ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ
ಮೈಸೂರು

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ

April 19, 2018

ಹುಣಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಸರ್ಕಾರಿ ಕಾಮಗಾರಿ ಆರಂಭಿಸಲಾಗಿದೆ.

ಪಟ್ಟಣದ ಎಪಿಎಂಸಿ ಯಾರ್ಡ್ ಜಿಬ್ಲಾಕ್ನಲ್ಲಿ ಪ್ರಾಂಗಣ ವಿಸ್ತರಣಾ ಕಾಮಗಾರಿಗೆ ಮಂಡ್ಯದ ಮುರಳೀಧರ್ ಎಂಬುವವರಿಗೆ 2017-18ನೇ ಸಾಲಿನಲ್ಲಿ ಟೆಂಡರ್ ನೀಡಲಾಗಿತ್ತು.

ಆದರೆ ಕಾಮಗಾರಿ ಯನ್ನು .16ರಂದು ಆರಂ ಭಿಸಿದ್ದಾರೆ. ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋ ಪಿಸಿದ್ದಾರೆ. ಮಾ.27 ರಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ಸಹ ಕಾರ್ಮಿಕರು ಕೆಲಸದಲ್ಲಿ ಕಾರ್ಯನಿರತರಾಗಿದ್ದು, ಸ್ಥಳದಲ್ಲಿ ಕಬ್ಬಿಣ, ಜಲ್ಲಿ ಸುರಿದು ಇತರೆ ಕಾರ್ಯ ಗಳು ಪ್ರಗತಿಯಲ್ಲಿರುವುದನ್ನು ಕಾಮಗಾರಿ ಜಾಗದಲ್ಲಿ ಕಾಣಬಹುದು.

ಸ್ಥಳೀಯ ತರಕಾರಿ ವ್ಯಾಪಾರಸ್ಥತರಾದ ವಾಹೀದ್ ಶರೀಫ್, ಮುಜೀಬ್ ಮುನ್ನ, ಶಫಿವುಲ್ಲ, ಅಕ್ಬರ್ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Translate »