ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ
ಮೈಸೂರು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ

June 23, 2018

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು, ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು ಈ ರೈಲಿಗೆ ಬೈಯಪ್ಪನಹಳ್ಳಿಯಿಂದ ಚಾಲನೆ ನೀಡಲಾಗಿದೆ.

ಪಿಕ್ ಟೈಂನಲ್ಲಿ ಮೆಟ್ರೋ ಪ್ರಯಾಣ ದುಸ್ತರವಾಗಿತ್ತು. ಹೆಚ್ಚು ಸಂಖ್ಯೆ ಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದ ರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸ ಬೇಕಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಕ್ಕಿದ್ದು, ನೇರಳೆ ಮಾರ್ಗ ದಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸಂಚಾರ

ಆರಂಭಿಸಲಿದೆ. ಬೈಯ್ಯಪ್ಪನಹಳ್ಳಿ ನಾಯಂಡಹಳ್ಳಿವರೆಗೂ ಆರು ಬೋಗಿಗಳು ಮೆಟ್ರೋ ರೈಲಿಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯ ಮಂತ್ರಿ ಡಾ.ಜಿ ಪರಮೇಶ್ವರ್ ಅವರು ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್‍ವರೆಗೂ ಸಂಚಾರ ಮಾಡಿದರು. ಮೊದಲಿಗೆ ಮೂರು ಬೋಗಿಗಳಲ್ಲಿ 900 ಮಂದಿ ಮಾತ್ರ ಪ್ರಯಾಣಿ ಸಬಹುದಿತ್ತು. ಇದೀಗ ಮೂರು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಿರು ವುದರಿಂದ ಒಟ್ಟಾರೆ 1800 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣ ಮಾಡಬಹುದು.

Translate »