ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ, ಪೋಸ್ಟರ್ ಅಂಟಿಸುತ್ತಿದ್ದ ವ್ಯಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ!
ಮೈಸೂರು

ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ, ಪೋಸ್ಟರ್ ಅಂಟಿಸುತ್ತಿದ್ದ ವ್ಯಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ!

April 19, 2018

ಬೆಂಗಳೂರು:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೆ ಹಿಂದೂ ಟೆರರಿಸಂ ಎಂದು ಹೇಳುತ್ತಾರೆ. ಈಗ ಮಾಲೇಗಾಂವ್ ಸ್ಫೋಟ ಪ್ರಕರಣ ದಲ್ಲಿ ಸ್ವಾಮಿ ಅಸೀಮಾನಂದ ನಿರ್ದೋಷಿ ಎಂದು ಸಾಬೀತಾ ಗಿದ್ದು, ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗ್ರಹಿ ಸಿದ್ದಾರೆ. ಬಿಜೆಪಿಯ ಬೆಂಗಳೂರು ವಿಭಾಗದ ಶಕ್ತಿ ಕೇಂದ್ರ ಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿ ಇರುವುದಿಲ್ಲ. ಭಯೋತ್ಪಾದನೆಯೇ ಖಂಡನಾರ್ಹ. ಇದನ್ನು ಅರಿಯದೇ ಹಿಂದೂ ಭಯೋತ್ಪಾದನೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಇನ್ನಾದರೂ ಅವರು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.

2014ರಿಂದ ಇಲ್ಲಿವರೆಗೆ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಶ್ಚಿತವಾಗಿ ನಾನು ಕಾರಣವಲ್ಲ. ಅದರ ರೂವಾರಿಗಳು ನಮ್ಮ ಪಕ್ಷದ ಬೂತ್ ಅಧ್ಯಕ್ಷರು. ಪಕ್ಷ ಅಸ್ತಿತ್ವದಲ್ಲೇ ಇಲ್ಲದಿದ್ದ ತ್ರಿಪುರಾ, ಮಣಿಪುರದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಬೂತ್ ಸಮಿತಿಗಳ ಅಧ್ಯಕ್ಷರು ಹಾಗೂ ಪ್ರಧಾನಿ ಮೋದಿ ನೇತೃತ್ವ ಕಾರಣ. ನನ್ನ ರಾಜಕೀಯ ಜೀವನ ಶುರು ವಾಗಿದ್ದೂ ಕೂಡ ಬೂತ್ ಸಮಿತಿ

ಅಧ್ಯಕ್ಷನಾಗಿ. ಒಬ್ಬ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾನೆ. ಪೋಸ್ಟರ್ ಅಂಟಿ ಸುತ್ತಿದ್ದ ವ್ಯಕ್ತಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿದ್ದಾನೆ ಎಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ತೊಲಗುತ್ತದೆ. ಬಿಜೆಪಿ ಸರ್ಕಾರ ಬರುತ್ತದೆ. ಕರ್ನಾಟಕದ ವಿಜಯ ಸಾಮಾನ್ಯ ವಿಜಯವಲ್ಲ. ದಕ್ಷಿಣದಲ್ಲಿ ಬಿಜೆಪಿಯ ವಿಜಯದ್ವಾರ ತೆರೆಯಲು ಕರ್ನಾಟಕದಲ್ಲಿ ಬಿಜೆಪಿಯ ವಿಜಯ ಅತ್ಯಗತ್ಯ. ಇಲ್ಲಿ ಗೆದ್ದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಲ್ಲೂ ಬಿಜೆಪಿ ಜಯ ಗಳಿಸಲು ಕರ್ನಾಟಕದ ಹೆಬ್ಬಾಗಿಲು ತೆರೆಯಬೇಕು ಎಂದು ಕರೆ ನೀಡಿದರು.

Translate »