ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ
ಹಾಸನ

ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ

August 9, 2018

ಹಾಸನ: ಮಹಿಳೆ ಅತ್ಯಾಚಾರ ಆರೋಪಿಗೆ 30 ಸಾವಿರ ರೂ. ಡಂಡ, 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ.

ಗುಳ್ಳೇನಹಳ್ಳಿ ಗ್ರಾಮದ ನಿವಾಸಿ ಟ್ರಾಕ್ಟರ್ ಡ್ರೈವರ್ ಮುಜಾಯಿದ್ ಪಾಷಾ ಶಿಕ್ಷೆಗೆ ಗುರಿಯಾದವ. ಈತ ಗ್ರಾಮದ ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದ. ಅತ್ಯಾಚಾರಕ್ಕೊಳಗಾದ ಮಹಿಳೆ ನಗರದ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಆರಕ್ಷಕ ಉಪ ನಿರೀಕ್ಷಕ ದೇವೇಂದ್ರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ಆರೋಪ ಪಟ್ಟಿ ಸಲ್ಲಿಸಿ ದ್ದರು. ಆರೋಪಿಯ ಕೃತ್ಯ ಸಾಕ್ಷಿ-ಪುರಾವೆಗಳೊಂದಿಗೆ ಸಾಬೀತಾದ ಹಿನ್ನೆಲೆ 5ನೇ ಅಧಿಕ ಜಿಲ್ಲಾ, ಸತ್ರ ನ್ಯಾಯಾಲಯ ನ್ಯಾ.ಸಂತೋಷ್ ಗಜಾನನ ಭಟ್ ಅತ್ಯಾಚಾರಿಗೆ 30 ಸಾವಿರ ರೂ. ಡಂಡ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿ ದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲರಾಜೇಗೌಡ ವಾದ ಮಂಡಿಸಿದ್ದರು.

Translate »