ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರಿಂದ  9 ಡಕಾಯಿತರ ಬಂಧನ: 83 ಸಾವಿರ ನಗದು ವಶ
ಹಾಸನ

ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರಿಂದ 9 ಡಕಾಯಿತರ ಬಂಧನ: 83 ಸಾವಿರ ನಗದು ವಶ

February 13, 2019

ಅರಸೀಕೆರೆ: ಪಟ್ಟಣದಲ್ಲಿ ಇತ್ತೀಚೆಗೆ ಗೂಡ್ಸ್ ವಾಹನವೊಂದನ್ನು ಅಡ್ಡಗಟ್ಟಿ 2.42 ಲಕ್ಷ ನಗದು ಸೇರಿದಂತೆ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದ 9 ಜನ ಡಕಾಯಿತರನ್ನು ಬಂಧಿಸುವಲ್ಲಿ ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿ ದ್ದಾರೆ. ಆರೋಪಿಗಳಿಂದ 83 ಸಾವಿರ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಅರಸೀಕೆರೆ ತಾಲೂಕಿನ ಹೆಚ್.ಕೆ. ಯೋಗೇಶ್(21), ಹೆಚ್.ಎಸ್. ಕಿರಣ್(23), ಎಂ.ಕೆ.ರಾಕೇಶ್(22), ಬೀರೇಶ್(23), ಬೆಂಗ ಳೂರಿನ ಯಶ್‍ವಂತ್(24), ಕೆ.ರಾಹುಲ್ (20), ಮಂಜುನಾಥ್(22), ಜಿ.ಕಾರ್ತಿಕ್ (22), ಮೈಸೂರಿನ ಶ್ರೀನಿವಾಸ್(20) ಬಂಧಿತ ಆರೋಪಿಗಳು.

ಘಟನೆ ವಿವರ: ಅರಸೀಕೆರೆ ಪಟ್ಟಣದ ಎಪಿಎಂಸಿ ಯಾರ್ಡ್‍ನಲ್ಲಿರುವ ಹಿಂದೂ ಸ್ಥಾನ್ ಯೂನಿಲಿವರ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ಜ.25ರಂದು ಅಶೋಕ್ ಲೇಲ್ಯಾಂಡ್ ಮಿನಿ ಗೂಡ್ಸ್ ವಾಹನ(ಕೆಎ.13-ಸಿ.4123)ದಲ್ಲಿ ಕಂಪನಿಗೆ ಸೇರಿದ ಸರಕುಗಳನ್ನು ಗ್ರಾಹಕ ರಿಗೆ ನೀಡಲು ಚಾಲಕ ಯೋಗೇಶ್ ಮತ್ತು ಕೆಲಸಗಾರರಾದ ರುದ್ರೇಶ್, ಮುರುಳಿ, ಪುನೀತ್‍ರೊಂದಿಗೆ ಜೆ.ಸಿ.ಪುರ, ಡಿ.ಎಂ. ಕುರ್ಕೆ, ಪಂಚನಹಳ್ಳಿ ಕಡೆಗೆ ಹೋಗಿ ವಾಪಸ್ ಬರುತ್ತಿದ್ದಾಗ ತಾಲೂಕಿನ ರಾಮೇನಹಳ್ಳಿ ಮೀಸಲು ಅರಣ್ಯ ಇಲಾಖೆಯ 6ರಿಂದ 8 ಜನರ ಡಕಾಯಿತರ ತಂಡ ವಾಹನವನ್ನು ಅಡ್ಡಗಟ್ಟಿ, ಚಾಲಕನ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಹಾಗೂ ಮಲ್ಲಿಕಾರ್ಜುನ್ ಅವರ ಕಾಲಿಗೆ ರಾಡಿನಿಂದ ಒಡೆದು ಅವರನ್ನು ಹೆದರಿಸಿ, ಕಂಪನಿಗೆ ಸೇರಿದ 2,42,621 ರೂ.ಗಳನ್ನು ಹಾಗೂ ಕೆಲವು ಡೆಲಿವರಿ ಬಿಲ್‍ಗಳು ಮತ್ತು ಮೊಬೈಲ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಮಲ್ಲಿಕಾರ್ಜುನ್ ಅವರು ಅರಸೀಕೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಫೆ.12 ರಂದು 9 ಜನ ಡಕಾಯಿತರನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಗಳಿಂದ 83 ಸಾವಿರ ನಗದು, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಇತರೆ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಗಳಾದ ಸದಾನಂದ ಅ.ತಿಪ್ಪಣ್ಣನವರ್, ಬಿ.ಆರ್.ಗೋಪಿ, ಸರ್ಕಲ್ ಇನ್‍ಸ್ಪೆಕ್ಟರ್ ಎಸ್.ಸಿದ್ದರಾಮೇಶ್ವರ, ಸಿಬ್ಬಂದಿಗಳಾದ ಹೀರಾಸಿಂಗ್, ಲೋಕೇಶ, ಮಂಜುನಾಥ, ರವಿ, ಮೋಹನಕುಮಾರ್, ಶೇಖರ್ ಗೌಡ ಶಿರಿಗೇರಿ, ಫಕ್ರುದ್ದೀನ್, ನಂಜುಂಡೇಗೌಡ, ಕೇಶವ ಮೂರ್ತಿ, ಶಂಕರೇಗೌಡ, ಚಾಲಕ ವಸಂತ ಕುಮಾರ, ಪೀರ್‍ಖಾನ್ ಪಾಲ್ಗೊಂಡಿ ದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದ್ದು, 25 ಸಾವಿರ ನಗದು ಬಹುಮಾನ ಘೋಷಿಸಿದೆ.

Translate »