ಸಂಕ್ರಾಂತಿ ಹಬ್ಬ: ಎಳ್ಳು, ಬೆಲ್ಲ, ಕಬ್ಬು, ಹೂವಿಗೆ ಬಾರಿ ಬೇಡಿಕೆ
ಹಾಸನ

ಸಂಕ್ರಾಂತಿ ಹಬ್ಬ: ಎಳ್ಳು, ಬೆಲ್ಲ, ಕಬ್ಬು, ಹೂವಿಗೆ ಬಾರಿ ಬೇಡಿಕೆ

January 15, 2019

ಹಾಸನ: ನಗರದ ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ ಸುತ್ತಮುತ್ತ ಮಕರ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.

ಸಂಕ್ರಾಂತಿ ಹಬ್ಬದ ಪದಾರ್ಥವನ್ನು ಕೊಳ್ಳಲು ಸೋಮವಾರ ಬೆಳಗ್ಗಿನಿಂದಲೇ ನಗರದ ಕಟ್ಟಿನಕೆರೆ ಮಾರುಕಟ್ಟೆ ಹಾಗೂ ಕಸ್ತೂರಬಾ ರಸ್ತೆಯಲ್ಲಿ ಜನತೆ ಮುಗಿ ಬಿದ್ದಿದ್ದರು. ಎಳ್ಳು-ಬೆಲ್ಲವನ್ನು ಪ್ಯಾಕೆಟ್ ಮಾಡಿ ಮಾಮೂಲಿ ಬೆಲೆಯಲ್ಲೇ ಮಾರಾಟ ಮಾಡಿದರು. ಸೇವಂತಿ ಹೂವು ಒಂದು ಮಾರಿಗೆ 30 ರಿಂದ 50 ರೂ.ಗಳು ಇದ್ದು, ಕಬ್ಬು ಜೋಡಿಗೆ 30, 50, 60 ರೂ.ಗಳವರೆಗೂ ಮಾರಾಟ ಮಾಡಲಾಯಿತು. ಈ ಹಬ್ಬದ ವಿಶೇಷ ಎಂದರೆ ಅವರೆಕಾಯಿ ಕೂಡ ಒಂದು ಕೆಜಿಗೆ 40 ರಿಂದ 50 ರೂ. ಗಳವರೆಗೂ ಇದ್ದು, ಬಾಳೆಹಣ್ಣು ಒಂದು ಕೆಜಿಗೆ 60 ರಿಂದ 80 ರೂ.ಗಳಿದ್ದವು. ಮಾವಿನ ಎಲೆ ಕಟ್ಟಿಗೆ 10 ರಿಂದ 20 ರೂ.ಗಳು ಇರುವುದು ಕಂಡು ಬಂದಿತು.

ಹಬ್ಬದ ವ್ಯಾಪಾರ ಮಾಡುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದರಿಂದ ಟ್ರಾಫಿಕ್ ಜಾಮ್ ಆಗಿ ವ್ಯಾಪಾರ ಮಾಡುವ ಪಾದಾಚಾರಿ ಗ್ರಾಹಕರಿಗೆ ಸಲ್ಪ ಕಿರಿಕಿರಿ ಉಂಟಾಯಿತು.

Translate »