ಕಾರು ಡಿಕ್ಕಿ: ಪಾದಚಾರಿ ಸಾವು
ಮೈಸೂರು

ಕಾರು ಡಿಕ್ಕಿ: ಪಾದಚಾರಿ ಸಾವು

April 19, 2018

ಹುಣಸೂರು:  ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಪಟ್ಟಣದ ಯಶೋಧರಪುರ ಬಳಿಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕುಂದಹಳ್ಳಿ ಗ್ರಾಮದ ಪುಷ್ಪರಾಜ್ (52) ಮೃತರು. ಕೆಲಸದ ನಿಮಿತ್ತ ವಿರಾಜ ಪೇಟೆಯಿಂದ ಹುಣಸೂರಿಗೆ ಮಂಗಳ ವಾರ ಮಧ್ಯರಾತ್ರಿ ಬಂದ ಪುಷ್ಪರಾಜ್ ಯಶೋಧರಪುರ ಟೀ ಅಂಗಡಿ ಬಳಿ ಬಸ್ ಇಳಿದು ಪಿರಿಯಾಪಟ್ಟಣದ ಕಡೆಗೆ ಹೋಗುವ ಬಸ್ಗಾಗಿ ಕಾಯುತ್ತಿದ್ದರು. ವೇಳೆ ಟೀ ಕುಡಿಯುವುದಕ್ಕಾಗಿ ರಸ್ತೆ ದಾಟುತ್ತಿದ್ದಾಗ ಪಿರಿಯಾಪಟ್ಟಣದ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆ ದಿದೆ. ಪರಿಣಾಮ ತೀವ್ರ ಗಾಯ ಗೊಂಡಿದ್ದ ಅವರನ್ನು ಕಾರು ಚಾಲಕ ಮಂಜುನಾಥ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಲ್ಲಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ ಆನಂದ್ ತಿಳಿಸಿದ್ದಾರೆ.

 

Translate »