ಎಂಡಿಎನ್ ಜನ್ಮದಿನ ಗ್ರಾಮ ಸ್ವರಾಜ್ಯ ದಿನವಾಗಿ ಆಚರಣೆ
ಚಾಮರಾಜನಗರ

ಎಂಡಿಎನ್ ಜನ್ಮದಿನ ಗ್ರಾಮ ಸ್ವರಾಜ್ಯ ದಿನವಾಗಿ ಆಚರಣೆ

February 12, 2019

ಚಾಮರಾಜನಗರ: ಫೆ.13ರ ಪೆÇ್ರ. ಎಂಡಿಎನ್ ಜನ್ಮ ದಿನಾಚರಣೆಯನ್ನು ಜಿಲ್ಲಾ ರೈತ ಸಂಘ ಗ್ರಾಮ ಸ್ವರಾಜ್ಯ ದಿನವನ್ನಾಗಿ ಆಚರಿಸುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪೆÇ್ರ.ಎಂಡಿಎನ್ ಪ್ರತಿಷ್ಠಾನದ ಆಶ್ರಯದಲ್ಲಿ ಎಂಡಿಎನ್ ಸ್ಮಾರಕವಿರುವ ಅಮೃತಭೂಮಿಯಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಅಲ್ಲಿನ ರೈತರ ಬಗ್ಗೆ ಶ್ರಮಿಸಿ ರುವ ಓರ್ವರನ್ನು ಸನ್ಮಾನಿಸಲಾಗುವುದು. ಬಳಿಕ ಸಾವಯವ ಸಂತೆ ಆರಂಭ ಕುರಿತು ರೈತರ ಸಭೆ ನಡೆಸಲಾಗುವುದು ಎಂದು ಹೇಳಿದ ಅವರು, ಫೆ.24ರಂದು ಚಾಮರಾಜ ನಗರದ ಚಾಮರಾಜೇಶ್ವರ ದೇವಾಲಯದ ಪಕ್ಕ ಹಳೆ ಎಸ್ಪಿ ಕಚೇರಿಯಿದ್ದ ಜಾಗದಲ್ಲಿ ಸಾವಯವ ಸಂತೆ ಆರಂಭಿಸಲಾಗುವುದು. ಪ್ರತಿ ನಾಲ್ಕನೇ ಭಾನುವಾರ ಸಾವಯವ ಸಂತೆ ನಡೆಯಲಿದೆ ಎಂದು ತಿಳಿಸಿದರು.

ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ಧ: ಬಡಗಲ ಪುರ ನಾಗೇಂದ್ರ ರಾಜಕೀಯ ಉz್ದÉೀಶ ಹೊಂದಿರುವವರು. ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿದರು. ಇದನ್ನು ಜಿಲ್ಲಾ ರೈತ ಸಂಘದಲ್ಲಿದ್ದ ನಾವು ಮೊದಲೇ ವಿರೋಧಿಸಿ ದ್ದೆವು. ಈಗ ಚುಕ್ಕಿ ನಂಜುಂಡಸ್ವಾಮಿಯ ವರು ಬಡಗಲಪುರ ನಾಗೇಂದ್ರ ಅವರು ಏಕಾ ಏಕಿ ರಾಜ್ಯಾಧ್ಯಕ್ಷರೆಂದು ಘೋಷಿಸಿಕೊಂಡಿ ರುವುದನ್ನು ವಿರೋಧಿಸಿದ್ದಾರೆ. ಈಗ ರಾಜ್ಯ ರೈತ ಸಂಘದಲ್ಲಿ ವಿವಿಧ ಬಣಗಳು ಏರ್ಪಟ್ಟಿವೆ ಎಂದು ವಿಷಾದಿಸಿದರಲ್ಲದೆ, ರಾಜ್ಯ ರೈತ ಸಂಘದ ಬಣಗಳು ಮೂಗು ತೂರಿಸಿದ್ದರಿಂ ದಾಗಿ ಜಿಲ್ಲಾ ರೈತ ಸಂಘ ಎರಡು ಹೋಳಾ ಗಿದೆ. ಈಗ ಜಿಲ್ಲೆಯಲ್ಲಿರುವ ಇನ್ನೊಂದು ಬಣ ರಾಜ್ಯ ಸಂಘದ ಬಣಗಳ ಜೊತೆ ಗುರುತಿಸಿಕೊಳ್ಳದೆ ಬಂದರೆ, ಜಿಲ್ಲೆಯಲ್ಲಿರುವ ರೈತ ಸಂಘದ ಎಲ್ಲರೂ ಒಂದಾಗಿ ಸಾಗಬ ಹುದು. ಇದಕ್ಕಾಗಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸಲೂ ಸಿದ್ಧ ಸ್ಪಷ್ಟಪಡಿಸಿದರು.

ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಪೃಥ್ವಿ, ಸಂಘಟನಾ ಕಾರ್ಯ ದರ್ಶಿ ಹೆಚ್.ಬಿ.ಬಸವಣ್ಣ, ಖಜಾಂಚಿ ಅಂಬಳೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »