ಮದ್ಯದ ಅಮಲಿನಲ್ಲಿ ತಮ್ಮನ ಮೇಲೆ ಅಣ್ಣನಿಂದ ಮಾರಣಾಂತಿಕ ಹಲ್ಲೆ
ಚಾಮರಾಜನಗರ

ಮದ್ಯದ ಅಮಲಿನಲ್ಲಿ ತಮ್ಮನ ಮೇಲೆ ಅಣ್ಣನಿಂದ ಮಾರಣಾಂತಿಕ ಹಲ್ಲೆ

November 9, 2018

ಹನೂರು:  ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ತಮ್ಮನ ಮೇಲೆ ಮಚ್ಚಿನಿಂದ ನಡೆಸಿದ ಘಟನೆ ಹನೂರು ಪಟ್ಟಣದ ಮಾರುತಿ ನಗರದಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.ಪಟ್ಟಣದ ನಂದಾ (35) ಎಂಬ ವ್ಯಕ್ತಿಯೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ವಿವರ: ಅಕ್ಕ ತಂಗಿಯರ ಮಕ್ಕಳಾದ ರಾಜು ಹಾಗೂ ನಂದ ಇಬ್ಬರು ಬೆಳಿಗ್ಗೆ ಪಾನ ಮತ್ತರಾಗಿ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ನಂದಾ ಗಾರೆ ಕೆಲಸ ಕೂಲಿ ಕಾರ್ಮಿಕ ನಾಗಿದ್ದು, ಅಣ್ಣ ರಾಜು ಬೀಗದ ರಿಪೇರಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಅಣ್ಣ ತಮ್ಮಂ ದಿರುಬ್ಬರೂ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿ, ಈ ದ್ವೇಷದಿಂದ ಅಣ್ಣ ರಾಜು ಮನೆಯಲ್ಲಿ ಮಲಗಿದ್ದ ನಂದಾನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ನಂದಾ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಪತ್ನಿ ಲತಾ ಸಹಾಯಕ್ಕಾಗಿ ನೆರೆ ಹೊರೆಯವರನ್ನು ಕೂಗಿದ್ದಾರೆ.
ನಂತರ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಹನೂರು ಪೊಲೀಸರು ತುರ್ತುವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಆರೋಪಿ ರಾಜುವನ್ನು ಹನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Translate »