ಜಿಲ್ಲೆಯಾದ್ಯಂತ ಕಾಯಕಯೋಗಿ ಬಸವಣ್ಣ ಜಯಂತಿ ಆಚರಣೆ: ಬಸವಣ್ಣರಿಂದ ಪರಿಪೂರ್ಣ ಸಮಾನತೆಯ ಸಮಾಜ ತತ್ವ ಪ್ರತಿಪಾದನೆ
ಚಾಮರಾಜನಗರ

ಜಿಲ್ಲೆಯಾದ್ಯಂತ ಕಾಯಕಯೋಗಿ ಬಸವಣ್ಣ ಜಯಂತಿ ಆಚರಣೆ: ಬಸವಣ್ಣರಿಂದ ಪರಿಪೂರ್ಣ ಸಮಾನತೆಯ ಸಮಾಜ ತತ್ವ ಪ್ರತಿಪಾದನೆ

April 19, 2018

ಚಾಮರಾಜನಗರ : ಭಾರತೀಯ ಇತಿಹಾಸದಲ್ಲಿ ಪರಿಪೂರ್ಣ ಸಮಾನತೆಯ ಸಮಾಜ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರದ್ದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದ ಅಂದಿನ ಸಮಾಜ ತಾರ ತಮ್ಯದಿಂದ ಕೂಡಿತ್ತು. ಶೋಷಿತರು, ದೀನದಲಿ ತರು ಹಾಗೂ ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯ ವಿಲ್ಲದೆ ತಮ್ಮ ದನಿಯನ್ನೇ ಕಳೆದುಕೊಂಡಿದ್ದರು. ಅಂತಹ ಸಂದರ್ಭದಲ್ಲಿ ಬಸವಣ್ಣನವರು ಅನು ಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆ ಯವರನ್ನು ಒಂದೆಡೆ ಕಲೆಹಾಕಿ ತಮ್ಮ ಸರಳ ವಚನ ಸಾಹಿತ್ಯದ ಮೂಲಕ ಎಲ್ಲರನ್ನು ಜಾಗೃತ ಗೊಳಿಸಿದರು. ಮೂಲಕ ಸಮಾನತೆಯ ತತ್ವ ವಿಚಾರಗಳಿಗೆ ಮುನ್ನುಡಿ ಬರೆದ ಬಸವಣ್ಣ ಅವರು ಶ್ರೇಷ್ಠ ಸಮಾಜ ಸುಧಾರಕರಾದರು ಎಂದರು.

ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾ ನರು. ಯಾವುದೇ ಕೆಲಸದಲ್ಲಿ ಮೇಲುಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಜಿಲ್ಲಾ ಧಿಕಾರಿ ಕಾವೇರಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ಕುಮಾರ್ ಮಾತನಾಡಿ, ಬಸವಣ್ಣನವರು ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ಶೋಷಿತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣರಾದರು. ಅವರು ಅಂದು ಸ್ಥಾಪಿ ಸಿದ ಅನುಭವ ಮಂಟಪದ ಮಾದರಿಯೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕೊಳ್ಳೇಗಾಲ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಲ್.ದೊರೆ ಸ್ವಾಮಿ ಉಪನ್ಯಾಸ ನೀಡಿ ಬಸವಣ್ಣನವರ ಬಾಲ್ಯ ಜೀವನ ಹಾಗೂ ಸಮಾಜ ಸುಧಾರಣೆಯಲ್ಲಿ ಬಸವಣ್ಣನವರ ಪಾತ್ರ ಕುರಿತು ಸುದೀರ್ಘವಾಗಿ ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಗುಂಡ್ಲುಪೇಟೆಯ ಸಿದ್ದನಗೌಡ ಮತ್ತು ತಂಡದವರಿಂದ ವಚನ ಗಾಯನ ಏರ್ಪಡಿಸಲಾಗಿತ್ತು.

ದೊಡ್ಡರಾಯಪೇಟೆ ವರದಿ: ಸಮೀಪದ ದೊಡ್ಡ ರಾಯಪೇಟೆ ಗ್ರಾಮದ ಜೈಭೀಮ್ ಯುವ ಜನ ಸಂಘವು ಬಸವ ಜಯಂತಿಯನ್ನ ಆಚರಿಸಿದ್ದು ವಿಶೇಷವಾಗಿತ್ತು. ಸಂಘದ ಕಾರ್ಯಾಲಯದ ಮುಂಭಾಗ ಬಸವೇಶ್ವರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಪಾನಕ, ಮಜ್ಜಿಗೆ ವಿತರಿಸಲಾಯಿತು.

ಕೂಡ್ಲೂರು ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಮೂರ್ತಿ, ಸಂಘದ ಅಧ್ಯಕ್ಷ ಪ್ರತಾಪ್, ಮುಖಂಡ ರಾದ ನಾಗರಾಜು, ಮಹದೇವಯ್ಯ, ಕೃಷ್ಣಪ್ಪ, ಮಹದೇವಯ್ಯ, ನಂಜುಂಡಯ್ಯ, ರಾಜು, ಚಂದ್ರು, ದೊಡ್ಡಯ್ಯ, ಸುರೇಶ್ ಇತರರು ಹಾಜರಿದ್ದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬಸ ವೇಶ್ವರ ಭಾವಚಿತ್ರಕ್ಕೆ ನಿವಾಸಿ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್ ಹಾಗೂ ಡಾ.ಎಂ.ಮಹೇಶ್ ಪುಪ್ಪಾರ್ಚನೆ ಮಾಡಿದರು.

ಡಾ.ನವೀನ್ಚಂದ್ರು, ಡಾ.ಭಾಗೀರಥಿ, ವೈದ್ಯರು, ಶೂಶ್ರೂಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ರಾಮಸಮುದ್ರ ವರದಿ: ಚಾಮರಾಜನಗರ ನಗರಸಭಾ ವ್ಯಾಪ್ತಿಯ ರಾಮಸಮುದ್ರ ಬಡಾ ವಣೆಯಲ್ಲಿ ಅದ್ಧೂರಿಯಾಗಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಬಡಾವಣೆಯ ಹಳ್ಳದ ಬೀದಿಯಲ್ಲಿರುವ ಬಸವ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯ ಗಳು ನಡೆದು, ಶ್ರೀ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ಮೆರಗು ತಂದವು.

ಚಂದಕವಾಡಿ ವರದಿ: ಚಾಮರಾಜನಗರ ತಾಲೂ ಕಿನ ಚಂದಕವಾಡಿ ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಬಸ ವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂತೇಮರಹಳ್ಳಿ ವರದಿ: ಇಲ್ಲಿನ ಬಿಎಸ್ಪಿ ಕಛೇರಿಯಲ್ಲಿ ಬಸವಣ್ಣನವರ ಜನ್ಮದಿನಾಚರಣೆ ಯನ್ನು ಎಲ್ಲಾ ಸಮುದಾಯದ ಜನರು ಸೇರಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರಳವಾಗಿ ಆಚರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಾಗಳಿ ರೇವಣ್ಣ, ಬಸವಣ್ಣನವರು ವಿಚಾರ ವಾದಿಗಳಾಗಿದ್ದರು. ಶತಮಾನದಲ್ಲೇ  ಜನಸಾಮಾ ನ್ಯರ ನೋವುಗಳನ್ನು ಕಂಡು ತಮ್ಮ ಜೀವನವನ್ನು ಬಡ ಜನರ ಸೇವೆಗೆ ಹಾಗೂ ದೇವರ ಆರಾಧನೆಗೆ ಮುಡಿಪಾಗಿಟ್ಟಿದ್ದರು. ಜಾತಿ ಮತ ತಿರಸ್ಕರಿಸಿದ ಬಸ ವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಇಂತಹ ಮಹಾನ್ ಪೂಜ್ಯ ಬಸವಣ್ಣನವರ ಆದರ್ಶ ತತ್ವಗಳನ್ನು ಈಗಿನ ಜನ ಪಾಲಿಸಬೇಕು ಎಂದು ತಿಳಿಸಿದರು. ಬಳಿಕ ಮಾತನಾಡಿದ ಗುರುರಾಜ ಚಾರರು, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಬಂಡಾರಿ ಬಸವಣ್ಣ ಇನ್ನು ಮುಂತಾದ ಹೆಸರುಗಳನ್ನೊಳ ಗೊಂಡ ಬಸವಣ್ಣನವರ ಜನ್ಮದಿನವು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈಗಿನ ಜನತೆ ಬಸ ವಣ್ಣನವರ ವಚನದಲ್ಲಿರುವ ತತ್ವಗಳು, ಸಿದ್ದಾಂತಗಳು, ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಬ್ಲಾಕ್ ಅಧ್ಯಕ್ಷರಾದ ಮಲ್ಲೇಶಪ್ಪ, ಮಂಜು, ಹೆಗ್ಗವಾಡಿ ಮಹೇಶ್, ಶಂಕರ್, ಮಹದೇವಪ್ಪ, ಮಲ್ಲೇಶ್, ಉಮ್ಮತ್ತೂರು ಸೋಮಣ್ಣ, ಚಾಟಿಪುರ ನಿಂಗರಾಜು, ಜಯಶಂಕರ್, ಅಮೃತ, ನಾಗಶಂಕರ್, ಶಿವಣ್ಣ, ಮತ್ತಿತ್ತರು ಹಾಜರಿದ್ದರು.

