದರು.