ಚಿಕ್ಕಮಗಳೂರಿನಲ್ಲಿ ಮಲಬಾರ್ ಗೋಲ್ಡ್   ಅಂಡ್ ಡೈಮಂಡ್ಸ್ ಹೊಸ ಶೋರೂಂ ಆರಂಭ
ಮೈಸೂರು

ಚಿಕ್ಕಮಗಳೂರಿನಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹೊಸ ಶೋರೂಂ ಆರಂಭ

January 6, 2019

ಚಿಕ್ಕಮಗಳೂರು: ವಿಶ್ವದ ಟಾಪ್ 5 ಆಭರಣಗಳ ಬ್ರ್ಯಾಂಡ್‍ನಲ್ಲಿ ಒಂದಾಗಿ ರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಚಿಕ್ಕಮಗಳೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ. ಈ ಹೊಸ ಶೋರೂಂ ಅನ್ನು ಕನ್ನಡದ ಹೆಸರಾಂತ ಚಿತ್ರನಟ ಶ್ರೀಮುರಳಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ, ಮಲಬಾರ್ ಗ್ರೂಪ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಜೀದ್, eóÉೂೀನಲ್ ಹೆಡ್-ಕರ್ನಾಟಕ ಪಲ್ಸರ್ ಬಾಬು, ಹಲವಾರು ಗಣ್ಯರು, ಮಲಬಾರ್ ಗ್ರೂಪ್‍ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತ ರಿದ್ದರು. ಈ ಹೊಸ ಮಳಿಗೆ ಚಿಕ್ಕಮಗಳೂ ರಿನ, ಕೆ.ಎಂ ರಸ್ತೆ, ಸೈಂಟ್ ಜೋಸೆಫ್ ಕಾನ್ವೆಂಟ್ ಎದುರು, ತೊಗರಿ ಹಂಕಲ್ ವೃತ್ತದ ಹತ್ತಿರ ಇದ್ದು, ಇಲ್ಲಿ ಚಿನ್ನ, ವಜ್ರ, ಹರಳು ಮತ್ತು ಪ್ಲಾಟಿನಂನ ಹೊಸ ಹೊಸ ಸಂಗ್ರಹಗಳು ಇವೆ.

ಬಿಐಎಸ್ ಹಾಲ್‍ಮಾರ್ಕ್‍ನ ಚಿನ್ನಾಭ ರಣಗಳು, ಐಜಿಐ, ಜಿಐಎ ಪ್ರಮಾಣೀಕೃತ ವಜ್ರ ಮತ್ತು ಪಿಜಿಐ ಪ್ರಮಾಣೀಕೃತ ಪ್ಲಾಟಿನಂನ ಇತ್ತೀಚಿನ ಹೊಸ ವಿನ್ಯಾಸಗಳ ಆಭರಣ ಗಳ ಸಂಗ್ರಹ ಈ ಶೋರೂಂ ನಲ್ಲಿದೆ. ಆಭರಣಗಳಲ್ಲದೇ ಕರ್ನಾಟಕದ ಸಂಸ್ಕøತಿಯನ್ನು ಬಿಂಬಿಸುವ ಚಿನ್ನಾಭರಣ ಗಳೂ ಗ್ರಾಹಕರನ್ನು ಆಕರ್ಷಿಸಲಿವೆ. ಮೈನ್ ವಜ್ರಾಭರಣಗಳು, ಎರಾ-ಅನ್‍ಕಟ್ ವಜ್ರಾಭರಣಗಳು, ಡಿವೈನ್ – ಭಾರ ತೀಯ ಪಾರಂಪರಿಕ ಆಭರಣಗಳು, ಎತಿ ನಿಕ್ಸ್ ಕರಕುಶಲ ವಿನ್ಯಾಸಿತ ಆಭರಣಗಳು, ಪ್ರೆಶಿಯಾ-ಅಮೂಲ್ಯ ರತ್ನಾಭರಣಗಳು, ಸ್ಟಾರ್‍ಲೆಟ್ ಮಕ್ಕಳ ಆಭರಣಗಳು ಮತ್ತು ಹಾಯ್-ಕ್ಯಾಷುವಲ್ ಜ್ಯುವೆಲ್ಲರಿಯಂತಹ ಸಬ್‍ಬ್ರ್ಯಾಂಡ್‍ಗಳೂ ಸಹ ಈ ಶೋರೂಂ ನಲ್ಲಿ ಲಭ್ಯವಿದೆ. ಉದ್ಘಾಟನಾ ಕೊಡುಗೆ ಯಾಗಿ ವಿಶೇಷ ರಿಯಾಯಿತಿ ಇದೆ.

Translate »