ಹಲವು ಮುಖಂಡರು ಜೆಡಿಎಸ್ ಸೇರ್ಪಡೆ
ಮೈಸೂರು

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

April 19, 2018

ತಿ.ನರಸೀಪುರ: ಮೂಗೂರು ಹೋಬಳಿ ಭಾಗದ ವೀರಶೈವ ಲಿಂಗಾಯತ ಸಮುದಾಯ ಬಾರಿ ಜಾತ್ಯಾ ತೀತ ಜನತಾದಳ ಪಕ್ಷವನ್ನು ಬೆಂಬಲಿಸುವ ಸಾಧ್ಯತೆಗಳಿದ್ದು, ಚುನಾವಣೆಯಲ್ಲಿ ಜೆಡಿಎಸ್ ಜಯಬೇರಿ ಭಾರಿಸುವುದು ಬಹುತೇಕ ಖಚಿತ ಎಂದು ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಹೇಳಿದರು.

ಪಟ್ಟಣದ ಜೆಡಿಎಸ್ ಕಛೇರಿ ಆವರಣ ದಲ್ಲಿ ವಿವಿಧ ಗ್ರಾಮಗಳ ವೀರಶೈವ ಲಿಂಗಾಯತ ಸಮುದಾಯದ ನೂರಾರು ಯುವಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿ ಸುತ್ತಿದ್ದ ಮೂಗೂರು ಹೋಬಳಿಯ ವೀರಶೈವ ಲಿಂಗಾಯತರು ಈಗ ಜೆಡಿಎಸ್ನತ್ತ ಒಲವು ತೋರಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನಿಷ್ಠೆಯಿಂದ ದುಡಿಯುತ್ತೇನೆ ಎಂದು ಎಂ.ಅಶ್ವಿನ್ಕುಮಾರ್ ತಿಳಿಸಿದರು.

ಮೂಗೂರು ಸೇರಿದಂತೆ ನಿಲಸೋಗೆ ಹಾಗೂ ಮಾರನಪುರ ಗ್ರಾಮಗಳ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಮಾಜಿ ಸದಸ್ಯ ಎಸ್.ಆರ್.ವರದರಾಜು, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಎಪಿಎಂಸಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಸ್.ಮಾದಯ್ಯ, ಮುಖಂಡ ರಾದ ಗಂಗಾಧರ, ಸೋಸಲೆ ಧರ್ಮರತ್ನ ಕುಮಾರ, ರಾಜಣ್ಣ, ಅಬ್ದುಲ್ ಅತ್ತೀಕ್, ನಿಲಸೋಗೆ ಪ್ರಸಾದ್, ಶಿವಶಂಕರನಾಯಕ, ಮೂಗೂರು ರೇವಣ್ಣ ಹಾಜರಿದ್ದರು.