ತಾಲೂಕು ಶಿಕ್ಷಕರ ಸಂಘ: 12ನೇ ಶತಮಾನ ದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಾಮಾಜಿಕ  ಕ್ರಾಂತಿಗೆ ಅವಕಾಶ ಮಾಡಿಕೊಟ್ಟರು. ಅವರು ನುಡುದಂತೆ ನಡೆ, ಕಾಯಕವೇ ಕೈಲಾಸ ಎಂದು ನುಡಿದರು ಎಂದು ತಾಲೂಕು ಶಿಕ್ಷಕರ ಸಂಘದ  ಅಧ್ಯಕ್ಷ ಲಾಲಿಂಗಸ್ವಾಮಿ ತಿಳಿಸಿದರು.

ನಗರದ ಗುರುಭವನದಲ್ಲಿ ಶ್ರೀಬಸವ ಜಯಂತಿ ಆಚರಣೆಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಎಲ್ಲ ಜನರೂ ಇವತ್ತು ಸಮಾ ನತೆಯಿಂದ ಬಾಳಲು ಬಸವಣ್ಣನವರ ಕೊಡುಗೆ ಅಪಾರ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷೆ ಎನ್.ನೇತ್ರಾವತಿ ಮಾತನಾಡಿ, ಬಸವಣ್ಣನವರು ಒಂದು ಜನಾಂಗಕ್ಕೆ ಸೀಮಿತ ವಾಗದೆ ಮಾನವರೆಲ್ಲರೂ ಅವರನ್ನು ಆರಾಧಿ ಸಬೇಕಿದ್ದು, ಅವರ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಎನ್.ಜಿ. ಕಾರ್ಯದರ್ಶಿ ಮಹದೇವಸ್ವಾಮಿ, ರಾಚಯ್ಯ, ಉಪಾಧ್ಯಕ್ಷ ಸಿ.ಕೆ.ರಾಮಸ್ವಾಮಿ, ಖಜಾಂಚಿ ಕೃಷ್ಣಮೂರ್ತಿ, ಸುವರ್ಣಕುಮಾರಿ, ನಂಜುಂಡ ಸ್ವಾಮಿ(ಪಾಪು), ಮುರುಗೇಶ್ ಕುಮಾರ್, ಶಾಂತರಾಜು, ಶಾಂತಮ್ಮ, ಇನ್ನು ಮುಂತಾದವರು ಹಾಜರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ: ಬಸವಣ್ಣ ನವರು ಸಮಾಜ ಸುಧಾರಕರು, ಅವರು ರಚಿಸಿ ರುವ ವಚನಗಳು ಮನುಷ್ಯನ ಜೀವನಕ್ಕೆ ಅನ್ವಯ ವಾಗುತ್ತದೆ. ವಚನ ಸಾಲುಗಳನ್ನು ನಾವು ಅನುಸರಿ ಸಿದರೆ ಉತ್ತಮನಾಗಲು ಸಾಧ್ಯ ಎಂದು ಚಾಮರಾಜ ನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.

ನಗರದ ಶಿಕ್ಷಕರ ಭವವದಲ್ಲಿ ಜಗಜ್ಯೊತಿ ಬಸ ವೇಶ್ವರರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಪ್ರತಿವರ್ಷವೂ ತಾಲೂಕು ಘಟಕದಿಂದ ಬಸವ ಜಯಂತಿಯನ್ನು ಆಚರಿ ಸುತ್ತಾ ಬಂದಿದ್ದೇವೆ. 12ನೇ ಶತಮಾನದ ಸಾಮಾಜಿಕ ಸಮಾನತೆಯ ಹರಿಕಾರರು ಬಸ ವಣ್ಣನವರು, ಕವಿಗಳು ಆಗಿದ್ದ ಬಸವಣ್ಣನವರು ವಚನಗಳಿಂದಲೇ ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಬಸವಣ್ಣನವರ ತತ್ವಗಳನ್ನು ಶಿಕ್ಷಕರಾದ ನಾವುಗಳು ಅವರ ಹಾದಿಯಲ್ಲಿ ನಡೆ ಯೋಣ ಎಂದು ತಿಳಿಸಿದರು.

ಸಂಘದ ವತಿಯಿಂದ ಶಿಕ್ಷಕರ ಭವನದ ಮುಂದೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಸಂದರ್ಭದಲ್ಲಿ ಸಂಘದ ಸದಸ್ಯ ಮಲ್ಲಿ ಕಾರ್ಜುನ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್, ಎಸ್. ಅನಂದಕುಮಾರ್, ಜಯರಾಜ್, ಎಂ.ನಾಗರಾಜು, ಹಾಗೂ ಶಿಕ್ಷಕ ಸಮುದಾಯವು ಕೂಡ ಭಾಗವಹಿಸಿದ್ದರು.

Translate »