ಅಮಿತ್ ಷಾ, ಬಿಎಸ್‍ವೈ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ
ಮೈಸೂರು

ಅಮಿತ್ ಷಾ, ಬಿಎಸ್‍ವೈ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ

November 9, 2019

ಮೈಸೂರು, ನ.8(ಆರ್‍ಕೆಬಿ)- ಆಪರೇಷನ್ ಕಮಲ ಮಾಡಿ ಅನೈತಿಕವಾಗಿ ಅಧಿಕಾರಕ್ಕೆ ಬಂದಿ ದ್ದಾರೆ. ಅಮಿತ್ ಷಾ ಮತ್ತು ಬಿ.ಎಸ್.ಯಡಿಯೂರಪ್ಪ ಇಬ್ಬರನ್ನೂ ಅಧಿಕಾರದಿಂದ ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಸಮಯ ಕೇಳಿದ್ದೇವೆ, ಕೊಟ್ಟರೆ ಭೇಟಿ ಮಾಡುತ್ತೇವೆ. ಯಡಿಯೂರಪ್ಪ ಆಡಿಯೋದಲ್ಲಿ ಎಲ್ಲವನ್ನು ಹೇಳಿದ್ದಾರೆ. ಖುದ್ದು ಅಮಿತ್ ಷಾ ಇದರ ಉಸ್ತುವಾರಿ ವಹಿಸಿದ್ದರು. ಅವರ ಸೂಚನೆಯಂತೆ ನಾನು ಆಪರೇಷನ್ ಕಮಲ ಮಾಡಿದೆ ಎಂದಿದ್ದಾರೆ. ಈ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ ಬಂದಿ ದ್ದಾರೆ. ಇಂತಹ ಕೆಲಸ ಮಾಡಿರುವ ಅಮಿತ್ ಷಾ ದೇಶದ ಗೃಹ ಮಂತ್ರಿಯಾಗಿ ಒಂದು ಕ್ಷಣವೂ ಇರಬಾರದು. ಬಿಎಸ್‍ವೈ ಮುಖ್ಯಮಂತ್ರಿಯಾಗಿ ಇರಬಾರದು. ಈ ಇಬ್ಬರನ್ನೂ ವಜಾಗೊಳಿಸಿ ಎಂದು ರಾಷ್ಟ್ರಪತಿಗಳಿಗೆ ದೂರು ನೀಡಲಿದ್ದೇವೆ ಎಂದು ಹೇಳಿದರು.

ಪಕ್ಷಾಂತರಕ್ಕೆ ಕುಮ್ಮಕ್ಕು ನೀಡಿರುವ ಅಮಿತ್ ಷಾ ಗೆ ಅಧಿಕಾರದಲ್ಲಿ ಇರಲು ನೈತಿಕ ಹಕ್ಕಿಲ್ಲ. ಪಕ್ಷಾಂತರ ಮಾಡಿಸಿ ಅನೈತಿಕ ಸರ್ಕಾರವನ್ನು ಅಧಿಕಾರಕ್ಕೆ ತಂದಿ ದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಲು ಹೊರಟಿದ್ದಾರೆ. ಅಧಿಕಾರದಲ್ಲಿ ಇರಲು ಅವರಿಗೆ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ಅನರ್ಹರ ವಿಚಾರವಾಗಿ ಜೆಡಿಎಸ್ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಹೋರಾಟ ಮಾಡುತ್ತಾರೋ, ಬಿಡುತ್ತಾರೋ ಎಂಬು ದನ್ನು ಅವರನ್ನೇ ಕೇಳಿ. ಅವರು ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರೆಯೇ, ಹಾರ್ಡ್ ಆಗಿದ್ದಾರೆಯೇ ಎಂಬುದನ್ನು ಅವರನ್ನೇ ಕೇಳಿ. ಅನರ್ಹರ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ಚುನಾವಣೆ ಮುಂದೂಡುವ ಅರ್ಜಿಗೆ ಆಕ್ಷೇಪ ಹಾಕುವಂತೆ ನಮ್ಮ ವಕೀಲರಿಗೆ ಹೇಳುತ್ತೇವೆ ಎಂದರು.

ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಎಲ್ಲೂ ಗಲಾಟೆಯಾಗಲ್ಲ
ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಸರ್ಕಾರ ಅವಕಾಶ ನೀಡದ ಬಗ್ಗೆ ಹರಿಹಾಯ್ದ ಸಿದ್ದ ರಾಮಯ್ಯ, ಬಿಜೆಪಿ ದಾರ ಇಲ್ಲದೆ ಬುಗುರಿ ಆಡಿಸು ತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಜನರ ವಿರೋಧ ಇಲ್ಲ. ನ್ಯಾಯಾಲಯ ಸಹ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ ಇಲ್ಲ ಎಂದಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದರೆ ಎಲ್ಲಿಯೂ ಗಲಾಟೆ ಆಗುವುದಿಲ್ಲ. ಗಲಾಟೆ ಮಾಡಿದ್ರೆ ಅದು ಆರ್‍ಎಸ್‍ಎಸ್‍ನವರು ಮಾಡುತ್ತಾರೆ. ನಾವು 3 ವರ್ಷ ಟಿಪ್ಪು ಜಯಂತಿ ಮಾಡಲಿಲ್ಲವೇ? ಆಗ ಎಲ್ಲಿಯಾದರೂ ಗಲಾಟೆ ಆಗಿತ್ತೇ? ಕೊಡಗು ಬಿಟ್ಟು ಎಲ್ಲಾದರೂ ಗಲಾಟೆ ಆಯ್ತಾ? ಕೊಡಗಿನ ಗಲಾಟೆಯನ್ನು ತಡೆಯ ಬಹುದಿತ್ತು. ಪೆÇಲೀಸರ ಬೇಜವಾಬ್ದಾರಿಯಿಂದ ಗಲಾಟೆ ಆಗಿ ಬಿಡ್ತು ಎಂದರು. ಮೈಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡದೆ ಇರೋದು ತಪ್ಪು. ಬಿಜೆಪಿ ಸರ್ಕಾರ ಅನುಮತಿ ನೀಡಬೇಡಿ ಎಂದಿರಬೇಕು. ಅದಕ್ಕೆ ನೀಡಿಲ್ಲ. ಖಾಸಗಿ ಯಾಗಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಡಿಕೆಶಿ ಮೈಸೂರು ಪ್ರವಾಸದಲ್ಲಿ ಬೇರೇನೂ ಇಲ್ಲ
ಡಿ.ಕೆ.ಶಿವಕುಮಾರ್ ಅವರ ಎರಡು ದಿನಗಳ ಮೈಸೂರು ಭೇಟಿ ಕುರಿತು ಮಾತನಾಡಿದ ಅವರು, ದೇವಾಲಯಗಳಿಗೆ ಭೇಟಿ ನೀಡಲು ಬಂದಿದ್ದರು. ಈ ವೇಳೆ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದ್ದರು. ಇದರಲ್ಲಿ ಬೇರೇನೂ ಇಲ್ಲ ಎಂದು ಸ್ಪಷ್ಪಪಡಿಸಿದರು.

ಕಾರ್ಯಕ್ರಮದಲ್ಲಿ ಡಿಕೆಶಿ ಸಿಎಂ ಆಗಬೇಕೆಂಬ ಹೇಳಿಕೆಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದ ರಾಮಯ್ಯ, ಅದು ಮಾತನಾಡಿದ ಕೆಲವರ ವೈಯ ಕ್ತಿಕ ಅಭಿಪ್ರಾಯ. ಎಲ್ಲರಿಗೂ ಅವರದ್ದೇ ಆದ ಅಭಿ ಪ್ರಾಯ ಇರುತ್ತದೆ. ಈ ಬಗ್ಗೆ ನಿಮ್ಮದೂ ಅಭಿಪ್ರಾಯ ವಿದೆಯೇ ಎಂದು ಮಾಧ್ಯಮದವರಿಗೇ ಪ್ರಶ್ನಿಸಿದರು.

Translate »