ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಜಗತ್ತು ಕಂಡ ದಾರ್ಶನಿಕ ಬಸವಣ್ಣ
ಹಾಸನ

ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಜಗತ್ತು ಕಂಡ ದಾರ್ಶನಿಕ ಬಸವಣ್ಣ

April 19, 2018

ಹಾಸನ: ಈಗಿನ ಸಂಸತ್ತಿನ ಮಾದರಿಯನ್ನು 12 ಶತಮಾನದಲ್ಲಿಯೇ ಯೋಚಿಸಿ ಅನುಭವ ಮಂಟಪವೆಂಬ ಹೆಸರಿನೊಂದಿಗೆ ಕಾರ್ಯರೂಪಕ್ಕೆ ತಂದಿ ದ್ದಂತಹವರು ಜಗತ್ತು ಕಂಡ ದಾರ್ಶನಿಕ ಬಸವಣ್ಣ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕø ಇಲಾಖೆಯಿಂದ ಹಾಸನಾಂಬ ಕಲಾಕ್ಷೇತ್ರ ದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇ ಶ್ವರರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನಗಳಿಂದಲೇ ಜಗತ್ಪ್ರಸಿದ್ಧಿ ಯಾದವರು. ಇಂತಹ ಮಹಾನ್ ಜ್ಞಾನಿ ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ವಿಶ್ವದಲ್ಲಿಯೇ ಬಸವಣ್ಣನವರ ಹೆಸರು ಅವಿಸ್ಮರಣೀಯವಾದುದು. ವಚನಗಳ ಮೂಲಕವೇ ಜಾತಿ ಅಸಮಾನತೆ ವಿರುದ್ಧ ದನಿ ಎತ್ತಿದ ಮಹಾನ್ ಪುರುಷ. ಇವರ ತಮ್ಮ ಕಾಲದಲ್ಲಿಯೇ ಮಹಿಳೆಯರಿಗೆ ಸಮಾಜ ದಲ್ಲಿ ಉತ್ತಮ ಸ್ಥಾನಮಾನ ದೊರೆಯು ವಂತೆ ಮಾಡಿದವರು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಕೆ.ಎಂ ಜಾನಕಿ ಮಾತನಾಡಿ, 12ನೇ ಶತಮಾನದಲ್ಲಿಯೇ ಹಲವಾರು ಸಮಾಜ ಮುಖಿ ಕಾರ್ಯ ಗಳನ್ನು ಕೈಗೊಳುವ ಮೂಲಕ ಜಗ ಜ್ಯೋತಿಯಾಗಿ ನಮ್ಮ ಸಮಾಜವನ್ನು ಬೆಳಗಿದ್ದಾರೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ತಮ್ಮ ಕೆಲಸವನ್ನು ತಾವೇ ಶ್ರದ್ದೆ ಮತ್ತು ನಿಷ್ಟೆಯಿಂದ ನಿರ್ವಹಿಸಬೇಕು. ಇದನ್ನು ಬಸವಣ್ಣನವರು ಮಾಡುವ ಮೂಲಕ ಸಮಾಜ ಮತ್ತು ತಮ್ಮ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಉಳಿದುಕೊಂಡಿ ದ್ದಾರೆ. ಆದ್ದರಿಂದ ನಾವು ಸಹ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಉತ್ತಮರಾಗೊಣ ಎಂದು ಸಲಹೆ ನೀಡಿದರು.

ಎವಿಕೆ ಕಾಲೇಜಿನ ಅಧ್ಯಾಪಕರಾದ ಡಾ.ಯತೀಶ್ವರ್ ಜಗಜ್ಯೋತಿ ಬಸವಣ್ಣ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಾಹಪುರವಾಡ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜ್ಯೋತಿ ವೈದ್ಯನಾಥನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ, ಕನ್ನಡ ಮತ್ತು ಸಂಸ್ಕø ಇಲಾಖೆ ಸಹಾಯಕ ನಿರ್ದೇಕ ವಿನೋದ್ಚಂದ್ರ  ಮತ್ತಿತರರಿದ್ದರು.

 

Translate »