ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ
ಹಾಸನ

ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ

April 19, 2018

ಬೇಲೂರು: ಬಸವಣ್ಣನವರ ನುಡಿಯಂತೆ ಇಂದಿನ ದಿನವನ್ನು ಬಸವೇಶ್ವರ ಜಯಂತಿ ಬದಲಾಗಿ ಕಾಯಕದ ದಿನವೆಂದು ಆಚರಿಸುವ ಅಗತ್ಯವಿದೆ ಎಂದು ತಾಲೂಕು ಶರಣ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ಸಿ.ಎಂ.ನಿಂಗರಾಜು ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ದೇಹ ಮತ್ತು ಮನಸ್ಸನ್ನು ಸ್ವಚ್ಛತೆಯನ್ನಾಗಿ ಇಟ್ಟಿಕೊಳ್ಳಲು ಬಸವಣ್ಣನವರ ಹಿತನುಡಿ ಇಂದಿಗೂ ಅಗತ್ಯವಾಗಿದೆ. ಇಂದು ನಾವು ಹೇಳುವುದೇ ಒಂದು, ನಡೆ ಮತ್ತೊಂದಾಗಿದೆ. ಹಣ, ಅಧಿಕಾರದ ಹಿಂದೆ ಓಡುತ್ತಿ ದ್ದೇವೆ. ಆತ್ಮಶುದ್ಧಿ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ಅಖಿಲ ಭಾರತ ವೀರಶೈವ ಮಹಿಳಾ ಘಟಕದ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ ಮಾತನಾಡಿ, ಬಸವಣ್ಣನವರ ಕಾಯಕ ಸಂದೇಶದ ಮೂಲಕ ಅಮೇರಿಕ ಬ್ರಿಟನ್ ದೇಶದಲ್ಲಿಯೂ  ಅವರ ಹೆಸರನ್ನು ಸ್ಮರಿಸಲಾಗುತ್ತಿದೆ. ತುಕ್ಕು ಹಿಡಿದು ಮನೆಯಲ್ಲಿ ಕುಳಿತಿದ್ದ ಮಹಿಳೆಯರಿಗೆ ಬಸವಣ್ಣನವರ ಕಾಯಕ ತತ್ವ ಆದರ್ಶ ದಾರಿ ದೀಪವಾಗಿದೆ ಎಂದರು.

ತಹಶೀಲ್ದಾರ್ ಉಮೇಶ್ ಮಾತನಾಡಿ, 12ನೇ ಶತಮಾನದಲ್ಲಿ ಇದ್ದಂತ ಬಸವಣ್ಣನವರು ಮಹಾನ್ ವ್ಯಕ್ತಿಯಾಗಿದ್ದರು. ತಾನು ಮಾಡುವ ಕಾಯಕದ ಮೂಲಕ ದೇವರು ಆಗಲು ಹೊರಟಿ ದ್ದವರು. ವೇದಗಳ ಬಗ್ಗೆ ತಿಳಿಸಿಕೊಟ್ಟವರು. ಪ್ರತಿಯೊಬ್ಬರೂ ಬಸವಣ್ಣನವರ ತತ್ವ ಅರಿತುಕೊಳ್ಳಬೇಕು ಎಂದರು.

ವೀರಶೈವ ಮಹಾಸಭಾ ಅಧ್ಯಕ್ಷ ರಾಜಶೇಖರ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಸಾಪ ಅಧ್ಯಕ್ಷ ಹೆಚ್.ಎಂ. ದಯಾನಂದ್, ಯುವ ಘಟಕದ ಅಧ್ಯಕ್ಷ ಉಮಾಶಂಕರ್ ಕಾರ್ಯದರ್ಶಿ ಚಂದ್ರಶೇಖರ್, ಬಲ್ಲೇನಹಳ್ಳಿರವಿ, ನೂರ್ಅಹ್ಮದ್, ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ಇತರರಿದ್ದರು.

 

Translate »