ಶ್ರವಣಬೆಳಗೊಳ: ಪೂಜ್ಯ ಗಣನೀ ಆರ್ಯಿಕಾಶ್ರೀ ಮಾತಾಜಿಯವರ ಕೊಡುಗೆ ಧಾರ್ಮಿಕ ಕ್ಷೇತ್ರಕ್ಕೆ ಅಪಾರವಾದದ್ದು ಎಂದು ಶ್ರವಣಬೆಳಗೋಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದರು.
ಪಟ್ಟಣದ ಚಾವುಂಡರಾಯ ಸಭಾ ಮಂಟಪ ದಲ್ಲಿ ಆಯೋಜಿಸಲಾಗಿದ್ದ ಸಮಸ್ತ ಪೂಜ್ಯ ಗಣನೀ ಆರ್ಯಿಕಾಶ್ರೀ ಮಾತಾಜಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನೂತನ ಅಧ್ಯಕ್ಷರ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಚಾತು ರ್ಮಾಸ ಕೈಗೊಂಡಿದ್ದ ಮಾತಾಜಿಯವರು ಧಾರ್ಮಿಕ ಕಲ್ಯಾಣ ಕಾರ್ಯಗಳನ್ನು ನೆರವೇ ರಿಸಿರುವುದು, ನಮ್ಮೆಲ್ಲರ ಪುಣ್ಯ. ಚಾತು ರ್ಮಾಸ ಮುಗಿಸಿ ಮಂಗಳ ವಿಹಾರ ಮಾಡು ತ್ತಿರುವ ಮಾತಾಜಿ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕರ್ನಾಟಕ ಜೈನ ಅಸೋಸಿಯೇಷನ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟಗಳು ರಾಜ್ಯದಲ್ಲಿ ಮಾದರಿ ಸಂಘ ಟನೆಗಳಾಗಿವೆ. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ಅವರು ರಾಜ್ಯದ ಎಲ್ಲಾ ಮಹಿಳಾ ಸಂಘಗಳನ್ನು ಒಗ್ಗೂಡಿಸಿಕೊಂಡು ಮುನ್ನ ಡೆಸಬೇಕು. ನೊಂದವರ ಉದ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉತ್ತಮ ಯೋಜನೆ ಗಳನ್ನು ರೂಪಿಸಿ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಪೂಜ್ಯಗಣನೀ ಆರ್ಯಿಕಾಶ್ರೀ ಜಿನದೇವಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾಶ್ರೀ ಸರಸ್ವತಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾಶ್ರೀ ವಿಶಾಶ್ರೀ ಮಾತಾಜಿ, ಪೂಜ್ಯ ಗಣನೀ ಆರ್ಯಿ ಕಾಶ್ರೀ ಸುವಿಧಿಮತಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾಶ್ರೀ ಜಿನವಾಣಿ ಮಾತಾಜಿ, ಪೂಜ್ಯ ಗಣನೀ ಆರ್ಯಿಕಾಶ್ರೀ ಗುರುವಾಣಿ ಮಾತಾಜಿಯವರಿಗೆ ‘ಮಹಿಳಾ ಆದರ್ಶ ಸಾಧ್ವಿ ರತ್ನ’ ಬಿರುದನ್ನು ನೀಡಿ ಅಭಿನಂದಿ ಸಲಾಯಿತು.
ನಂತರ ಆಚಾರ್ಯಶ್ರೀ ವರ್ಧಮಾನ ಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಆಚಾರ್ಯಶ್ರೀ ಸುವಿಧಿಸಾಗರ ಮಹಾರಾಜರು, ಆಚಾರ್ಯ ಶ್ರೀ ಪಂಚಕಲ್ಯಾಣಕ ಸಾಗರ ಮಹಾ ರಾಜರು, ಆಚಾರ್ಯಶ್ರೀ ಸುಧೇಶಸಾಗರ ಮಹಾರಾಜರು, ಆಚಾರ್ಯಶ್ರೀ ತೀರ್ಥ ನಂದಿಸಾಗರ ಮಹಾರಾಜರು, ಆಚಾರ್ಯ ಶ್ರೀ ಶ್ರೇಯಸಾಗರ ಮಹಾರಾಜರು ಹಾಗೂ ಮುನಿ ವೃಂದದವರು ಪಾವನ ಸಾನಿಧ್ಯ ವಹಿಸಿದ್ದರು. ಮಹಾಮಸ್ತಕಾ ಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಶೀಲಾ ಅನಂತರಾಜ್ ಉಪಸ್ಥಿತರಿದ್ದರು.




