ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್: ಬಿಜೆಪಿ ಸಂಭ್ರಮ
ಹಾಸನ

ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್: ಬಿಜೆಪಿ ಸಂಭ್ರಮ

February 28, 2019

ಹಾಸನ: ಕಳೆದ 11 ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಗೆ 40 ಯೋಧರು ಹುತಾತ್ಮರಾಗಿದ್ದು, ಭಾರತೀಯ ಸೈನಿಕರು ಇಂದು ತಕ್ಕ ಉತ್ತರ ಕೊಡುವ ಮೂಲಕ 300ಕ್ಕೂ ಹೆಚ್ಚು ಜನ ಭಯೋತ್ಪಾದಕರನ್ನು ಮಟ್ಟಹಾಕಿರುವ ಹಿನ್ನೆಲೆಯಲ್ಲಿ ನಗರದ ಹೇಮಾವತಿ ಹಾಗೂ ಇತರೆ ಕಡೆಗಳಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ, ಭಾರತ ಧ್ವಜವನ್ನು ಪ್ರದರ್ಶಿಸುವುದರ ಮೂಲಕ ಸಂಭ್ರಮಿಸಿದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಮಿರಾಜ್ 2000 ಯುದ್ಧ ವಿಮಾನಗಳು ಇಂದು ಗಡಿ ನಿಯಂತ್ರಣಾ ರೇಖೆ ಬಳಿಯ ಜೈಷ್ ಇ ಮೊಹಮ್ಮದ್ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಯುದ್ಧ ವಿಮಾನಗಳ ಮೂಲಕ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿಯ 10 ಬಾಂಬ್ ಅನ್ನು ಹಾಕಿದ್ದು, ದಾಳಿಯಲ್ಲಿ 200 ರಿಂದ 300 ಉಗ್ರರು ಮೃತಪಟ್ಟಿ ರುವ ಕುರಿತು ವರದಿಯಾಗಿದೆ. ಕಳೆದ ಎರಡು ವಾರಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಗೆ 40 ಯೋಧರು ಹುತಾತ್ಮರಾಗಿದ್ದರು. ಕಹಿ ಘಟನೆ ಹಿಂದೆಯೇ 11ನೇ ದಿನಕ್ಕೆ ಇದಕ್ಕೆ ತಕ್ಕ ಉತ್ತರವಾಗಿ ನೀಡಿರುವುದು ಭಾರತದಲ್ಲಿ ಸಂತೋಷ ತಂದಿದೆ ಎಂದರು.

ವಿಜಯೋತ್ಸವ ಸಂಭ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ನಗರಸಭೆ ಮಾಜಿ ಸದಸ್ಯ ರೂಪೇಶ್, ಪ್ರಸನ್ನಕುಮಾರ್, ಗ್ರಾಪಂ ಸದಸ್ಯ ಯೋಗೀಶ್, ಉದ್ದೂರಿನ ಪುರುಷೋತ್ತಮ್, ಕಾರ್ತಿಕ್, ಮಿಲ್ ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.

Translate »