ಹಾಸನ: ಕ್ಷಯ ರೋಗ ನಿಯಂ ತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಸಂಪೂರ್ಣ ಸಹಕಾರ ನೀಡುವುದು ಸಾಮಾಜಿಕ ಜವಾ ಬ್ದಾರಿಯಾಗಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಖಾಸಗಿ ಆಸ್ಪತ್ರೆ ಗಳಲ್ಲಿ ಕ್ಷಯ ರೋಗಿಗಳ ನೋಂದಾಣಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಉದ್ದೇಶಕ್ಕೆ ಖಾಸಗಿ ಆಸ್ಪತ್ರೆಗಳ ಸಂಪೂರ್ಣ ಸಹಯೋಗ ಬೇಕಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯ ರೋಗಿ ಗಳು ಪತ್ತೆಯಾದಲ್ಲಿ ಅಥವಾ ತಪಾಸಣೆ ನಡೆದಲ್ಲಿ ಆ ಬಗ್ಗೆ ಮಾಹಿತಿಯನ್ನು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗ ಳೊಂದಿಗೆ ಹಂಚಿಕೊಳ್ಳಬೇಕು. ಪ್ರತಿ ತಿಂಗಳು ನಿಗದಿತ ತಂತ್ರಾಂಶದ ಮೂಲಕ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1,326 ಕ್ಷಯ ರೋಗಿಗಳನ್ನು ಪತ್ತೆ ಮಾಡ ಲಾಗಿದೆ. ಈ ಪೈಕಿ 116 ರೋಗಿಗಳು ಟಿ.ಬಿ. ಹಾಗೂ ಹೆಚ್.ಐ.ವಿ ಸೋಂಕಿತರಾಗಿ ದ್ದಾರೆ. ಇದಲ್ಲದೆ 153 ಮಕ್ಕಳಲ್ಲಿ ಕ್ಷಯ ರೋಗ ದೃಢÀಪಟ್ಟಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆ ಗಳಲ್ಲಿ 177 ಕ್ಷಯ ರೋಗಿಗಳನ್ನು ಗುರುತಿ ಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಸನಾಂಬ ವೈದ್ಯಕೀಯ ಕಾಲೇಜಿ ನಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕ್ಷಯ ರೋಗ ಪತ್ತೆಯಂತ್ರದ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ 233 ಮಂದಿಗೆ ಕಫದ ಮಾದರಿ ಯನ್ನು ಪರೀಕ್ಷೆ ಮಾಡಿಕೊಡಲಾಗಿದೆ. ಈ ಸಿಬಿನಟ್/ ಜೀನ್ ಎಕ್ಸ್‍ಪರ್ಡ್ ತಪಾ ಸಣೆಗೆ 1,000 ರೂ. ವೆಚ್ಚವಾಗಲಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ವವರಿಗೂ ಸರ್ಕಾರದ ವತಿಯಿಂದ ಹಿಮ್ಸ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡ ಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವ ಟಿ.ಬಿ. ನಿಯಂತ್ರಣ ಮಾತ್ರೆಗಳನ್ನು ಗುರುತಿಸಲ್ಪಟಿ ರುವ ರೋಗಿಗಳಿಗೂ ಭಾರಿ ವ್ಯತ್ಯಾಸವಿದೆ ಇದನ್ನು ಸರಿಪಡಿಸಲು ಖಾಸಗಿ ಆಸ್ಪತ್ರೆ ಗಳು ಹಾಗೂ ಔಷಧಿ ಮಾರಾಟಗಾರರ ಸಹಕಾರ ಅಗತ್ಯ ಎಂದು ಹೇಳಿದರು.
ಟಿ.ಬಿ ಪೋರಂ: ಕ್ಷಯ ರೋಗ ನಿಯಂತ್ರಣ ಮತ್ತು ನಿರ್ಮೂಲನೆ ಕುರಿತು ವ್ಯವಸ್ಥಿತ ಜಾಗೃತಿ ಮೂಡಿಸಲು ಟಿ.ಬಿ ಪೋರಂ ರಚಿಸಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕ್ಷಯ ರೋಗ ಅಧಿಕಾರಿ, ವೈದ್ಯಾಧಿಕಾರಿಗಳ ಸಂಘದ ಪ್ರತಿನಿಧಿಗಳು, ವಕೀಲರ ಸಂಘ, ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಇದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ತಾಲೂಕು ಆರೋಗ್ಯಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಜರಿದ್ದರು.