ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ವಿಶ್ವಕರ್ಮ ಬೃಹತ್ ಸಮ್ಮೇಳನ: ಜೆಡಿಎಸ್‍ಗೆ ಬೆಂಬಲ ಘೋಷಣೆ
ಮೈಸೂರು

ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ವಿಶ್ವಕರ್ಮ ಬೃಹತ್ ಸಮ್ಮೇಳನ: ಜೆಡಿಎಸ್‍ಗೆ ಬೆಂಬಲ ಘೋಷಣೆ

April 19, 2018

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ `ವಿಶ್ವಕರ್ಮರ ನಡೆ ಜೆಡಿಎಸ್ ಕಡೆಶೀರ್ಷಿಕೆಯಡಿ ನಡೆದ ಸಮಾವೇಶ ಯಶಸ್ವಿಯಾಗಿದ್ದು, ಕ್ಷೇತ್ರದ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರಿಗೆ ಸಮುದಾಯದಿಂದ ಬೆಂಬಲ ಘೋಷಣೆ ಮಾಡಲಾಗಿದೆ. ಅದೇ ರೀತಿ ರಾಜ್ಯ ಮಟ್ಟದಲ್ಲಿ ಸಮುದಾಯದ ಬೆಂಬಲವನ್ನು ಜೆಡಿಎಸ್ಗೆ ನೀಡುವುದಾಗಿ ಘೋಷಣೆ ಮಾಡಲು ತಿಂಗಳ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಅಧ್ಯಕ್ಷ ಕೆಂಡಗಣ್ಣ ವಿಶ್ವಕರ್ಮ, ಹಿಂದೆ ನಮ್ಮ ಸಮುದಾಯದಿಂದ ಯಾವುದೇ ಪಕ್ಷಗಳಿಗೂ ರೀತಿಯ ಬೆಂಬಲ ದೊರೆತಿಲ್ಲ. ಇದೀಗ ಬೆಂಬಲ ಚಾಮುಂಡೇಶ್ವರಿಯಿಂದ ಆರಂಭಗೊಂಡಿದ್ದು, ಏಪ್ರಿಲ್ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ, ಸಮಾಜದ ಬೆಂಬಲ ಜೆಡಿಎಸ್ಗೆ ಎಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ರೈತಪರ ಹಾಗೂ ಹಿಂದುಳಿದ ವರ್ಗಗಳ ಹಿತಚಿಂತಕರಾದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗ ಬೇಕೆಂಬ ಉದ್ದೇಶ ನಮ್ಮದಾಗಿದ್ದು, ಸ್ವಾತಂತ್ರ್ಯ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಮ್ಮ ಸಮಾಜವನ್ನು ನಿರ್ಲಕ್ಷ್ಯ ಮಾಡಿವೆ. ಹೀಗಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ. ಸಮುದಾಯವನ್ನು ಮುಖ್ಯವಾಹಿನಿಗೆ ತರುವುದಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಆಶ್ವಾಸನೆ ನೀಡಿದೆ. ಜೊತೆಗೆ ವಿಧಾನಸೌಧದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿ ಸಮುದಾಯದ ಹಿತಕ್ಕಾಗಿ ಹಲವು ಯೋಜನೆಗಳನ್ನು ಸಿದ್ಧಪಡಿಸುವುದಾಗಿ ಪಕ್ಷ ಘೋಷಿಸಿದೆ. ಆದ್ದರಿಂದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದೂರು ಪುಟ್ಟಸೋಮಾಚಾರ್, ಗ್ರಾಪಂ ಸದಸ್ಯ ಮುಳ್ಳೂರು ರಾಮಲಿಂಗಚಾರ್, ಸಮಾಜದ ಮುಖಂಡ ರವಿಕುಮಾರ್ ಹೆಬ್ಬಾಳ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »