17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಡವ-ಶ್ರೀಮಂತ ಮಕ್ಕಳಿಗೆ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಲಿ
ಹಾಸನ

17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಡವ-ಶ್ರೀಮಂತ ಮಕ್ಕಳಿಗೆ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಲಿ

February 28, 2019

ಹಾಸನ: ನಮ್ಮ ಶಿಕ್ಷಣದ ನೀತಿ ಬದ ಲಾಯಿಸಿಕೊಂಡು ಬಡವ-ಶ್ರೀಮಂತ ಮಕ್ಕಳಿಗೆಲ್ಲ ಏಕಮುಖ (ಸಮಾನ) ಶಿಕ್ಷಣ ಪದ್ಧತಿ ಜಾರಿ ಯಾಗಿ, ಸಮಭಾವದ ಶಿಕ್ಷಣ ಕಲಿಯುವಂತಾಗಲಿ ಹಾಗೂ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ ಒತ್ತಾಯಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ 17ನೇ ಜಿಲ್ಲಾ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನಾಧ್ಯಕ್ಷರ ನುಡಿಯಲ್ಲಿ ಮಾತನಾಡಿದ ಅವರು, ಬಡವ, ಶ್ರೀಮಂತರ ಮಕ್ಕಳು ಏಕಮುಖ (ಸಮಾನ) ಶಿಕ್ಷಣ ಪದ್ಧತಿ ಜಾರಿಯಿಂದ ಸಮಭಾ ವದ ಶಿಕ್ಷಣ ಕಲಿಯುವಂತಾಗಲಿ. ನಮ್ಮ ಶಿಕ್ಷಣದ ನೀತಿ ಬದಲಾಗಬೇಕು. ಇಂದು ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಚಿಂತನೆ ಮಾಡಿದೆ. ಹಳ್ಳಿ ಗಳಲ್ಲಿ ಪ್ರಾಥಮಿಕ ಶಾಲೆಗಳನ್ನೇ ಮುಚ್ಚಿಕೊಂಡು ಬರುವ ಈ ಸ್ಥಿತಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಯನ್ನು ಎಲ್ಲಿ ತೆರೆಯುತ್ತಾರೆ? ಪ್ರತಿ ಹಳ್ಳಿಗಳಲ್ಲೂ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆದು, ಪ್ರಾಥ ಮಿಕ ಶಾಲೆಯಲ್ಲಿ ಒಂದನೆ ತರಗತಿಯಿಂದ ಐದನೆ ತರಗತಿವರೆವಿಗೂ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ ಇಂಗ್ಲಿಷ್ ಕಲಿಯಲು ಎರಡನೆ ವಿಷಯ ವಾಗಿ ಬೋಧಿಸುವ ವ್ಯವಸ್ಥೆಯಾಗಲಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲ ಸೌಕರ್ಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಕನ್ನಡದ ಮನಸ್ಸುಗಳೇ, ಕನ್ನಡಿಗರಾದ ನಾವು ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಭೌ ಗೋಳಿಕವಾಗಿ ಒಂದಾಗಿದ್ದೇ ಹೊರತು ಭಾವನಾತ್ಮಕ ವಾಗಿ ಒಂದಾಗಲೇ ಇಲ್ಲ. ಈಗಲೂ ಬೆಳಗಾವಿ ಯಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದೆ. ಅಲ್ಲಿಯ ಜನಪ್ರತಿನಿಧಿಗಳು ಇಬ್ಭಾಗದ ಕೂಗಾಡು ತ್ತಿರುವುದನ್ನು ಖಂಡಿಸಿದರು. ಕನ್ನಡಿಗರಿಗೆ ಕರ್ನಾ ಟಕದಲ್ಲಿ ಉದ್ಯೋಗ ಸಿಗಬೇಕು. ಬ್ಯಾಂಕ್‍ಗಳಲ್ಲಿ ಬೇರೆ ಕಡೆಯಿಂದ ಬಂದ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಾಷೆಯ ಸಮಸ್ಯೆ ಇರುವುದರಿಂದ ಗ್ರಾಹಕರಿಗೂ ಸಮಸ್ಯೆ. ಖಾಸಗಿ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು.
ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ಮಹಿಳಾ ನೌಕರರ ಮೇಲೆ ಹೊರ ರಾಜ್ಯದಿಂದ ಬಂದವರು ದೌರ್ಜನ್ಯವೆಸಗುತ್ತಿ ದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಹಾಸನ ಜಿಲ್ಲೆ ಶಿಲ್ಪಕಲೆಯ ತವರೂರು ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ರಾಮನಾಥಪುರ, ದೊಡ್ಡಗದ್ದುವಳ್ಳಿ, ಮಂಜರಾ ಬಾದ್‍ಕೋಟೆ, ಮೊಸಳೆ ಅರಸೀಕೆರೆ ಹಾರನಹಳ್ಳಿ, ಏಷ್ಯಾದ ಎರಡನೇ ಅತೀ ದೊಡ್ಡ ಸುರಂಗ ನಾಲೆ ಬಾಗೂರು ನವಿಲೆ ಸುರಂಗವಾಗಿದೆ. ಇನ್ನೂ ಅನೇಕ ಊರುಗಳು ಪುರಾಣ, ಇತಿಹಾಸ ಪ್ರಸಿದ್ಧ ಸ್ಥಳಗಳಾಗಿವೆ.

