ಅರಸೀಕೆರೆಯಲ್ಲಿ 300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಹಾಸನ

ಅರಸೀಕೆರೆಯಲ್ಲಿ 300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

February 28, 2019

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಆದ್ಯತೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಅರಸೀಕೆರೆ: ರಾಜ್ಯದ ಲ್ಲಿರುವ ಸಮ್ಮಿಶ್ರ ಸರ್ಕಾರವು ಹಾಸನ ಜಿಲ್ಲೆಗೆ ಸೀಮಿತವಾಗಿರದೇ ಇಡೀ ರಾಜ್ಯದ ಜನ ತೆಗೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವ ಹಿಸುತ್ತಿದೆ. ಕೇಂದ್ರ ಸರ್ಕಾರವು ರೈತರ ಬಗ್ಗೆ ಮೊಸಳೆ ಕಣ್ಣಿರು ಹಾಕುವ ಬದಲು ಪ್ರಾಮಾಣಿಕ ನ್ಯಾಯವನ್ನು ನೀಡಲು ಮುಂದಾಗಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜೇನುಕಲ್ಲು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ವಿವಿಧ ಇಲಾಖೆ ಗಳ 300 ಕೋ.ರೂಗಳ ಅಭಿವೃದ್ದಿ ಕಾಮ ಗಾರಿಗಳಿಗೆ ಶಿಲಾನ್ಯಾಸ ಮತ್ತು ಶಂಕು ಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ ದೇವೇ ಗೌಡರ ಕುಟುಂಬ ಕೇವಲ ಹಾಸನ ಜಿಲ್ಲೆಗೆ ಮಾತ್ರ ಎಂಬ ಅಪವಾದಗಳು ಕೇಳಿ ಬರು ತ್ತಿದೆ. ಆದರೆ ಇದನ್ನು ಸುಳ್ಳು ಮಾಡಲು ನಮ್ಮ ವಿವಿಧ ಅಧಿಕಾರಗಳ ಅವಧಿಯಲ್ಲಿ ಇಡೀ ರಾಜ್ಯಕ್ಕೆ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಹಾಲಿ ನಮ್ಮ ಸರ್ಕಾರವು ಅರಸೀಕೆರೆ ಕ್ಷೇತ್ರ ಅಥವಾ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಈ ಕ್ಷೇತ್ರದ ತೆಂಗು ಬೆಳೆ ಗಾರರಿಗೆ ಆಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪರಿಹಾರ ರೂಪದಲ್ಲಿ ಹಣ ವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕೇವಲ ತೆಂಗು ಬೆಳೆಗಾರರಿಗೆ ಮಾತ್ರ ವಲ್ಲದೇ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರ ರಿಗೂ ಆಗಿರುವ ಬೆಳೆ ನಾಶದ ಪರಿಹಾರ ವನ್ನು ನಮ್ಮ ಸರ್ಕಾರವು ನೀಡಿದೆ. ಸುಮಾರು ಪ್ರಸಕ್ತ 2018-19 ನೇ ಸಾಲಿ ನಲ್ಲಿ ಈ ಕ್ಷೇತ್ರಕ್ಕೆ ಸುಮಾರು ಎಂಟು ನೂರು ಕೋಟಿ ರೂ.ಗಳನ್ನು ವಿವಿಧ ಅಭಿ ವೃದ್ದಿ ಯೋಜನೆಗಳ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾತನಾಡಿ, ಅರಸೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚು ಕಾಣು ತ್ತಿದೆ. ಇದನ್ನು ಬಗೆಹರಿಸಲು ಶಾಶ್ವತ ಯೋಜನೆಗಳಿಗೆ ರಾಜ್ಯ ಸರ್ಕಾರವು ಪ್ರಾಮಾ ಣಿಕ ಪ್ರಯತ್ನ ಮಾಡುತ್ತಿದೆ ಮತ್ತು ಹೆಚ್ಚಿನ ಅನುದಾನವನ್ನು ನೀಡಲು ಪ್ರಯತ್ನಿಸಬೇಕು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರು ಹಾಹಾಕಾರ ಹೆಚ್ಚಿದೆ. ನಾನು ಪ್ರಧಾನಮಂತ್ರಿ ಆಗಿದ್ದ ಸಮಯವೂ ಸೇರಿದಂತೆ ಹಿಂದಿನ ಕೇಂದ್ರ ಸರ್ಕಾರಗಳು ಆಯಾ ಘಟ್ಟಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿವೆ. ಅಂದಿನ ದಿನಗಳಿಗಿಂತ ಇಂದಿನ ಪ್ರಸ್ತುತ ದಿನಗಳಲ್ಲಿ ಸಮಸ್ಯೆಗಳು ದೇಶದಲ್ಲಿ ಉಲ್ಬಣಗೊಂಡಿವೆ ಮತ್ತು ಪರಿಹಾರವನ್ನು ಕಂಡುಕೊಳ್ಳುವುದ ರಲ್ಲಿ ಸಾಕಷ್ಟು ಪರಿಶ್ರಮ ಹಾಕುವ ಸವಾಲು ಗಳಿವೆ. ಸ್ಥಳೀಯ ಶಾಸಕ ಶಿವಲಿಂಗೇಗೌಡ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಕಾರ್ಯಗತ ಮಾಡಿಸಿ ಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಒಂದು ವೇಳೆ ಉಳಿದಿರ ಬಹುದಾದ ಕೆಲಸಗಳಿದ್ದರೆ ಶಾಸಕರ ಗಮನಕ್ಕೆ ತರಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು 20 ಕೋಟಿ ರೂ. ಬಿಡುಗಡೆ ಮಾಡುವ ಮನಸ್ಸನ್ನು ಈ ಸಮಾರಂಭದಲ್ಲಿ ಮಾಡಿ ಜಿಲ್ಲಾಧಿಕಾರಿ ಗಳಿಗೆ ಆದೇಶ ನೀಡುವುದರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ ಶಿವಲಿಂಗೇಗೌಡರ ಮಾತ ನಾಡಿ, ಅರಸೀಕೆರೆ ಕ್ಷೇತ್ರಕ್ಕೆ 821 ಕೋಟಿ ರೂ. ಅನುದಾನವನ್ನು 2019-20ನೇ ಸಾಲಿನಲ್ಲಿ ಒದಗಿಸಲಾಗಿದ್ದು ಪ್ರತಿ ಗ್ರಾಮ ದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನರ, ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಲಾಗಿದೆ.

