ಹಾಸನ: ಮಹಾತ್ಮ ಗಾಂಧೀಜಿ ಹತ್ಯೆಯಾಗಿ ಹುತಾತ್ಮರಾದ ದಿನದಂದು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಗೆ ಜೈಕಾರ ಹಾಕುವ ಮೂಲಕ ಗಾಂಧೀಜಿಗೆ ಅಪಮಾನಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು.
ನಗರದ ಬಿ.ಎಂ.ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಬಂದ ಪ್ರತಿಭಟನಾಕಾರರು ಆರೋಪಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು.
ಹಿಂದೂ ಮಹಾಸಭಾದವರು ಗಾಂಧೀಜಿಯವರ ಪ್ರತಿಕೃತಿಗೆ ಶೂಟ್ ಮಾಡುವುದರ ಮೂಲಕ ಮತ್ತು ನಾಥುರಾಮ್ ಗೋಡ್ಸೆಗೆ ಜೈಕಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಾವ ಗಲ್ ಮಂಜುನಾಥ್ ಮಾತನಾಡಿ, ಜನ ವರಿ 30 ಮಹಾತ್ಮ ಗಾಂಧೀಜಿ ಹತ್ಯೆ ಯಾದ ದಿನ. ಇದನ್ನು ದೇಶ ಮತ್ತು ವಿಶ್ವದಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಆಚರಣೆ ಯಲ್ಲಿ ವಿಕೃತ ಮನಸ್ಸಿನ ಹಿಂದೂ ಮಹಾ ಸಭಾದವರು ಗಾಂಧೀಜಿಯವರ ಪ್ರತಿ ಕೃತಿಗೆ ಶೂಟ್ ಮಾಡಿ ಹಾಗೂ ನಾಥು ರಾಮ್ ಗೋಡ್ಸೆಗೆ ಜೈಕಾರ ಹಾಕುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಎಂದು ದೂರಿದರು.
ಈ ಘಟನೆಯಿಂದ ಇಡೀ ದೇಶ ತಲೆ ತಗ್ಗಿಸುವ ವಿಚಾರ ಇದಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕರೆ ಯಂತೆ ದೇಶದ ಎಲ್ಲಾ ಭಾಗಗಳಲ್ಲಿ ಮೌನ ಪ್ರತಿಭಟನೆಯನ್ನು ಮಾಡುತ್ತಿ ರುವುದಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೆಚ್. ಕೆ.ಜವರೇಗೌಡ ಮಾತನಾಡಿ, ಸ್ವಾತಂತ್ರ್ಯ ವನ್ನು ತಂದುಕೊಟ್ಟಂತಹ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆ ದಿವಸವನ್ನು ಇಡೀ ಪ್ರಪಂಚದಾದ್ಯಂತ ಹುತಾತ್ಮ ದಿನಾಚರಣೆಯನ್ನಾಗಿ ಆಚರಿ ಸುತ್ತಿದ್ದಾರೆ. ಗಾಂಧೀಜಿಗೆ ಗುಂಡು ಹಾರಿಸಿ ದಾಗ ಅವರು ಹೇ ರಾಮ್ ಎಂದಿದ್ದರು. ನಾಥುರಾಮ್ ಗೂಡ್ಸೆ ಮಾಡಿದ್ದೇ ಸರಿ ಎಂದು ಹೇಳುತ್ತಿರುವುದು ಈ ರಾಷ್ಟ್ರಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ವೇತಾ ದೇವರಾಜು, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್, ಬಾಗೂರು ಮಂಜೇಗೌಡ, ಅಸ್ಲಾಂ ಪಾಷ, ತಂಬ್ಲಾಪುರ ಗಣೇಶ್, ಮುಬಾಶೀರ ಅಹ ಮದ್, ಖಯಿಂ ಇತರರು ಪಾಲ್ಗೊಂಡಿದ್ದರು.