ಜೈನರ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಶ್ರವಣಬೆಳಗೊಳದ 58 ಅಡಿ ಎತ್ತರದ ಏಕಶಿಲಾಮೂರ್ತಿ ಬೇಲೂರಿನ ಶಿಲಾ ಬಾಲಕಿಯರು, ಹಳೇಬೀಡಿನ ಶಿಲ್ಪಕಲೆ ಇವೆಲ್ಲಾ ವಿಶ್ವಪರಂಪರೆಗೆ ಸೇರಿದ ಸ್ಥಳಗಳಾಗಿವೆ ಹಾಗೂ ಕನ್ನಡ ಭಾಷೆಯ ಪ್ರಥಮ ಶಾಸನ ಹಲ್ಮಿಡಿ ಶಾಸನ ಮತ್ತು ಹಲ್ಮಿಡಿ ಗ್ರಾಮದ ಬಗ್ಗೆ ಹೆಚ್ಚು ಪ್ರಚಾರ ಕೊಟ್ಟು ಹಲ್ಮಿಡಿ ಕುಗ್ರಾಮವನ್ನು ವಿಶ್ವಪರಂಪರೆಗೆ ಪರಿಚಯಿಸಿದರು ಎಂದು ಹೇಳಿದರು. ಕ್ರೀಡೆಯಲ್ಲಿ ಅರಕಲಗೂಡಿನ ಗಿರೀಶ್, ಶಾಂತಕುಮಾರ್ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಾವಗಲ್ ಶ್ರೀನಾಥ್ ನಮ್ಮ ಜಿಲ್ಲೆಯವರು. ಒಬ್ಬ ಬಡ ರೈತನ ಮಗನಾಗಿ ಭಾರತದ ಪ್ರಧಾನಮಂತ್ರಿಯಾಗಿ ಸ್ವಚ್ಛ ದಕ್ಷ ಆಡಳಿತ ನೀಡಿ ನಮ್ಮ ಜಿಲ್ಲೆಗೆ ಕೀರ್ತಿ ತಂದು ಕೊಟ್ಟ ಹೆಚ್.ಡಿ.ದೇವೇಗೌಡರು ನಮ್ಮ ಜಿಲ್ಲೆಯ ಸುಪುತ್ರ ಎಂದು ಹೇಳಿಕೊಳ್ಳಲು ಸಂತಸವಾಗು ತ್ತದೆ. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಯಾಗಿ ಕಾರ್ಯನಿರ್ವಹಿಸಿದ ಹೆಚ್.ಡಿ.ಕುಮಾರ ಸ್ವಾಮಿ ನಮ್ಮ ಜಿಲ್ಲೆಯವರು ಎಂಬುದು ಸಂತಸದ ಸಂಗತಿ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸಾಹಿತ್ಯ ಪರಿಷತ್ ಜನ್ಮ ತಾಳಿದ್ದೇ ಪ್ರಭುತ್ವದ ಆವರಣಗ ಳೊಳಗೆ. 1918ರಲ್ಲಿ ಸಾಹಿತ್ಯ ಪರಿಷತ್ ಪ್ರಾರಂಭ ವಾಗಿ ಅದಕ್ಕೆ ಒತ್ತಾಸೆಯಾಗಿ ನಿಂತಿದ್ದವರು ಸರ್. ಎಂ.ವಿಶ್ವೇಶ್ವರಯ್ಯ. ಅವರ ಕಾಲದಲ್ಲಿ ಮೈಸೂರಿ ನೊಳಗೆ ಬಹಳಷ್ಟು ಜನಪರ ಕಾರ್ಯಗಳು ನಡೆದವು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇತ್ತು. ಆದರೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿ ಯಾಕ್ಕೆ ವಿಲೀನಗೊಂಡಿದೆ ಎಂದರು. ಒಕ್ಕೂಟ ವ್ಯವಸ್ಥೆ ಒಳಗೆ ಪ್ರಾದೇಶಿಕ ವ್ಯವಸ್ಥೆಗಳು ಹೇಗೆ ಕರುಗುತ್ತಿದೆ ಎಂಬುದಕ್ಕೆ ಬ್ಯಾಂಕ್ ವಿಲೀನಗೊಂಡಿ ರುವುದು ಒಂದು ಘಟನೆಯಾಗಿದೆ. ಮುಂದೆ ಎಲ್ಲಾ ಕರಗುತ್ತಾ ಹೋಗುವುದರ ಒಳಗೆ ಹೆಚ್ಚು ಆತಂಕವನ್ನು ಎದುರಿಸುವ ವಿದ್ಯಮಾನಗಳು ಜರುಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಿಗರು ಕನ್ನಡದ ಬಗ್ಗೆ ಕೀಳರಿಮೆ ಇಟ್ಟು ಕೊಂಡು ತಾತ್ಸಾರದಿಂದ ನೋಡುತ್ತಿದ್ದೇವೆ. ಭಾಷೆ ಅಭಿಮಾನ, ಅಸ್ತಿತ್ವ ಕಳೆದುಹೋದರೆ ಬದುಕು ಕಳೆದು ಹೋಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ, ಕೃತಿ ಬಿಡು ಗಡೆ ಮಾಡಲಾಯಿತು. ಚಾಣಕ್ಯ ಪ್ರಕಾಶನಕ್ಕೆ ಚಾಲನೆ ನೀಡಿದರು. ಹಚ್ಚೇವು ಕನ್ನಡದ ದೀಪ ಹಾಡಿಗೆ ಗಿನ್ನಿಸ್ ದಾಖಲೆಯ ಸ್ವಾತಿ ಭಾರದ್ವಾಜ್ ಭರತನಾಟ್ಯವನ್ನು ಪ್ರದರ್ಶಿಸಿದರು. ಇದೇ ವೇಳೆ ಪರಿಷತ್ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿ ನಾಕಲಗೂಡು, ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ, ರಾಜ್ಯ ಸಣ್ಣ ಪತ್ರಿಕೆಗಳ ಒಕ್ಕೂಟ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ್, ಕಿರು ತೆರೆ ನಾಯಕ ಭರತ್, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, 16ನೇ ಕಸಾಪ ಸಮ್ಮೇಳನಾಧ್ಯಕ್ಷ ಚಂದ್ರಕಾಂತ ಪಡೆಸೂರು, ಎವಿಕೆ ಕಾಲೇಜು ಕನ್ನಡ ಉಪನ್ಯಾಸಕ ಸೀ.ಚ.ಯತೀಶ್ವರ್, ಕಲಾ ವಿದ ರಾಮಣ್ಣ, ಹಾಸನ ಜೆಲ್ಲೆಯ ಎಲ್ಲಾ ತಾಲೂ ಕಿನ ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ಇತರರು ಪಾಲ್ಗೊಂಡಿದ್ದರು.

