ಬೇಲೂರು: ಪಟ್ಟಣದ ಲೋಕೋ ಪಯೋಗಿ ಇಲಾಖೆಯ ವಸತಿಗೃಹದಲ್ಲಿ ಸೋಮವಾರ ಪಟ್ಟಣದ ದೇಶಭಕ್ತರ ಬಳಗ ದಿಂದ ವಿಶ್ವ ಭೂ ದಿನ ಆಚರಿಸಲಾಯಿತು.
ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿದು ಕಾಡು ನಾಶ ಮಾಡು ತ್ತಿರುವುದರಿಂದ ಭೂಮಿ ಬರಡಾಗಿದೆ. ಮರ ಗಳು ತನ್ನ ಬೇರಿನಿಂದ ನೀರಿನ ಅಂಶ ವನ್ನು ಹಿಡಿದಿಟ್ಟುಕೊಂಡು ಹೊರಬಿಡುತ್ತ್ತಿದೆ ಇದ್ದರಿಂದಾಗಿ ಮಾತ್ರ ಜಲ ಮೂಲ ಉಳಿಯುತ್ತಿದೆ. ಪ್ರತಿಯೊಬ್ಬರೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈಗಾಗಲೇ ಎಲ್ಲೆಡೆ ಪ್ಲಾಸ್ಟಿಕ್ ಹಾವಳಿ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯು ವುದರಿಂದ ಮಳೆಯ ನೀರು ನೇರವಾಗಿ ಭೂಮಿಯನ್ನು ತಲುಪಲು ಸಾಧÀ್ಯವಾಗು ತ್ತಿಲ್ಲ. ಹಾಗಾಗಿ, ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ನೆಪ ಮಾತ್ರಕ್ಕೆ ಗಿಡಗಳನ್ನು ನೆಡುವ ಪದ್ಧತಿ ಬಿಟ್ಟು, ನೆಟ್ಟ ಗಿಡಗಳಿಗೆ ನೀರು ಹಾಕಿ ಮರಗಳನ್ನು ಬೆಳೆಸುವ ಕಾಯಕಕ್ಕೆ ಜನರು ಮುಂದಾಗಬೇಕಿದೆ. ನಿಜಕ್ಕೂ ದೇಶಭಕ್ತರ ಬಳಗ ವಿಶ್ವ ಭೂ ದಿನಾಚರಣೆಯನ್ನು ಮಾಡುವ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶಭಕ್ತರ ಬಳಗದ ಪದಾಧಿಕಾರಿ ಯೋಗೀಶ್, ಕೇಶವ ಮೂರ್ತಿ, ಗ್ರೀನರಿ ಟ್ರಸ್ಟ್ ಕಾರ್ಯದರ್ಶಿ ನಾಗರಾಜು, ಡಾ.ಗೀತಾಸಂತೋಷ್, ಇನ್ನಿತರರಿದ್ದರು.