ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು
ಹಾಸನ

ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ಜನಪ್ರತಿನಿಧಿಗಳು

April 24, 2019

ಹಾಸನ: ಜನಪ್ರತಿನಿಧಿಗಳು ಭವಿಷ್ಯದ ಕುರಿತು ಯೋಚಿಸದೆ ಸಮಾ ಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಜವೇನಹಳ್ಳಿ ಮಠದ ಸಂಗಮೇ ಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಜವೇನಹಳ್ಳಿ ಕೆರೆ ಏರಿಯ ಮೇಲೆ ನಿರ್ಮಿಸಿರುವ ವಿಶ್ರಾಂತಿ ಧಾಮ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ಕಟ್ಟೆಗಳನ್ನು ನಾಶಗೊಳಿಸಿ ಮುಗಿಲೆತ್ತರ ಕಟ್ಟಡ ನಿರ್ಮಿಸುವುದೇ ಅಭಿವೃದ್ಧಿ ಎಂದು ಪ್ರಸ್ತುತ ರಾಜಕಾರಣಿ ಹಾಗೂ ವಿದ್ಯಾ ವಂತರು ಭಾವಿಸಿದ್ದಾರೆ. ಮರಗಳ ನಾಶ ದಿಂದ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಪರಿ ಸರ ಸಂರಕ್ಷಣೆಗಾಗಿ ನೂರಾರು ಸಂಘ ಸಂಸ್ಥೆಗಳು ಸ್ಥಾಪನೆಯಾಗಿ ಜಾಗೃತಿ ಕಾರ್ಯಕ್ರಮ ಹಾಕಿಕೊಂಡರೂ ಬದಲಾ ವಣೆ ಸಾಧ್ಯವಾಗುತ್ತಿಲ್ಲ ಎಂದರು.

ಜವೇನಹಳ್ಳಿ ಕೆರೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸುರೇಶ್ ಮಾತನಾಡಿ, ತಾಪಮಾನ ಏರಿಕೆಯಿಂದ ಜೀವನದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗು ತ್ತಿದೆ. ಜನಸಂಖ್ಯೆ ಹೆಚ್ಚಳವೂ ಸಮಸ್ಯೆಗೆ ಕಾರಣವಾಗಿದೆ. ಆದರೆ ಯುವ ಸಮು ದಾಯ ಪರಿಸರ ರಕ್ಷಣೆಗೆ ಆಸಕ್ತಿ ತೋರು ತ್ತಿಲ್ಲ. ಗಿಡ ಮರ ಬೆಳೆಸಬೇಕು, ನೀರಿನ ಮಿತವ್ಯಯ, ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಎಲ್ಲರಲ್ಲೂ ಜಾಗೃತಿ ಮೂಡ ಬೇಕು ಎಂದರು.

ಸಮಾಜ ಸೇವಕ ಗೋವಿಂದರಾಜ ಶ್ರೇಷ್ಠಿ ಮಾತನಾಡಿ, ಉತ್ತಮ ಕೆಲಸಕ್ಕೆ ಯಶಸ್ಸು ಸಿಗುತ್ತದೆ. ಕೆರೆ ಉಳಿಸುವ ಮೂಲಕ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡೋಣ ಎಂದರು.

ಸಮಾಜ ಸೇವಕ ಡಾ.ಗುರುರಾಜ ಹೆಬ್ಬಾರ್ ಮಾತನಾಡಿ, ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಅಧಿಕ ಪ್ರಯಾಸ ಪಡುವ ಸಾಧ್ಯತೆ ಇದ್ದು, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ ಮೂಲಕ ಭವಿಷ್ಯದ ಪೀಳಿಗೆಗೆ ಅನುಕೂಲ ಮಾಡಿ ಕೊಡ ಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಗೌರವಾಧ್ಯಕ್ಷ ಆರ್.ಪಿ.ವೆಂಕ ಟೇಶ್ ಮೂರ್ತಿ, ಒಕ್ಕಲಿಗರ ಸಂಘದ ಜಿಲ್ಲಾ ಧ್ಯಕ್ಷ ಜಿ.ಎಲ್.ಮುದ್ದೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಗಣ ಪತಿ ಸೇವಾ ಸಮಿತಿ ಉಪಾಧ್ಯಕ್ಷ ಕಸ್ತೂರಿ ರಂಗಾಚಾರ್, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ.ಸಾವಿತ್ರಿ ಇದ್ದರು.

Translate »