ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ
ಮೈಸೂರು

ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ

April 19, 2018

ಹೆಚ್.ಡಿ. ಕೋಟೆ:  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ಕೋಟೆ ಕ್ಷೇತ್ರದಿಂದ . 20 ರಂದು ಜೆಡಿಎಸ್ ಅಭ್ಯರ್ಥಿಯಾಗಿ ಬೀಚನಹಳ್ಳಿ ಚಿಕ್ಕಣ್ಣ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿಕ್ಕಣ್ಣ ಅವರು ಮಾತನಾಡಿ, ಅಂದು ಪಟ್ಟಣದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೇಟಿಕುಪ್ಪೆ ರಸ್ತೆಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮಿನಿ ವಿಧಾನಸೌಧದಲ್ಲಿ ಮಧ್ಯಾಹ್ನ 1.30 ರಿಂದ 2.45 ರೊಳಗಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದರು. ತಾಲೂಕಿನ ಬಿಎಸ್ಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ನಾಮಪತ್ರ ಸಲ್ಲಿಕೆ ದಿನ ಹಲವಾರು ಮಂದಿ ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂದು ಚಿಕ್ಕಣ್ಣ ತಿಳಿಸಿದರು.

ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿ.ವಿ. ನಾಗರಾಜು, ಭಾರತಿ, ರಾಜೇಶ್, ಬಾಳಸ್ವಾಮಿ, ವೆಂಕಟೇಶ್, ಶಿವಯ್ಯ ಮತ್ತಿತರರು ಹಾಜರಿದ್ದರು.

Translate »