ಅಘೋಷಿತ ಮಹಿಳಾ ಮೀಸಲು ಕ್ಷೇತ್ರ ಶ್ರೀರಂಗಪಟ್ಟಣ!: ಅರಕೆರೆಯ ಎರಡು ಕುಟುಂಬಗಳ ನಾಯಕರದ್ದೇ ಅಧಿಪತ್ಯ
ಮಂಡ್ಯ

ಅಘೋಷಿತ ಮಹಿಳಾ ಮೀಸಲು ಕ್ಷೇತ್ರ ಶ್ರೀರಂಗಪಟ್ಟಣ!: ಅರಕೆರೆಯ ಎರಡು ಕುಟುಂಬಗಳ ನಾಯಕರದ್ದೇ ಅಧಿಪತ್ಯ

April 19, 2018

ವರದಿ: ನಾಗಯ್ಯ ಲಾಳನಕೆರೆ

ಮಂಡ್ಯ:  ಮಂಡ್ಯ ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರಗಳಿವೆ, ಒಂದು ಅಧಿಕೃತ ಎಸ್ಸಿ ಮೀಸಲು ಕ್ಷೇತ್ರ ಮಳವಳ್ಳಿಯಾದರೆ, ಇನ್ನೊಂದು ಶ್ರೀರಂಗಪಟ್ಟಣ ಅಘೋಷಿತ ಮಹಿಳಾ ಮಿಸಲು ಕ್ಷೇತ್ರವೆನಿಸಿಕೊಂಡಿದೆ. ಎರಡೂ ಕ್ಷೇತ್ರಗಳ ಪೈಕಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ 15 ಭಾರಿ ಚುನಾವಣೆ ನಡೆದಿದೆ. ಒಂದು ಚುನಾವಣೆ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆ ಯಲ್ಲೂ ಅರಕೆರೆ ಗ್ರಾಮವೊಂದರಿಂದಲೇ ಒಬ್ಬರಲ್ಲ ಒಬ್ಬರು ಸ್ಪರ್ಧಿಸುತ್ತಾ ಬಂದಿದ್ದು ರಾಜಕೀಯ ಅಧಿ ಪತ್ಯ ಸಾಧಿಸಿದ ವಿಶೇಷತೆಯನ್ನೂ ಹೊಂದಿದೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮತ ದಾರರು ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಪಾರ್ವತಮ್ಮ ಶ್ರೀಕಂಠಯ್ಯ, ದಮಯಂತಿ ಬೋರೇಗೌಡ ಸೇರಿ ದಂತೆ ಮೂವರು ಮಹಿಳೆಯರನ್ನು ಶಾಸಕಿಯರ ನ್ನಾಗಿ ಆಯ್ಕೆ ಮಾಡುವ ಮೂಲಕ ಅಘೋಷಿತ ಮಹಿಳಾ ಮೀಸಲು ಕ್ಷೇತ್ರವೆಂಬ ಖ್ಯಾತಿಗೆ ಪಾತ್ರ ವಾಗಿದೆ. ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಮತ್ತು ಪಾರ್ವತಮ್ಮ ಶ್ರೀಕಂಠಯ್ಯ ಅವರು ಮಾತ್ರ ಅನುಕಂಪದ ಅಲೆಯ ಮೇಲೆ ಶಾಸಕಿಯರಾಗಿ ದ್ದರೆ, ದಮಯಂತಿ ಬೋರೇಗೌಡ ತಮ್ಮ ಸ್ವಂತ ವರ್ಚಸ್ಸಿನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಅರಕೆರೆ ಗ್ರಾಮವೊಂದೇ 7 ಮಂದಿ ಶಾಸಕ ರನ್ನು ಪಡೆದ ಕೀರ್ತಿಗೆ ಪಾತ್ರವಾಗಿದೆ. ಒಂದೇ ಕ್ಷೇತ್ರ ದಿಂದ ಮೂವರು ಮಹಿಳೆಯರು ಶಾಸಕರಾಗಿ ರುವುದು ಜಿಲ್ಲೆಯ ಮಟ್ಟಿಗೆ ದಾಖಲೆಯಾಗಿದೆ.

ಅರಕೆರೆ ಗ್ರಾಮದ ಬಂಡಿಸಿದ್ದೇಗೌಡರ ಕುಟುಂಬ, ಶ್ರೀಕಂಠಯ್ಯನವರ ಕುಟುಂಬದವರು ಏಳಕ್ಕೂ ಹೆಚ್ಚು ಚುನಾವಣೆಯಲ್ಲಿ ಎದುರಾಳಿಗಳಾಗಿದ್ದಾರೆ. ಬಂಡಿಸಿದ್ದೇಗೌಡರ ಕುಟುಂಬದವರು 32 ವರ್ಷ ಶಾಸಕರಾಗಿದ್ದಾರೆ, .ಸಿ. ಶ್ರೀಕಂಠಯ್ಯ ಅವರ ಕುಟುಂಬಕ್ಕೆ ಚುಂಚೇಗೌಡರು ಸೇರಿದಂತೆ 10 ವರ್ಷ ಅಧಿಕಾರವನ್ನೊಂದಿದ್ದ ದಾಖಲೆಯಿದೆ. 4 ದಶÀಕಕ್ಕೂ ಹೆಚ್ಚು ಅವಧಿಯಲ್ಲಿ ಅರಕೆರೆ ಗ್ರಾಮ ದವರೇ ಶಾಸಕರಾಗಿದ್ದಾರೆ, ಇಂತಹ ನಿದರ್ಶನ  ಬಹುಶಃ ರಾಜ್ಯದ ಬೇರೆ ಯಾವ ಕ್ಷೇತ್ರದಲ್ಲೂ ಸಿಗಲಾರದು. ಏಳು ಭಾರಿ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸುವ .ಸಿ.ಶ್ರೀಕಂಠಯ್ಯವರಿಗೆ ಸಾಯುವ ತನಕವೂ ವಿಜಯಲಕ್ಷ್ಮಿ ಒಲಿಯು ವುದೇ ಇಲ್ಲ. ಕೊನೆಗೆ ಅವರ ಸಾವಿನ ನಂತರ ಅನುಕಂಪದ ಅಲೆಯಲ್ಲಿ ಶ್ರೀಕಂಠಯ್ಯ ಪತ್ನಿ ಪಾರ್ವತಮ್ಮ ಶಾಸಕರಾಗಿದ್ದಾರೆ.

ಪ್ರಸಕ್ತ ವರ್ಷ 2018 ಚುನಾವಣೆಯಲ್ಲಿಯೂ ಶ್ರೀರಂಗಪಟ್ಟಣ ಕ್ಷೇತ್ರ ವಿಶಿಷ್ಟತೆ ಪಡೆದುಕೊಂಡಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ನಲ್ಲಿದ್ದ ರಮೇಶ್ಬಾಬು ಬಂಡಿಸಿದ್ದೇಗೌಡ ಕಾಂಗ್ರೆಸ್ ನಿಂದ, ಕಾಂಗ್ರೆಸ್ನಲ್ಲಿದ್ದ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ನಿಂದ ಕಣಕ್ಕಿಳಿದರೆ, ರೈತ ಸಂಘದಲ್ಲಿದ್ದು 6 ಬಾರಿ ಸೋತಿರುವ ಕೆ.ಎಸ್.ನಂಜುಂಡೇಗೌಡ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.

Translate »