ಅರಸೀಕೆರೆಯನ್ನು ರಾಜ್ಯ ದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡು ವುದು ತಮ್ಮ ಗುರಿಯಾಗಿದೆ. ಅಭಿವೃದ್ದಿ ಮೂಲಕವೇ ಟೀಕೆ ಮಾಡುವವರಿಗೆ ಉತ್ತ ರಿಸುತ್ತಿದ್ದೇನೆ. ಕ್ಷೇತ್ರದ ಕುಡಿಯುವ ನೀರು ಹಾಗೂ ನೀರಾವರಿಗೆ ಸತತ ಪ್ರಯತ್ನ ಮಾಡುತ್ತಿದ್ದೇನೆ. ಎತ್ತಿನಹೊಳೆ ಯೋಜನೆಗೂ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಅತ್ಯಂತ ಕ್ರಿಯಾಶೀಲ ಮತ್ತು ಹೃದಯವಂತರಾ ಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನು ದಾನ ನೀಡುತ್ತಿದ್ದಾರೆ. ತಮ್ಮನ್ನು ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಿಸಿರುವುದಕ್ಕೆ ಅವರು ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ, ಬೇಲೂರು ಶಾಸಕ ಲಿಂಗೇಶ್, ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಅಕ್ರಂ ಪಾಷ, ಉಪ ವಿಭಾಗಾಧಿಕಾರಿ ಡಾ.ನಾಗ ರಾಜ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಜಿಪಂ ಸದಸ್ಯರಾದ ಬಿಳಿ ಚೌಡಯ್ಯ, ಪಟೇಲ್ ಶಿವಪ್ಪ,ಲೋಲಾ ಕ್ಷಮ್ಮ, ವತ್ಸಲಾ ಶೇಖರಪ್ಪ, ಮಾಡಾಳು ಸ್ವಾಮಿ, ತಾಪಂ ಅಧ್ಯಕ್ಷೆ ರೂಪಾಗುರು ಮೂರ್ತಿ, ಎಪಿಎಂಸಿ ಅಧ್ಯಕ್ಷ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ಜಿಪಂ ಮಾಜಿ ಅಧ್ಯಕ್ಷೆ ಜ್ಯೋತಿ ಗಂಗಾ ಧರ್, ತಹಸೀಲ್ದಾರ್ ನಟೇಶ್, ನೂತನ ತಹಸೀಲ್ದಾರ್ ಸಂತೋಷ್,ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ರಾಷ್ಟ್ರದ ಭದ್ರತೆಗಾಗಿ ಒಗ್ಗಟ್ಟು ಪ್ರದರ್ಶಿಸಬೇಕು
ಹಾಸನ: ರಾಷ್ಟ್ರದ ಭದ್ರತೆ ವಿಷಯದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸ ಲೇಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ಚಾಮಿ ತಿಳಿಸಿದ್ದಾರೆ. ಅರಸೀಕೆರೆ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಭದ್ರತೆ ವಿಚಾರದಲ್ಲಿ ಎಲ್ಲಾ ಒಂದಾಗಲೇಬೇಕು ಎಂದರು. ದೇಶದ ಗಡಿಯಲ್ಲಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಭದ್ರತಾ ವ್ಯವಸ್ಥೆಯನ್ನೂ ಇನ್ನಷ್ಟು ಜಾಗ್ರತೆಗೊಳಿಸಲಾಗಿದೆ. ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದರು. ಜಿಲ್ಲೆಯ ತೆಂಗು ಬೆಳೆ ಪುನಶ್ಚೇತನಕ್ಕೆ ಕ್ರಮ ವಹಿಸಲಾಗಿದ್ದು, ಪ್ರತಿ ಮರಕ್ಕೆ 400 ರೂ.ಗಳಂತೆ ಸುಮಾರು 200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.

Translate »