ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಮೈಸೂರು

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

August 19, 2018

ನಂಜನಗೂಡು: ಕಪಿಲಾ ನದಿಯಿಂದ ಜಲಾವೃತಗೊಂಡಿರುವ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮತ್ತು ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆಯಿಂದ ಜಲಾವೃತವಾಗಿರುವ ತೋಪಿನ ಬೀದಿ, ಹೆಜ್ಜಿಗೆ ಸೇತುವೆ, ಮಲ್ಲನಮೂಲೆ ಮಠ, ತಾಲೂಕಿನ ಬೊಕ್ಕಹಳ್ಳಿ, ಇಮ್ಮಾವು, ದೇವಾಲಯದಲ್ಲಿ ತೆರೆದಿರುವ ಗಿರಿಜಾ ಕಲ್ಯಾಣದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದ ರಾಮಯ್ಯ ಅವರು ನಾನು ಸಣ್ಣ ಹುಡುಗನಾಗಿದ್ದಾಗ ನಮ್ಮ ಊರಿನ ಪಕ್ಕದ ಗ್ರಾಮದ ಎಡಕೊಳದಲ್ಲಿ ಪ್ರವಾಹ ಬಂದಿತ್ತು. ಅಲ್ಲದೆ ಕಳೆದ 26 ವರ್ಷಗಳ ಹಿಂದೆಯೂ ಇದೇ ರೀತಿಯಾದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಈಗ ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಧಾರಾ ಕಾರ ಮಳೆಯಿಂದಾಗಿ ತಗ್ಗು ಪ್ರದೇಶದ ಗ್ರಾಮಗಳಿಗೆ ಬಡಾವಣೆಗಳಿಗೆ ನೀರು ನುಗ್ಗಿದೆ. ನೆರೆ ಸಂತ್ರಸ್ತರಿಗೆ ಶ್ರೀಕಂಠೇಶ್ವರ ದೇವಾಲಯದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಗಂಜಿ ಕೇಂದ್ರ ತೆರೆದಿದ್ದು ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದೇನೆ ಎಂದರು.

ನೆರೆ ಸಂತ್ರಸ್ತರು ಆಗಿಂದಾಗ್ಗೆ ಇದೇ ರೀತಿಯ ಪ್ರವಾಹ ಬಂದು ಬವಣೆ ಪಡುತ್ತಿದ್ದೇವೆ ಆದ್ದರಿಂದ ತಗ್ಗು ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ. ಮುಖ್ಯಮಂತ್ರಿ, ಕಂದಾಯ ಮಂತ್ರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಒದಗಿಸಲಾಗು ವುದು ಎಂದು ಹೇಳಿದರು. ನೆರೆಯಿಂದ ಹಾನಿಗೀಡಾಗಿರುವ ಬೆಳೆಗಳ ಅಂದಾಜು ಪಟ್ಟಿ ತಯಾರಿಸುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಿದ್ದು ನೆರೆಯಿಂದ ಹಾನಿ ಗೀಡಾಗಿರುವ ಬೆಳೆಗಳಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ಕ್ರಮವಹಿಸಲಾಗಿದೆ ಎಂದರು.

ಹೆಜ್ಜಿಗೆ ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಪತ್ರಕರ್ತರು ಗಮನಕ್ಕೆ ತಂದಾಗ ಸಿದ್ದರಾಮಯ್ಯರವರು ಪ್ರತಿಕ್ರಿಯಿಸಿ ನಾನು ಸೇತುವೆಯ ಹತ್ತಿರ ಭೇಟಿ ನೀಡಿ ಪರಿಶೀಲಿಸಿ ದ್ದೇನೆ. ಯಾವುದೇ ಅಪಾಯವಿಲ್ಲ. ಈ ಸೇತುವೆ ನಿರ್ಮಾಣ ವಾಗದಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಜನತೆಗೆ ಮತ್ತಷ್ಟು ತೊಂದರೆಯಾಗುತ್ತಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಕೇಶವಮೂರ್ತಿ, ಜಿ.ಪಂ. ಸದಸ್ಯೆ ಪುಷ್ಪ ನಾಗೇಶ್‍ರಾಜ್, ತಾಲೂಕು ಪಂಚಾ ಯಿತಿ ಉಪಾಧ್ಯಕ್ಷ ಎಸ್. ಗೋವಿಂದ ರಾಜನ್, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಭೋವಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಸೀತಾರಾಮ್, ಕೆ.ಹೆಚ್.ಪಿ. ಮಾಜಿ ನಿರ್ದೇಶಕ ಮಾಲೇಗೌಡ, ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಎಸ್.ಮೂಗಶೆಟ್ಟಿ, ಮಾಜಿ ಪುರಸಭಾ ಉಪಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್‍ಕುಮಾರ್, ಕೆ.ಪಿ.ಸಿ.ಸಿ.ಸದಸ್ಯ ಅಕ್ಬರ್, ಅಬ್ದುಲ್ ಖಾದರ್, ಮಾಜಿ ಪುರಸಭಾ ಅಧ್ಯಕ್ಷ ಶ್ರೀಧರ್, ವಕೀಲ ನಾಗರಾಜಯ್ಯ, ತಗಡೂರು ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ನಗರಸಭಾ ಸದಸ್ಯ ಮಂಜುನಾಥ್, ಮುಖಂಡರಾದ ಗಂಗಾಧರ್, ಹಳ್ಳದಕೇರಿ ಶ್ರೀನಿವಾಸ್, ಗೋವಿಂದ, ನಾಗರಾಜು, ತಹಸೀಲ್ದಾರ್ ದಯಾನಂದ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಇದ್ದರು.

Translate »