ಹಾಸನ: ನಿಷ್ಕರುಣಿ ತಾಯಿ ಯೋರ್ವಳು ನವಜಾತ ಶಿಶುವನ್ನು ರಸ್ತೆ ಬದಿ ಬಿಸಾಡಿ ಹೋಗಿರುವ ಘಟನೆ ನಗರದ ಬಿ.ಎಂ ರಸ್ತೆಯ ಸಮೀಪ ನಡೆದಿದೆ.
ನವಜಾತ ಶಿಶು ರಾತ್ರಿಯಿಡೀ ಚಳಿ ಯಲ್ಲಿ ನಡುಗಿ ಪ್ರಾಣ ಬಿಟ್ಟಿದೆ. ಈ ಘಟನೆ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ನಡೆ ದಿದ್ದು, ಬೆಳಿಗ್ಗೆ ಮಗುವಿನ ಮೃತದೇಹ ನೋಡಿದ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಡಾವಣೆ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲಿ ಸಿದರು. ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನವಜಾತ ಶಿಶುವಿನ ಪರಿಸ್ಥಿತಿ ಕಂಡರೆ ಎಲ್ಲರಿಗೂ ಕರುಳು ಕಿತ್ತು ಬರುವಂತಿತ್ತು.