ರಂಗಭೂಮಿ ಕಲೆ ಮೈಗೂಡಿಸಿಕೊಳ್ಳಲು ಸಲಹೆ
ಹಾಸನ

ರಂಗಭೂಮಿ ಕಲೆ ಮೈಗೂಡಿಸಿಕೊಳ್ಳಲು ಸಲಹೆ

April 24, 2019

ಆಲೂರು: ಚಿಕ್ಕ ವಯಸ್ಸಿನಲ್ಲಿಯೇ ರಂಗ ಭೂಮಿ ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಂಡರೆ ಸಭಾಕಂಪನ ಹೋಗುವುದರ ಜೊತೆಗೆ, ಮಾತಿನ ಶೈಲಿ, ಭಾಷಾ ಬಳಕೆಯ ನಿಖರತೆ ಬೆಳೆಯು ತ್ತದೆ ಎಂದು ಖ್ಯಾತ ರಂಗಭೂಮಿ ಕಲಾವಿದ ಡಾ.ಯಲ ಗುಂದ ಶಾಂತಕುಮಾರ್ ಹೇಳಿದರು.

ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ 3ನೇ ದಿನದ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ರಂಗಭೂಮಿ ಕಲೆಯ ಅಳವಡಿಕೆ ಎಂಬ ವಿಷಯದಡಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಿ ಮಾತನಾಡಿದ ಅವರು, ನಾಟಕಗಳಿಂದ ಸತ್ಯ, ನ್ಯಾಯ, ನೀತಿ ಮುಂತಾದ ಮಾನವೀಯ ಮೌಲ್ಯ ಗಳು ಬೆಳೆಯುತ್ತವೆ ಎಂದರು. ಸತ್ಯ ಹರಿಶ್ಚಂದ್ರ, ಸಂಪೂರ್ಣ ರಾಮಾಯಣ, ಕುರುಕ್ಷೇತ್ರ, ಶನಿದೇವರ ಮಹಾತ್ಮೆ, ರಾಜಾ ಸತ್ಯವ್ರತ ಮುಂತಾದ ನಾಟಕಗಳಲ್ಲಿ ಬದುಕಿಗೆ ಬೇಕಾದ ಮಹತ್ವದ ಮಾರ್ಗದರ್ಶನಗಳು ದೊರೆಯು ತ್ತವೆ. ಬೇಸಿಗೆ ಶಿಬಿರದಲ್ಲಿ ರಂಗಭೂಮಿಯಂತಹ ಪ್ರಮುಖ ವಿಷಯದಡಿ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಸತ್ಯ ಹರಿಶ್ಚಂದ್ರ ಎಂಬ ಒಂದು ನಾಟಕದಿಂದ ಗಾಂಧೀಜಿಯ ಜೀವನ ಬದಲಾಯಿತು. ಇಂತಹ ಸಾವಿರಾರು ಜನರ ಬದುಕನ್ನು ರಂಗಭೂಮಿಕೆ ಹಸನು ಮಾಡಿದೆ ಎಂದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ನಿಂಗೇಗೌಡ, ಹಿರಿಯ ರಂಗ ಭೂಮಿ ಕಲಾವಿದ ಟಿ.ಕೆ.ಕುಮಾರಸ್ವಾಮಿ ಸೇರಿದಂತೆ ಮುಂತಾದವರು ಹಾಜರಿದ್ದರು.

Translate »