ಸಮಾಜ ಸುಧಾರಣೆಗೆ ವಚನಗಳ ಮೂಲಕ ಮುನ್ನುಡಿ ಬರೆದ ಬಸವಣ್ಣ
ಮೈಸೂರು

ಸಮಾಜ ಸುಧಾರಣೆಗೆ ವಚನಗಳ ಮೂಲಕ ಮುನ್ನುಡಿ ಬರೆದ ಬಸವಣ್ಣ

April 19, 2018

ತಿ.ನರಸೀಪುರ:  ಸಾಮಾಜಿಕ ಅಸಮಾನತೆಯನ್ನು ನಿವಾರಣೆ ಮಾಡಲು ಹಾಗೂ ಅಹಿಂಸಾ ಮಾರ್ಗ ವನ್ನು ಪ್ರಸ್ತುತಪಡಿಸುವ ಬಸವಣ್ಣನವರ ತತ್ವ ಹಾಗೂ ಸಂದೇಶಗಳು ಎಲ್ಲಾ ಕಾಲಕ್ಕೂ ಸಾರ್ವಕಾಲಿಕವಾಗಿವೆ ಎಂದು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಹೇಳಿದರು.

ವರುಣ ವಿಧಾನಸಭಾ ಕ್ಷೇತ್ರದ ವರುಣಾ ಗ್ರಾಮದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಬುಧವಾರ ನಡೆದ ಬಸವ ಜಯಂತಿ ಕಾರ್ಯ ಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿಯೇ ಸಾಮಾ ಜಿಕ ಅಂಧಕಾರವನ್ನು ಅಳಿಸಲು ಜ್ಞಾನದ ಜ್ಯೋತಿಯಾಗಿ ಬಸವೇಶ್ವರರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಮುನ್ನುಡಿಯನ್ನು ಬರೆದರು ಎಂದರು.

ಆಧುನಿಕ ಯುಗದಲ್ಲೂ ಸಾಮಾಜಿಕ ಅಸಮಾನತೆ ಹಾಗೂ ಶೋಷಣೆಯಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ ವಾಗಿದ್ದು, ಬಸವ ತತ್ವಗಳ ಅನುಸರಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ನಾವೆಲ್ಲರೂ ಮಾಡಿದಾಗ ಬಸವ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.   

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಅಶೋಕ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಿ.ಪಂ ಸದಸ್ಯರಾದ ಸದಾನಂದ, ಗುರುಸ್ವಾಮಿ, ಮಾಜಿ ಅಧ್ಯಕ್ಷ ಸಿದ್ಧವೀರಪ್ಪ, ಕ್ಷೇತ್ರಾಧ್ಯಕ್ಷ .ಎನ್.ಶಿವಯ್ಯ, ಪ್ರಧಾನ ಕಾರ್ಯ ದರ್ಶಿಗಳಾದ ಚಿಕ್ಕಮಾದಪ್ಪ, ಕುಪ್ಪೇಗಾಲ ಶಿವಬಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್, ತಾ.ಪಂ ಮಾಜಿ ಅಧ್ಯಕ್ಷ ಡಿ.ಕೃಷ್ಣಮೂರ್ತಿ, ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ಪಿ.ಶ್ರೀಧರ, ಕಾರ್ಯದರ್ಶಿ ಕೃಷ್ಣಕುಮಾರ್, ಸ್ಲಂ ಮೋರ್ಚಾ ಅಧ್ಯಕ್ಷ ಕೆ.ಗಣೇಶ, ಯುವ ಮೋರ್ಚಾ ಉಪಾಧ್ಯಕ್ಷ ಎಂ.ಮಿಥುನ್, ಮುಖಂಡರಾದ ಎಂ.ನೂತನ್, ಜಿಮಾರಳ್ಳಿ ಲೋಕೇಶ, ಆಲನಹಳ್ಳಿ ಪುಟ್ಟಸ್ವಾಮಿ, ಸಿ.ಎಂ.ಮಹದೇವಯ್ಯ, ವರಹಳ್ಳಿ ನಾಗೇಂದ್ರ, ಕಲ್ಮಳ್ಳಿ ವಿಜಯಕುಮಾರ್, ನಾಗರಾಜು(ತಾತ), ರೇವಣ್ಣ ಹಾಗೂ ಇನ್ನಿತರರು ಹಾಜರಿದ್ದರು.

 

Translate »