ನಾನಾ ಕಲಾತಂಡದೊಡನೆ ಅದ್ಧೂರಿ ಭುವನೇಶ್ವರಿ ಮೆರವಣಿಗೆ
ಹಾಸನ: 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಎರಡನೇ ದಿನವಾದ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ನಾನಾ ಕಲಾ ತಂಡದೊಡನೆ ಯಶಸ್ವಿಯಾಗಿ ಜರುಗಿತು.

ನಗರದ ಗೌರಿಕೊಪ್ಪಲು ಶ್ರೀ ಆದಿಚುಂಚನಗಿರಿ ಪ್ರೌಢಶಾಲಾ ಆವರಣದಲ್ಲಿ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ ಮತ್ತು ಪತ್ನಿ ಸುಂದರಮ್ಮ ಭುವನೇ ಶ್ವರಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ದರು. ನಂತರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಸಮ್ಮೇಳನಾಧ್ಯಕ್ಷರಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಗಂಧದ ಹಾರ ವನ್ನು ಹಾಕಿದರು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಕನ್ನಡ ಬಾವುಟ ಪ್ರದರ್ಶಿಸುವುದರ ಮೂಲಕ ಮೆರವ ಣಿಗೆಗೆ ಚಾಲನೆ ನೀಡಿದರು. 17ನೇ ಸಮ್ಮೇಳದಲ್ಲಿ ಪ್ರಮುಖವಾಗಿ ಬೃಹತ್ ರಥ ಭಾಗವಹಿಸಿತ್ತು.

ಉಳಿದಂತೆ ಕೋಲಾಟ, ಜಾನಪದ ಕುಣಿತ, ಕೀಲು ಕುದುರೆ, ಕಳಸ ಹೊತ್ತ ಯುವತಿಯರು ಮತ್ತು ಮಹಿಳೆಯರು, ಮಕ್ಕಳಿಂದ ನೃತ್ಯ, ಭಾರತ್ ಸ್ಕೌಟ್ ಅಂಡ್ ಗೈಡ್ಸ್, ಭಾರತ್ ಸೇವಾದಳ ಸೇರಿ ದಂತೆ ವಿವಿಧ ಕಲಾತಂಡಗಳು ಮೆರಗು ತಂದು ನಗರವನ್ನು ಹಬ್ಬದ ವಾತಾವರಣವನ್ನಾಗಿ ಉಂಟು ಮಾಡಿತು. ಕನ್ನಡ ಭಾಷೆ ಉಳಿಸಿ-ಬೆಳೆಸುವ ನಾಮ ಫಲಕಗಳು ಎಲ್ಲೆಲ್ಲೂ ಕನ್ನಡದ ಡಿಂಡಿಮ ಭಾರಿಸಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕನ್ನಡ ಭಾಷೆಯ ಉಳಿವಿನ ಬಗ್ಗೆ ಗಮನ ಸೆಳೆದರು. ಆದಿಚುಂಚನಗಿರಿ ಪ್ರೌಢಶಾಲೆಯ ಆವರಣದಿಂದ ವಿದ್ಯಾನಗರದ ಬುದ್ಧ ಮಾರ್ಗವಾಗಿ, ಎಂ.ಜಿ. ರಸ್ತೆ, ಆದಿಚುಂಚನಗಿರಿ ಸಮುದಾಯ ಭವನ, ಸ್ಲೇಟರ್ಸ್ ಹಾಲ್, ಸಹ್ಯಾದ್ರಿ ವೃತ್ತ, ಸಾಲಗಾಮೆ ರಸ್ತೆ ಮೂಲಕ ಹಾಸನಾಂಬ ಕಲಾ ಕ್ಷೇತ್ರಕ್ಕೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ್ ಗ್ರಂಥಗಳು ಹಾಗೂ ಹೆಸರಾ ದಂತಹ ಕವಿಗಳ ಸಾಹಿತ್ಯಗಳ ಪುಸ್ತಕವನ್ನು ಬೆಳ್ಳಿ ಸಾರೋಟ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿ ನಾಕಲಗೂಡು, ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್‍ಗೌಡ, ರಾಜ್ಯ ಸಣ್ಣ ಪತ್ರಿಕೆಗಳ ಒಕ್ಕೂಟ ಅಧ್ಯಕ್ಷ ಜೆ.ಆರ್. ಕೆಂಚೇ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ್, ಕಿರುತೆರೆ ನಾಯಕ ಭರತ್, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, ಎವಿಕೆ ಕಾಲೇಜು ಕನ್ನಡ ಉಪನ್ಯಾಸಕ ಸೀ.ಚ. ಯತೀಶ್ವರ್, ಕಲಾವಿದ ರಾಮಣ್ಣ, ಹಾಸನ ಜೆಲ್ಲೆಯ ಎಲ್ಲಾ ತಾಲೂಕಿನ ಕಸಾಪ ಅಧ್ಯಕ್ಷರು, ಪದಾಧಿ ಕಾರಿಗಳು ಹಾಗೂ ಶಿಕ್ಷಕ ವೃಂದದವರು ಇತರರು ಪಾಲ್ಗೊಂಡಿದ್ದರು.

Translate »