ರೋಜ್ಗಾರ್ ಉದ್ಯೋಗ ಮೇಳದಲ್ಲಿ 60 ಮಂದಿ ಆಯ್ಕೆ
ಮೈಸೂರು

ರೋಜ್ಗಾರ್ ಉದ್ಯೋಗ ಮೇಳದಲ್ಲಿ 60 ಮಂದಿ ಆಯ್ಕೆ

January 6, 2019

ಮೈಸೂರು: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಿಂದ ಮೈಸೂರು ತಾಲೂಕು ಇಲವಾಲದಲ್ಲಿ ಶನಿವಾರ ನಡೆದ ರೋಜ್ಗಾರ್ ಮೇಳದಲ್ಲಿ 60 ಮಂದಿಗೆ ಉದ್ಯೋಗ ದೊರೆಯಿತು. ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ, ಸ್ಕಿಲ್ ಇಂಡಿಯಾ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗ ಮದ ಸಂಯುಕ್ತಾಶ್ರಯದಲ್ಲಿ ಇಲವಾಲದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿ ಸಿದ್ದ ಉದ್ಯೋಗ ಮೇಳವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ತೇಜಸ್ವಿನಿ ಎಂಟರ್‍ಪ್ರೈಸಸ್, ಯಂಗ್ ಇಂಡಿಯಾ, ಯುರೇಕಾ ಫೋಬ್ರ್ಸ್ ರಿಲಯನ್ಸ್ ಸ್ಮಾರ್ಟ್, ಟಾಲೆಂಟ್ ಹಂಟರ್ಸ್, ಎಸ್‍ಎಸ್ ಪ್ರಮೋಟರ್ಸ್ ಸೇರಿದಂತೆ 25ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಂದರ್ಶ ನದ ಮೂಲಕ 60 ಮಂದಿ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡರು ಎಂದು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ಪರಮೇಶ್ವರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಮಂದಿ ಉದ್ಯೋಗ ಮೇಳಕ್ಕೆ ಹಾಜರಾಗಿ ದ್ದರು. 2017ರ ಜುಲೈ 27ರಂದು ಕಾರ್ಯಾರಂಭ ಮಾಡಿದ ಕೌಶಲ್ಯ ಕೇಂದ್ರದಲ್ಲಿ ಈವರೆಗೆ 856 ಮಂದಿ ನೋಂದಾಯಿಸಿಕೊಂಡಿದ್ದು, 738 ಮಂದಿಗೆ ತರಬೇತಿ ನೀಡಲಾಗಿದೆ. ಆ ಪೈಕಿ 483 ಅಭ್ಯರ್ಥಿಗಳು ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಕೆಲಸಕ್ಕೆ ಸೇರಿ ಕೊಂಡಿದ್ದಾರೆ ಎಂದು ಉದ್ಯೋಗ ಮೇಳದಲ್ಲಿ ಪ್ರತಾಪ್ ಸಿಂಹ ತಿಳಿಸಿದರು. ಚಾಮುಂಡೇ ಶ್ವರಿ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಕುಮಾರ್‍ಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ, ಚಿದಂಬರ್, ರವಿರಾಜ್, ಗೋಪಾಲ್, ಸಂದೀಪ್, ಪಾಪಣ್ಣ, ಗಣೇಶ, ನೇಹಾ, ಮಂಜುನಾಥ ಸೇರಿದಂತೆ ಹಲವರು ಈ ಸಂದರ್ಭ ಪಾಲ್ಗೊಂಡಿದ್ದರು.

Translate »