ಅರ್ಥಪೂರ್ಣ ಟಿಪ್ಪು ಜಯಂತಿಗೆ ನಿರ್ಧಾರ
ಚಾಮರಾಜನಗರ

ಅರ್ಥಪೂರ್ಣ ಟಿಪ್ಪು ಜಯಂತಿಗೆ ನಿರ್ಧಾರ

November 9, 2018

ಯಳಂದೂರು: ತಾಲೂಕು ಆಡಳಿತದ ವತಿಯಿಂದ ನ.10 ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಬಗ್ಗೆ ನ.5 ರಂದು ತಾಲೂಕು ಆಡ ಳಿತ ಪೂರ್ವಭಾವಿ ಸಭೆಯನ್ನು ನಡೆಸಿತ್ತು. ಜಹಗಿರ್ದಾರ್ ಬಂಗಲೆ ಮುಂಭಾಗ ಸ್ಥಳ ನಿಗಧಿಯಾಗಿತ್ತು. ಆದರೆ ಒಳಾಂಗಣದಲ್ಲೇ ಜಯಂತಿ ಆಚರಣೆಗೆ ಸ್ಪಷ್ಟ ಆದೇಶವಿರುವ ಹಿನ್ನೆಲೆಯಿಂದ ಕೆಲವರು ಜಾಗದ ಗೊಂದ ಲದಿಂದ ಸಭೆ ಅಪೂರ್ಣಗೊಂಡಿತ್ತು. ನಂತರ ಯಳಂದೂರು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಂತರ ಸಭೆಯಲ್ಲಿ ಯಳಂದೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಾಜೇಶ್ ಮಾತನಾಡಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಯಂತಿ ಆಚ ರಣೆ ಸಮಯದಲ್ಲಿ ಯಾವುದೇ ಮೆರವಣಿ ಗೆಗೆ ಅವಕಾಶವಿರುವುದಿಲ್ಲ. ಬ್ಯಾನರ್, ಬಾವು ಟಗಳನ್ನು ಅಳವಡಿಸಬಾರದು, ಯಾವುದೇ ಘೋಷಣೆ ಕೂಗಲು ಅವಕಾಶವಿರುವು ದಿಲ್ಲ. ಕಟ್ಟುನಿಟ್ಟಾಗಿ ಎಲ್ಲರೂ ಕಾನೂನು ಪಾಲಿಸಬೇಕೆಂದು ನಿಯಮವಿರುವ ಹಿನ್ನೆ ಲೆಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ತಾಪಂ ಸದಸ್ಯ ವೈ.ಕೆ.ಮೋಳೆ ನಾಗರಾಜು, ಪಪಂ ಸದಸ್ಯ ವೈ.ವಿ. ಉಮಾಶಂಕರ ತಹಶೀಲ್ದಾರ್ ಗೀತಾ ಹುಡೇದ ಇಒ ಬಿ.ಎಸ್. ರಾಜು ಮುಸ್ಲಿಂ ಜನಾಂಗದ ಮುಖಂಡರಾದ ನಯಾಜ್ ಖಾನ್, ನಿಸಾರ್ ಅಹಮ್ಮದ್, ಶಬ್ಬೀರ್, ಅಪ್ಸರ್ ಖಾನ್, ರಿಜ್ವಾನ್, ಕಲೀಂಮುಲ್ಲಾ ಎಚ್.ಬಿ. ಮಹದೇವಸ್ವಾಮಿ, ನಾಗೇಂದ್ರಮೌರ್ಯ ಇತರರು ಇದ್ದರು.

Translate »