ಐಟಿಐ ಕಾಲೇಜಿನಲ್ಲಿ ಜೇನು ಗೂಡು: 2 ದಿನ ರಜೆ
ಚಾಮರಾಜನಗರ

ಐಟಿಐ ಕಾಲೇಜಿನಲ್ಲಿ ಜೇನು ಗೂಡು: 2 ದಿನ ರಜೆ

February 20, 2019

ಬೇಗೂರು: ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಕೆಂದ್ರದ ಮುಖ್ಯಧ್ವಾರದಲ್ಲಿ ಹೆಜ್ಜೇನು ಕಟ್ಟಿದ ಪರಿಣಾಮ ಕಳೆದೆರಡು ದಿನಗಳಿಂದ ಕಾಲೇಜಿಗೆ ರಜೆ ಘೋಷಿಸಿದ ಪ್ರಸಂಗ ನಡೆದಿದೆ.

ಭಾನುವಾರ ಸಂಸ್ಥೆಗೆ ರಜೆಯಿದ್ದು ಸೋಮವಾರ ಬಾಗಿಲು ತೆರೆಯುವ ಸಂದರ್ಭದಲ್ಲಿ ಪ್ರವೇಶ ದ್ವಾರದ ಮುಂಭಾಗದಲ್ಲೇ ಜೇನುಗೂಡು ಕಟ್ಟಿ ಹುಳುಗಳು ಹಾರಾಡುತ್ತಿರುವುದನ್ನು ಗಮನಿ ಸಿದ ಸಿಬ್ಬಂದಿಗಳು ಜೇನಿನಿಂದಾಗಬಹುದಾದ ಅಪಾಯವನ್ನು ಮನಗಂಡು ಸೋಮವಾರ ರಜೆ ಘೋಷಿಸಿ ಸಂಜೆಯ ತನಕ ಕಾದು ಸಂಜೆಯ ಮೇಲೆ ಜೇನನ್ನು ಓಡಿಸುವ ಪ್ರಯತ್ನ ಮಾಡ ಲಾಯಿತಾದರೂ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ766 ರ ಪಕ್ಕದಲ್ಲಿ ರುವುದರಿಂದ ದಿನಂಪ್ರತಿ ನೂರಾರು ವಾಹನಗಳು ಚಲಿಸುವುದರಿಂದ ಅಪಾಯವಾಗುವುದನ್ನು ನಿರೀಕ್ಷಿಸಿ ರಾತ್ರಿ ಓಡಿಸಲು ಪ್ರಯತ್ನಿಸ ಲಾಯಿತಾದರೂ ಜೇನುಹುಳುಗಳನ್ನು ಓಡಿಸಲಾಗಲಿಲ್ಲ.

ಜೇನುಹುಳುಗಳು ನಿನ್ನೆಗಿಂತ ಹೆಚ್ಚಾಗಿ ಕಟ್ಟಿದ್ದರಿಂದ ಇಂದೂ ಸಹ ಕಾಲೇಜಿಗೆ ರಜೆ ನೀಡಿ ಅರಣ್ಯ ಇಲಾಖೆಯ ಸಹಾಯ ಪಡೆದು ರಾತ್ರಿ ಜೇನುಹುಳುಗಳನ್ನು ಓಡಿಸಲಾಗುವುದು ಎಂದು ಶಿಕ್ಷಕರು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಮುನ್ನೂರಕ್ಕೂ ಹೆವ್ವು ವಿದ್ಯಾರ್ಥಿಗಳು, ಮೂವತ್ತಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು ಜೇನುಹುಳುಗಳು ದಾಳಿ ಮಾಡುವ ಭಯದಿಂದ ಸಂಸ್ಥೆಗೆ ರಜೆ ನೀಡಿದ್ದು, ಸಂಸ್ಥೆಯ ಕಡೆ ಯಾರೂ ಸುಳಿದಾಡದಂತೆ ನೋಡಿಕೊಳ್ಳಲಾಗುತ್ತಿದೆ.

Translate »