ನಂಜನಗೂಡು: ತಾಲೂಕಿನ ಬಸವ ಬಳಗ ಒಕ್ಕೂಟದ ವತಿಯಿಂದ ಇಂದು ಬೆಳಿಗ್ಗೆ ವಿಶ್ವಗುರು ಬಸವಣ್ಣನವರ 885ನೇ ಜಯಂತಿಯ ಪ್ರಯುಕ್ತ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಹಾಗೂ ಕಾಲ್ನಡಿಗೆ ಜಾಥಾ ನಡೆಯಿತು.
ನಂತರ ಪ್ರಮುಖರು ಮಾತನಾಡಿ, 12ನೇ ಶತಮಾನದಲ್ಲಿ ಸಾಮಾನ್ಯರಾಗಿ ಹುಟ್ಟಿ, ಅಸಾಮಾನ್ಯರಾಗಿ ಬೆಳೆದು, ಕ್ರಾಂತಿ ಪುರುಷನಾಗಿ ಕಂಗೊಳಿಸಿ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳೆದ ಮಹಾ ಚೇತನ ಬಸವಣ್ಣನವರು ಕಂಡ ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ, ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಿದೆ ಎಂದರು.
ಮೆರವಣಿಗೆ ನಗರದ ವಿದ್ಯಾವರ್ಧಕ ಶಾಲಾ ಮೈದಾನದಿಂದ ನಗರದ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಸ್ವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಅನುರಾಗ ಮಕ್ಕಳ ಮನೆ, ಶರಣ ಸಂಸ್ಕøತಿ ಪ್ರಚಾರ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭಾ, ಬಸವಸೇನೆ (ವಿಶ್ವ) ಮತ್ತು ಅಖಂಡ ಲಿಂಗಾ ಯತ ಮಹಾಸಭಾ, ಅಖಿಲ ವೀರಶೈವ ಮಂಡಳಿ, ಕ್ರಾಂತಿಕಾರಿ ವೀರಶೈವ ಬಳಗ, ಗುರುಮಲ್ಲೇಶ್ವರ ವಿವಿಧೋದ್ದೇಶ ಸಹಕಾರ ಸಂಘ, ಗುರುಕಂಬಳೀಶ್ವರ ವಿವಿಧೋದ್ದೇಶ ಸಹಕಾರ ಸಂಘ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಸವ ಸೇವಾ ಸಮಿತಿ, ಶರಣ ಸಾಹಿತ್ಯ ಪರಿಷತ್ತು, ಶರಣಿ ವಿಶ್ವ ವಚನ ಫೌಂಡೇಷನ್ ಅಕ್ಕನ ಬಳಗ, ಸಹೃದಯ–ಬಾಂಧವ್ಯ–ಬೆಳಕು–ಸೇತುವೆ– ಸಹಕಾರ ಸಮಾನ ಮನಸ್ಕರ ಬಳಗ, ವೀರಶೈವ ಸಜ್ಜನರ ಸಂಘ, ಕಾಯಕಯೋಗಿ ಬಸವೇಶ್ವರರ ಸೇವಾ ಬಳಗ, ಬಸವ ಚೇತನ ಸಂಘ, ವೀರ ಶೈವ ಕೋ–ಆಪರೇಟಿವ್ ಸೋಸೈಟಿ, ವಚನ ಶಾಲೆ ದೇವಿರಮ್ಮನಹಳ್ಳಿ ಮತ್ತು ಎಲ್ಲಾ ಬಸವ ಬಳಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ದೇವಿರಮ್ಮನಹಳ್ಳಿ ಬಡಾವಣೆ ಯಲ್ಲಿ ಸಮಾನ ಮನಸ್ಕ ವೀರಶೈವ ಲಿಂಗಾ ಯತ ಗೆಳೆಯರ ಬಳಗಗಳ ಒಕ್ಕೂಟದ ವತಿ ಯಿಂದ ಬಸವ ಜಯಂತಿ ಹಾಗೂ ಸಿದ್ಧಗಂಗಾ ಶ್ರೀಗಳ 111ನೇ ಜಯಂತಿ ಮಹೋತ್ಸವ ವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂಬಂಧ ಸಂಜೆ 4 ರಿಂದ 6.30ರ ವರೆಗೆ ಏರ್ಪಡಿಸಲಾಗಿತ್ತು ಡಾ.ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಗಳನ್ನು ಸರ್ವಾಲಂಕೃತ ವಾಹನದಲ್ಲಿ ಇರಿಸಿ ಮೆರ ವಣಿಗೆ ನಡೆಸಲಾಯಿತು. ಈ ಸಂದರ್ಭ ದಲ್ಲಿ ನಾದಸ್ವರ, ನಂದಿಧ್ವಜ, ವೀರಗಾಸೆ, ಭಜನಾ ತಂಡ ಭಾಗವಹಿಸಿ ಆಕರ್ಷಕ ಮೆರವಣಿಗೆಯನ್ನು ನಡೆಸಲಾಯಿತು.
ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಶರಣ ಸಂಗಮ ಮಠಾಧ್ಯಕ್ಷ ನಾಗರಾಜೇಂದ್ರಸ್ವಾಮಿ ಯವರ ದಿವ್ಯ ಸಾನಿಧ್ಯದಲ್ಲಿ ಶರಣ ಸಂದೇಶ ವನ್ನು ಪೆÇ್ರ.ಮಲೆಯೂರು ಗುರುಸ್ವಾಮಿ ಯವರ ಉಪನ್ಯಾಸ ನಡೆಸಿಕೊಟ್ಟರು. ವಚನ ಗಾಯನ ಕಾರ್ಯಕ್ರಮವನ್ನು ಗುರುಕೃಪ ವಚನ ಮಂಡಳಿ ಮತ್ತು ವಚನ ನೃತ್ಯ ರೂಪಕ ವನ್ನು ರಮ್ಯ ಮತ್ತು ತಂಡದವರಿಂದ ಏರ್ಪ ಡಿಸಿದ್ದು ಆಕರ್ಷಣೀಯವಾಗಿತ್ತು. ಸಮಾನ ಮನಸ್ಕ ವೀರಶೈವ ಲಿಂಗಾಯತ ಗೆಳೆಯರ ಬಳಗಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.