ಈಜು ತರಬೇತಿ ಗೋಜಲುಗಳು
ನಿಮ್ಮ ಪತ್ರಗಳು

ಈಜು ತರಬೇತಿ ಗೋಜಲುಗಳು

ಮಾನ್ಯರೆ,

ಬೇಸಿಗೆಯ ರಜೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈಜು ತರಬೇತಿ ಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಗಿಜಿಗುಡುತ್ತಿದ್ದಾರೆ. ಇತ್ತೀಚೆಗಷ್ಟೆ ಈಜುಕೊಳ  ನವೀಕರಣ ಗೊಂಡು ಮತ್ತಷ್ಟು ಸುಂದರವಾಗಿದೆ. ಮೈಸೂರಿನಲ್ಲಿ ಈಜುಕೊಳಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.

ಮೈಸೂರು ವಿವಿಯ ವಿದ್ಯಾರ್ಥಿ ಗಳು ಮೊದಲೇ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ತೋರಿಸಿದರೆ ಪ್ರವೇಶವಿರಬೇಕಿತ್ತು. ಆದರೂ ಈಜುಕೊಳಕ್ಕೆ 12 ರೂ.ಗಳ ಪ್ರವೇಶ ದರವಿದ್ದು ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ನಿಗದಿಗಿಂತ ಹೆಚ್ಚಿನ ದರ ನೀಡಿದರೂ  ಈಜಿಗಾಗಿ ಯಾವುದೇ ಗ್ಲಾಸ್, ಕ್ಯಾಪ್ ಬೇಕಾದ ಇತರ ವಸ್ತುಗಳನ್ನು ನೀಡುತ್ತಿಲ್ಲ. ಯಾವುದೇ ತರಬೇತಿದಾರರು ಈಜು ತರಬೇತಿಯನ್ನು ನೀಡುತ್ತಿಲ್ಲ. ವಿವಿಯ ವಿದ್ಯಾರ್ಥಿಗಳನ್ನು  ಹೊರತುಪಡಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ದುಬಾರಿ ದರದ ಜೊತೆಗೆ ಪ್ರವೇಶ ದರದ ಟಿಕೆಟ್ ನೀಡುತ್ತಿದ್ದಾರೆ. ಈಜು ತರಬೇತಿಯ ಕಾಲಾವಕಾಶವನ್ನು ಹೆಚ್ಚಿಸಬೇಕಾಗಿದೆ.  ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ.

ಹರೀಶ್ಶಾಕ್ಯ ಚಿಕ್ಕಬೇಗೂರು, ಗುಂಡ್ಲುಪೇಟೆ ತಾ., ತಾ. 14.4.2018

April 19, 2018

Leave a Reply

Your email address will not be published. Required fields are marked *