ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ
ಹಾಸನ

ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ

April 19, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಐತಿಹಾಸಿಕ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀ ರಾಮೇಶ್ವರಸ್ವಾಮಿ ಮಹಾ ರಥೋ ತ್ಸವಕ್ಕೆ ರಾಮನಾಥಪುರ ನಾಡಕಚೇರಿ ಉಪ ತಹಶೀಲ್ದಾರ್ ಜಿ.ಸಿ.ಚಂದ್ರ ಹಾಗೂ ರಾಜಸ್ವ ನೀರೀಕ್ಷಕ ಸ್ವಾಮಿಯಿಮದ ಚಾಲನೆ ದೊರೆಯಿತು. ಭಕ್ತರು ಉತ್ಸವ ಮೂರ್ತಿಯನ್ನು ಹೊತ್ತ ದೊಡ್ಡ ರಥ ವನ್ನು ಎಳೆಯಲು ಪ್ರಾರಂಭಿಸಿದರು. ವಿಪ್ರರು, ಮಹಿಳೆಯರು ವೇದಮಂತ್ರಗಳನ್ನು ಪಠಿಸಿ ರಥ ಹಿಂಬಾಲಿಸಿದರು. ರಾಜ ಬೀದಿಯಲ್ಲಿ ಚಲಿಸಿದ ತೇರು, ಅದೇ ಮಾರ್ಗವಾಗಿ ಸುಸೂತ್ರವಾಗಿ ಸ್ವಸ್ಥಾನಕ್ಕೆ ತಲುಪಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂದಿಗೆ ಆಗಮಿ ಸಿದ್ದ ಸಾವಿರಾರು ಭಕ್ತರು ಇಡುಗಾಯಿ ಒಡೆದು ತೇರಿನತ್ತ ಹಣ್ಣುದವನ ಎಸೆದು ಭಕ್ತಿ ಸಮರ್ಪಿಸಿದರು.

ಪವಿತ್ರ ಜೀವನದಿ ಕಾವೇರಿಯಲ್ಲಿರುವ ವಹ್ನಿಪುಷ್ಕರಣಿ, ಗಾಯತ್ರೀ ಶಿಲೆ, ಗೋಗರ್ಭ, ಗೌತಮ ಶಿಲೆ, ಕುಮಾರ ಧಾರಾ ತೀರ್ಥಚಾತುರ್ಯುಗ ಶ್ರೀರಾಮೇ ಶ್ವರ, ಅಗಸ್ತ್ಯೇಶ್ವರ, ಅಂಜನೇಯಸ್ವಾಮಿ, ಪಟ್ಟಾಭಿರಾಮ ಮುಂತಾದ ದೇವಾಲಯಗಳಿಗೆ  ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಸ್ಥಾನದ ಸಮಿತಿಯ ಸದಸ್ಯರಾದ ರಘು, ಸಿದ್ದಯ್ಯ, ಕುಮಾರಸ್ವಾಮಿರಾವ್, ಕೇಶವ, ಮಹದೇವ್, ಉಮೇಶ್, ಸೋಮ ಶೇಖರ್, ಗಣೇಶಮೂರ್ತಿ, ಮುಂತಾದವ ರಿದ್ದರು. ಬೆಟ್ಟದಪುರ ಆಗಮ ವಿದ್ವಾನ್. ವೇ. ಶ್ರೀ ಎಚ್.ಆರ್.ಸತೀಶ್ಕಶ್ಯಪ, ಅರ್ಚಕ ಶ್ರೀನಿವಾಸಯ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರುಗಿದವು.

Translate »